ನಮ್ಮ ಜನ, ಸಂಜೆ ಆಯ್ತು ಅಂದ್ರೆ ಸಾಕು ಟಿವಿ ಮುಂದೆ ರಿಮೋಟ್ ಗಟ್ಟಿಗೆ ಕೈಯಲ್ಲಿ ಹಿಡಿದು ಕೂತ್​ಬಿಡ್ತಾರೆ. ಕಾರಣ, ಅವರ ನೆಚ್ಚಿನ ಸೀರಿಯಲ್​ ಬರುತ್ತೆ, ಅದನ್ನ ನೋಡ್ದೇ ಇರೋದಕ್ಕೆ ಆಗಲ್ಲ ಅನ್ನೋ ಮನಸ್ಥತಿ ಅದೆಷ್ಟೋ ಜನರಿಗೆ ಇದೆ. ಅಂಥ, ಸೀರಿಯಲ್​ ಲಿಸ್ಟ್​ನಲ್ಲಿ ಸೇರೋದು ಮಾಯಾಮೃಗ ಅನ್ನೋ ಸೀರಿಯಲ್​.

ಬಹುಶಃ 90ರ ದಶಕದ ಮಕ್ಕಳಿಗೆ ತುಂಬಾ ಇಷ್ಟವಾಗೋ  ಸೀರಿಯಲ್​ನಲ್ಲಿ ಮಾಯಾಮೃಗ ಕೂಡ ಒಂದು. ಇದೀಗ, ಇದೇ ಧಾರವಾಹಿಯ ಪ್ರೊಡಕ್ಷನ್​ ಹೌಸ್​ ಹೊಸದೊಂದು ಸುದ್ದಿಯನ್ನ ಕೊಟ್ಟಿದೆ.

ಹೌದು. ಮಾಯಾಮೃಗ ಸೀರಿಯಲ್​ ಇನ್ಮುಂದೆ ಯೂಟ್ಯೂಬ್​ನಲ್ಲಿ ವೆಬ್​ ಸೀರೀಸ್​ ರೀತಿ ಬಿಡುಗಡೆ ಮಡೋದಕ್ಕೆ ಸೀರಿಯ್​ ತಂಡ ಭೂಮಿಕ ಟಾಕೀಸ್​ ನಿರ್ಧರಿಸಿದೆ.  ಯಾರೆಲ್ಲಾ ಈ ಸೀರಿಯಲ್​ನ ಮಿಸ್​ ಮಾಡಿಕೊಂಡಿದ್ರೋ, ಅಂಥವರಿಗೆಲ್ಲಾ, ಇದು ಖುಷಿ ವಿಚಾರ ಅಂದ್ರೂ ತಪ್ಪಾಗೋದಿಲ್ಲ.

The post ಇನ್ಮುಂದೆ, ಯೂಟ್ಯೂಬ್​ನಲ್ಲಿ ಬರಲಿದೆ ಎಲ್ಲರ ನೆಚ್ಚಿನ ‘ಮಾಯಾಮೃಗ’ appeared first on News First Kannada.

Source: newsfirstlive.com

Source link