ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡವು ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ ಹಾಗೂ ಕೀರನ್ ಪೊಲಾರ್ಡ್ ಅವರನ್ನು ಉಳಿಸಿಕೊಂಡಿದೆ. ಆದರೆ, ತಂಡದ ಪ್ರಮುಖ ಆಟಗಾರ ಆಲ್ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಕೈಬಿಟ್ಟಿದೆ. ಈ ಸಂಬಂಧ ಮಾತಾಡಿರುವ ಹಾರ್ದಿಕ್ ಪಾಂಡ್ಯ, ಇನ್ಮುಂದೆ ಎಂದು ಮುಂಬೈ ತಂಡದ ಪರ ಆಡೋದಿಲ್ಲ ಎಂಬ ಸುಳಿವು ನೀಡಿದ್ದಾರೆ.
ನಾನು ಮುಂಬೈ ಜೊತೆಗೆ ಆಡಿದ ನೆನಪುಗಳನ್ನು ನನ್ನ ಜೀವನದುದ್ದಕ್ಕೂ ಕೊಂಡೊಯ್ಯುತ್ತೇನೆ. ಎಲ್ಲಾ ನೆನಪುಗಳು ನನ್ನೊಂದಿಗೆ ಇರಲಿವೆ. ಮುಂಬೈ ತಂಡದಲ್ಲಿ ಆಟಗಾರನಾಗಿ ಮಾತ್ರವಲ್ಲದೆ ವ್ಯಕ್ತಿಯಾಗಿಯೂ ಬೆಳೆದಿದ್ದೇನೆ. ಇಂದಿಗೆ ಮುಂಬೈ ಜೊತೆಗಿನ ಒಡನಾಟ ಕೊನೆಗೊಂಡಿದೆ ಎಂದಿದ್ದಾರೆ.