ಇನ್​ಸ್ಟಾಗ್ರಾಂ ಲೈವ್​ ಬರಲು ಮುಂದಾದ ಮಡೋನ್ನಗೆ ಶಾಕ್; ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದ ಪಾಪ್ ತಾರೆಗೆ ನಿರ್ಬಂಧದ ಬರೆ | Queen of Pop Madonna banned from Instagram live for violating community guidelines watch video


ಇನ್​ಸ್ಟಾಗ್ರಾಂ ಲೈವ್​ ಬರಲು ಮುಂದಾದ ಮಡೋನ್ನಗೆ ಶಾಕ್; ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದ ಪಾಪ್ ತಾರೆಗೆ ನಿರ್ಬಂಧದ ಬರೆ

ಪಾಪ್ ತಾರೆ ಮಡೋನ್ನ (ಸಂಗ್ರಹ ಚಿತ್ರ)

Madonna | Instagram Live: ಫೋಟೋ ಹಾಗೂ ವಿಡಿಯೋ ಹಂಚಿಕೊಳ್ಳುವ ಸಾಮಾಜಿಕ ಜಾಲತಾಣವಾಗಿರುವ ಇನ್​ಸ್ಟಾಗ್ರಾಂನಲ್ಲಿ ಮಡೋನ್ನ ಅವರಿಗೆ ಲೈವ್​ ಆಯ್ಕೆಯನ್ನು ನಿರ್ಬಂಧಿಸಲಾಗಿದೆ. ಇದಕ್ಕೆ ಪಾಪ್ ತಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕ್ವೀನ್ ಆಫ್ ಪಾಪ್’ (Queen Of Pop) ಎಂದೇ ಜನಪ್ರಿಯವಾಗಿರುವ ಪಾಪ್ ತಾರೆ ಮಡೋನ್ನಗೆ (Madonna) ಇನ್​ಸ್ಟಾಗ್ರಾಂ ಲೈವ್​ನಲ್ಲಿ ಕಾಣಿಸಿಕೊಳ್ಳಲು ನಿರ್ಬಂಧ ವಿಧಿಸಲಾಗಿದೆ. 63 ವರ್ಷದ ಮಡೋನ್ನ ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಫೋಟೋ ಹಾಗೂ ವಿಡಿಯೋ ಹಂಚಿಕೊಳ್ಳುವ ಸಾಮಾಜಿಕ ಜಾಲತಾಣವಾಗಿರುವ ಇನ್​ಸ್ಟಾಗ್ರಾಂನಲ್ಲಿ ಅವರಿಗೆ ಲೈವ್​ ಆಯ್ಕೆಯನ್ನು ತೆಗೆದಿರುವುದನ್ನು ತೋರಿಸಲಾಗಿದೆ. ಲೈವ್​ಗೆ ಬರಲು ನಟಿ ಮುಂದಾದ ವೇಳೆಗೆ, ಇನ್​ಸ್ಟಾಗ್ರಾಂ ನಿಯಮಗಳ ಅನ್ವಯ ಲೈವ್​ನಿಂದ ನಿರ್ಬಂಧಿಸಲಾಗಿದೆ ಎಂಬ ಸೂಚನೆಯನ್ನು ಅವರು ಗಮನಿಸಿದ್ದಾರೆ. ಇದನ್ನು ನೋಡಿ ಮಡೋನ್ನ ಶಾಕ್ ಆಗಿದ್ದು, ​‘What the f***? ನಮ್ಮನ್ನು ಲೈವ್​ನಿಂದ ಬ್ಲಾಕ್​ ಮಾಡಿದ್ದಾರೆಯೇ?’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದ್ದು, ಅದನ್ನು ಪಾಪ್​ ತಾರೆಯ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಿಂದ ಹಂಚಿಕೊಳ್ಳಲಾಗಿದೆ.

ಕೆಲ ಸಮಯದ ಹಿಂದೆ ಮಡೋನ್ನ ಲೈವ್​ಗೆ ಬಂದಿದ್ದಾಗ ಕೆಲವು ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಅದನ್ನು ಪ್ರಸ್ತಾಪಿಸಿರುವ ಮಡೋನ್ನಾ, ತಾವೀಗ ಸಂಪೂರ್ಣ ಬಟ್ಟೆ ಧರಿಸಿದ್ದೇನೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಮೆಟಾ ಒಡೆತನದ ಇನ್​ಸ್ಟಾಗ್ರಾಂ ತನ್ನ ಸಮುದಾಯದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಮಡೋನ್ನ ಅವರಿಗೆ ಲೈವ್​ನಲ್ಲಿ ಕಾಣಿಸಿಕೊಳ್ಳಲು ಅನುಮತಿ ನಿರಾಕರಿಸಿದೆ.

ಪಾಪ್​ ತಾರೆಗೆ ನೀಡಿರುವ ಸೂಚನೆಯಲ್ಲಿ ಇನ್​ಸ್ಟಾಗ್ರಾಂ ‘‘ಈ ಜಾಲತಾಣದಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳಿ. ಆದರೆ ನಗ್ನ ಚಿತ್ರಗಳನ್ನು ಹಂಚಿಕೊಳ್ಳಬೇಡಿ. ಜನರು ಮುಕ್ತವಾಗಿ ವ್ಯವಹರಿಸಲು ಸಾಧ್ಯವಾಗುವ ವಾತಾವರಣ ನಿರ್ಮಿಸಲು ಸಹಕರಿಸಿ. ಎಲ್ಲರನ್ನೂ ಗೌರವಿಸಿ’’ ಎಂದು ತಿಳಿಸಿದೆ.

ಈ ಬಗ್ಗೆ ಮಡೋನ್ನ ಹಂಚಿಕೊಂಡ ವಿಡಿಯೋ ಇಲ್ಲಿದೆ:

ಕಳೆದ ವರ್ಷ ಮಡೋನ್ನ ಇನ್​ಸ್ಟಾಗ್ರಾಂ ಸೇರಿದಂತೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅರೆ ನಗ್ನ ಚಿತ್ರಗಳನ್ನು ಹಂಚಿಕೊಂಡಿದ್ದರು. ಅದಕ್ಕೆ ಶೀರ್ಷಿಕೆ ನೀಡಿದ್ದ ಅವರು ಮಹಿಳೆಯರ ಕೆಲವು ಅಂಗಾಂಗಗಳನ್ನು ಲೈಂಗಿಕ ಚಿಹ್ನೆಗಳಾಗಿ ಬಳಸುವುದನ್ನು ತೀವ್ರವಾಗಿ ವಿರೋಧಿಸಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣಗಳಂತಹ ವೇದಿಕೆಗಳು ಅಂತಹ ಮನಸ್ಥಿತಿಗಳಿಗೆ ಇಂಬು ಕೊಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಅವರು ಪುರುಷರು ಹಾಗೂ ಮಹಿಳೆಯರ ನಡುವೆ ತಾರತಮ್ಯ ಮಾಡುವುದನ್ನು ಖಂಡಿಸಿದ್ದರು. ಆ ಪೋಸ್ಟ್ ವೈರಲ್ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

TV9 Kannada


Leave a Reply

Your email address will not be published. Required fields are marked *