ಇನ್ಮುಂದೆ ವೀಕೆಂಡ್​​ ಕರ್ಫ್ಯೂ ವೇಳೆ 30 ನಿಮಿಷಕ್ಕೊಂದು ಮೆಟ್ರೋ.. BMRCL ಆದೇಶ


ಬೆಂಗಳೂರು: ರಾಜ್ಯದಲ್ಲಿ ಮಾರಕ ಕೊರೊನಾ ವೈರಸ್​​ ಆರ್ಭಟ ಮುಂದುವರಿದಿದೆ. ಈ ಕೊರೊನಾ ತಡೆಗೆ ಸಿಎಂ ಬಸವರಾಜ್​​ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ವೀಕೆಂಡ್​​ ಕರ್ಫ್ಯೂ ಜಾರಿಗೊಳಿಸಿದೆ. ಹೀಗಾಗಿ ಶುಕ್ರವಾರ ಸಂಜೆಯಿಂದ ಸೋಮವಾರ ಬೆಳಿಗ್ಗೆವರೆಗೂ ಇಡೀ ರಾಜ್ಯದಲ್ಲಿ ಜನ ಸಂಚಾರವೇ ಬಹಳ ಕಡಿಮೆ. ಆದ್ದರಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವೂ (BMRCL) ಈಗ ಹೊಸ ಆದೇಶವೊಂದು ಹೊರಡಿಸಿದೆ.

ಈ ಮುನ್ನ 20 ನಿಮಿಷಕ್ಕೊಂದು ಮೆಟ್ರೋ ಟ್ರೈನ್​​ ಇತ್ತು. ಈಗ ಪ್ರಯಾಣಿಕರು ಇಲ್ಲದ ಕಾರಣ 30 ನಿಮಿಷಕ್ಕೊಂದು ಮೆಟ್ರೋ ಇರಲಿದೆ ಎಂದು BMRCL ಹೊರಡಿಸಿದ ಆದೇಶದ ಪ್ರತಿಯಲ್ಲಿದೆ.

News First Live Kannada


Leave a Reply

Your email address will not be published. Required fields are marked *