ಬೆಂಗಳೂರು: ಮಹಾರಾಷ್ಟ್ರದಲ್ಲಿ ಡೆಲ್ಟಾ ಪ್ಲಸ್​ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಸರ್ಕಾರ ಹೊಸ ಮಾರ್ಗಸೂಚಿಯನ್ನ ಪ್ರಕಟ ಮಾಡಿದೆ.

ಮಾರ್ಗ ಸೂಚಿಯಲ್ಲಿ ಏನಿದೆ?

  1. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬಂದರೆ RTPCR ಟೆಸ್ಟ್ ಕಡ್ಡಾಯ
  2. ಕೊರೊನಾ ಟೆಸ್ಟ್​​ನಲ್ಲಿ ನೆಗೆಟಿವ್ ಬಂದ್ರೆ ಮಾತ್ರ ರಾಜ್ಯಕ್ಕೆ ಎಂಟ್ರಿ
  3. ಗೂಡ್ಸ್ ವಾಹನ, ಕಾರ್, ಬಸ್, ರೈಲು ಮೂಲಕ ಬಂದರೂ ಟೆಸ್ಟ್ ಕಡ್ಡಾಯ
  4. ಗಡಿಗಳ ಚೆಕ್​ಪೋಸ್ಟ್​ಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳುವಂತೆ ಆದೇಶ
  5. ಮೊದಲ ಕೊರೊನಾ ವ್ಯಾಕ್ಸಿನ್ ಡೋಸ್ ಪಡೆದವರಿಗೆ ವಿನಾಯಿತಿ
  6. ವ್ಯಾಕ್ಸಿನ್ ಪಡೆಯದಿದ್ರೆ ಕಡ್ಡಾಯವಾಗಿ ಕೊರೊನಾ ಟೆಸ್ಟ್  ನೆಗೆಟಿವ್ ಸರ್ಟಿಫಿಕೇಟ್ ಇರಬೇಕು
  7. ರೈಲಿನಲ್ಲಿ ಬಂದ್ರೆ ರೈಲು ನಿರ್ವಾಹಕ ಅಥವಾ ಬಸ್​ನಲ್ಲಿ ಬಂದ್ರೆ ಬಸ್ ನಿರ್ವಾಹಕನ ಜವಾಬ್ದಾರಿ
  8. ಖಾಸಗಿ ವಾಹನಗಳಲ್ಲಿ ಬಂದ್ರೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಲಾಗಿದೆ

The post ಇನ್ಮುಂದೆ ಮಹಾರಾಷ್ಟ್ರದಿಂದ ಬೇಕಾಬಿಟ್ಟಿ ಬರೋ ಹಾಗಿಲ್ಲ.. ಏನ್ ಹೇಳ್ತಿದೆ ಹೊಸ ಗೈಡ್​ಲೈನ್ಸ್​..? appeared first on News First Kannada.

Source: newsfirstlive.com

Source link