ಭೋಪಾಲ್: ಹೊಸ ಕಟ್ಟಡ ಕಟ್ಟಲು ಅನುಮತಿ ಬೇಕಾದರೆ ಒಂದು ಸಸಿ ನೆಡುವುದು ಕಡ್ಡಾಯ ಎಂದು ಮಧ್ಯಪ್ರದೇಶ ಸರ್ಕಾರ ಹೇಳಿದೆ.
ನಿನ್ನೆ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಆನ್​​ಲೈನ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಇನ್ಮುಂದೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಲು ಗಿಡ ನೆಡುವುದು ಕಡ್ಡಾಯ. ಪ್ರತಿ ಮನೆ ಅಥವಾ ಉದ್ಯಾನವನಗಳು, ಶಾಲೆಗಳು, ಪಂಚಾಯತ್ ಭವನಗಳ ಬಳಿ ಮರ ಬೆಳೆಸಬೇಕು ಎಂದು ಹೇಳಿದ್ದಾರೆ.
ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಲಾಗಿದ್ದರೂ ಈ ಷರತ್ತು ಕಡ್ಡಾಯವಾಗಿರುತ್ತದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

The post ‘ಇನ್ಮುಂದೆ ಕಟ್ಟಡ ಕಟ್ಟಲು ಅನುಮತಿ ಬೇಕಾದ್ರೆ, ಗಿಡ ನೆಡಿ’ -ಮಧ್ಯಪ್ರದೇಶ ಸಿಎಂ appeared first on News First Kannada.

Source: newsfirstlive.com

Source link