ಬೆಂಗಳೂರು:  ಇನ್ನುಮುಂದೆ ಪ್ರತಿದಿನ ಹೆಲ್ತ್ ಬುಲೆಟಿನ್ ಮಾದರಿಯಲ್ಲಿ ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಕೋವಿಡ್ ಚಿಕಿತ್ಸೆಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಒಟ್ಟು ಬೆಡ್ ಗಳ ಕುರಿತು ಬುಲೆಟಿನ್ ಪ್ರಕಟಿಸುವುದಾಗಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರಿನ ಆರೋಗ್ಯಸೌಧ ದಲ್ಲಿ ಇರುವ ಕರ್ನಾಟಕ ವಾರ್ ರೂಮಿಗೆ (ಬೆಂಗಳೂರು ಹೊರತುಪಡಿಸಿ) ಭೇಟಿ ನೀಡಿ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಅವರು ಈ ವಿಷಯ ತಿಳಿಸಿದ್ದಾರೆ.

ಕೋವಿಡ್ ಸೋಂಕಿತರಿಗೆ ಸಮರ್ಪಕವಾಗಿ ಹಾಸಿಗೆ ಲಭ್ಯವಾಗುತ್ತಿಲ್ಲ. ಹಾಸಿಗೆ ನೀಡುವ ವಿಚಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಸವರಾಜ್ ಬೊಮ್ಮಾಯಿ ಮತ್ತು ಆರ್ ಅಶೋಕ್ ನೇತೃತ್ವದಲ್ಲಿ ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಂಡವನ್ನು ರಚನೆ ಮಾಡಿದ್ದಾರೆ.

ಅದರ ಭಾಗವಾಗಿ ಬುಧವಾರ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ಹಾಸಿಗೆ ಲಭ್ಯತೆ, ಬಳಕೆಯಾಗಿರುವ ಬೆಡ್ ಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಕೋವಿಡ್ ವಾರ್ ರೂಂ ಗೆ ಸಚಿವರಾದ ಬೊಮ್ಮಾಯಿ, ಆರ್ ಅಶೋಕ್ ಮತ್ತು ವಾರ್ ರೂಂ ಮುಖ್ಯಸ್ಥ ಅರವಿಂದ್ ಲಿಂಬಾವಳಿ ಸಭೆ ನಡೆಸಿದರು.

The post ಇನ್ಮುಂದೆ ಪ್ರತಿದಿನ ಕೋವಿಡ್ ಖಾಲಿ ಬೆಡ್​ಗಳ ಅಂಕಿ-ಅಂಶ ಬಿಡುಗಡೆ ಮಾಡ್ತೀವಿ: ಬೊಮ್ಮಾಯಿ appeared first on News First Kannada.

Source: newsfirstlive.com

Source link