ಶಿವಮೊಗ್ಗ: ಇಬ್ಬರು ಮನೆಗಳ್ಳರನ್ನು ಬಂಧಸಿ ಹಣ ಮತ್ತು ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮಹಮದ್ ಶಾಬಾಜ್ (19), ಆದಿಲ್ (20) ಬಂಧಿತ ಆರೋಪಿಗಳಾಗಿದ್ದಾರೆ. ಶಿವಮೊಗ್ಗದ ಕೋಟೆ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಮಾಡುತ್ತಿದ್ದ   ಇವರನ್ನು ಬಂಧಿಸಿದ್ದಾರೆ.

ಮೇ.25 ರಂದು ನಗರದ ಸೋಮಯ್ಯ ಲೇಔಟ್‍ನ ನಿವಾಸಿ ಶಿಕ್ಷಣ ಇಲಾಖೆಯ ನೌಕರ ಪ್ರಭಾಕರ್ ಎಂಬುವರ ಮನೆಯ ಬೀಗ ಒಡೆದು ಮನೆಯಲ್ಲಿದ್ದ 196 ಗ್ರಾಂ ಚಿನ್ನಾಭರಣ ಹಾಗೂ 80 ಸಾವಿರ ನಗದು ದೋಚಿ ಪರಾರಿಯಾಗಿದ್ದರು. ಕೋವಿಡ್ ಲಾಕ್‍ಡೌನ್ ಇದ್ದ ಪರಿಣಾಮ ಮನೆಯವರೆಲ್ಲಾ ಊರಿಗೆ ತೆರಳಿದ್ದರು ಈ ವೇಳೆ ಖದೀಮರು ಕಳ್ಳತನ ನಡೆಸಿದ್ದರು. ಘಟನೆ ಸಂಬಂಧ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಕೇವಲ 15 ದಿನದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ 112 ಗ್ರಾಂ ಚಿನ್ನಾಭರಣ, 24 ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

The post ಇಬ್ಬರು ಮನೆಗಳ್ಳರ ಬಂಧನ- ಭಾರೀ ಪ್ರಮಾಣ ಚಿನ್ನಾಭರಣ, ನಗದು ವಶ appeared first on Public TV.

Source: publictv.in

Source link