ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣ: ಶಂಕಿತ ಉಗ್ರ ಜುಬಾ ಜತೆ ಸಂಪರ್ಕದಲ್ಲಿದ್ದ ಮತ್ತೋರ್ವ ವಶಕ್ಕೆ | Arrest case of two suspected terrorists: Another arrested in connection with suspected terrorist Juba


ಕೇಸ್ ಸಂಬಂಧ ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ಸಿಸಿಬಿ ಪೊಲೀಸರು ಸತತ ನಾಲ್ಕು ದಿನ ಕಾರ್ಯಚರಣೆ ನಡೆಸಿ ಕೋಲ್ಕತ್ತಾದ ಅಬು ಸೈಯದ್​ನನ್ನು ಬಂಧಿಸಲಾಗಿದೆ.

ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣ: ಶಂಕಿತ ಉಗ್ರ ಜುಬಾ ಜತೆ ಸಂಪರ್ಕದಲ್ಲಿದ್ದ ಮತ್ತೋರ್ವ ವಶಕ್ಕೆ

ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಸಿಸಿಬಿಯಿಂದ ಇಬ್ಬರು ಶಂಕಿತ ಉಗ್ರರ (Terrorist) ಬಂಧನ ಪ್ರಕರಣ ಸಂಬಂಧ ಶಂಕಿತ ಉಗ್ರ ಜುಬಾ ಜತೆ ಸಂಪರ್ಕದಲ್ಲಿದ್ದ ಮತ್ತೋರ್ವನನ್ನು ಸಿಸಿಬಿ ವಶಕ್ಕೆ ಪಡೆದಿದೆ. ಕೋಲ್ಕತ್ತಾದ ಅಬು ಸೈಯದ್​ ಬಂಧಿತ ಆರೋಪಿ. ಕೇಸ್ ಸಂಬಂಧ ಪಶ್ಚಿಮ ಬಂಗಾಳದ ಕಲ್ಕತ್ತಾದಲ್ಲಿ ಸಿಸಿಬಿ ಪೊಲೀಸರು ಸತತ ನಾಲ್ಕು ದಿನ ಕಾರ್ಯಚರಣೆ ನಡೆಸಿ ಕೋಲ್ಕತ್ತಾದ ಅಬು ಸೈಯದ್​ನನ್ನು ಬಂಧಿಸಲಾಗಿದೆ. ಸದ್ಯ ಸಿಸಿಬಿ ವಿಚಾರಣೆ ನಡೆಸುತ್ತಿದ್ದು, ಅದಿಲ್ ಜುಬಾ ಜೊತೆಗೆ ಅಬು ಸೈಯದ್ ಸಂಪರ್ಕ ಇದ್ದು, ಅದಿಲ್ ಜುಬಾಗೆ ಮೊದಲಿನಿಂದ ಪರಿಚಿತ ಆಗಿದ್ದ. ಜೊತೆಗೆ ಅಲ್ ಖೈದಾ ಉಗ್ರರು ಇದ್ದ ಟೆಲಿಗ್ರಾಮ್ ಗ್ರೂಪ್​ನಲ್ಲಿ ಸದಸ್ಯನಾಗಿದ್ದ. ಗ್ರೂಪ್​​ನ ಎಲ್ಲಾ ಏಳು ಅಕೌಂಟ್​ಗಳನ್ನು ಸಿಸಿಬಿ ಪರಿಶೀಲನೆ ನಡೆಸಿದ್ದು, ಏಳರ ಪೈಕಿ ಒಂದು ಜುಬಾ ಇನ್ನೊಂದು ಈ ಅಬು ಸೈಯದ್, ಉಳಿದ ಐದು ಅಕೌಂಟ್​ಗಳು ಅಲ್ ಖೈದಾಗೆ ಸೇರಿದ್ದ ಹ್ಯಾಂಡರ್ಲ್ಸ್​ಗಳದ್ದು ಎಂಬುದು ಪತ್ತೆಯಾಗಿದೆ.

TV9 Kannada


Leave a Reply

Your email address will not be published. Required fields are marked *