ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಬಿಸಿ ಇನ್ನೂ ತಣ್ಣಗೆ ಆಗಿಲ್ಲ. ಇದೆಲ್ಲವನ್ನೂ ಸದ್ಯಕ್ಕೆ ಬದಿಗಿಟ್ಟು, ತಮ್ಮ ಮುಂದಿರುವ ಸವಾಲನ್ನ ಪರಿಣಾಮಕಾರಿಯಾಗಿ ಎದುರಿಸುವ ಗುರಿ ಸಿಎಂ ಮತ್ತು ಹೈಕಮಾಂಡ್​ ನಾಯಕರದ್ದಾಗಿದೆ. ಅದರಂತೆ ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಈ ಕಾರ್ಯಕ್ರಮ ಆಯೋಜನೆ ಮಾಡುವ ವಿಚಾರದಲ್ಲಿ ಇಬ್ಬರು ಸಚಿವರ ನಡುವೆ ನಾನಾ? ನೀನಾ? ಎನ್ನುವಷ್ಟರ ಮಟ್ಟಿಗೆ ಪೈಪೋಟಿ ನಡೆದಿದೆ.

Image

ಹೌದು.. ಇಂದಿನ ಯೋಗ ದಿನಾಚರಣೆಗೆ ಸ್ಥಳ ನಿಗದಿ ಮಾಡುವ ವಿಚಾರದಲ್ಲಿ ಪ್ರತಿಷ್ಠೆಯ ಪೈಪೋಟಿ ನಡೆದಿದೆ ಅನ್ನೋದು ಸದ್ಯ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಚರ್ಚೆ ವಿಚಾರ. ಪ್ರತಿ ವರ್ಷ ಒಂದೇ ಕಡೆ ಯೋಗ ದಿನಾಚರಣೆ ನಡೆಯುತ್ತಿತ್ತು. ಆದರೆ ಈ ವರ್ಷ ಇಬ್ಬರು ಪ್ರಭಾವಿ ಸಚಿವರ ಪ್ರತಿಷ್ಠೆಯಿಂದಾಗಿ 2 ಕಡೆ ಯೋಗ ದಿನಾಚರಣೆ ನಡೆದಿದೆ.

Image

ಆ ಸಚಿವರುಗಳು ಬೇರೆ ಯಾರೂ ಅಲ್ಲ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಮತ್ತು ಆರೋಗ್ಯ ಸಚಿವ ಡಾ.ಕೆ ಸುಧಾಕರ್. ಮುಖ್ಯಮಂತ್ರಿಗಳ ಮನೆಯಲ್ಲಿ ‘ಸರಳ ಯೋಗ ದಿನಾಚರಣೆ’ಗೆ ಆರೋಗ್ಯ ಸಚಿವ ಸುಧಾಕರ್ ಒಲವು ತೋರಿದ್ರೆ, ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ಮಾಡಲು DCM ಅಶ್ವಥ್ ನಾರಾಯಣ್ ಸರಣಿ ಸಭೆಗಳನ್ನೇ ಆಯೋಜಿಸಿದ್ದರು!

Image

ನಾನಾ? ನೀನಾ?
ಇವತ್ತಿನ ಯೋಗ ದಿನಾಚರಣೆಯು ಡಿಸಿಎಂ ಅಶ್ವಥ್ ನಾರಾಯಣ್ VS ಆರೋಗ್ಯ ಸಚಿವ ಸುಧಾಕರ್ ಎಂಬಂತಾಗಿತ್ತು. ಇಂದು ನಡೆದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಹಲವು ಮಠಾಧೀಶರ ಸಮ್ಮುಖದಲ್ಲಿ, ಕಂಠೀರವ ಕ್ರೀಡಾಂಗಣದಲ್ಲಿ ಯೋಗ ದಿನಾಚರಣೆ ಅಶ್ವಥ್ ನಾರಾಯಣ್ ಆಚರಿಸಿಯೇ ಬಿಟ್ಟರು. ಇತ್ತ ಸಿಎಂ ಬಿಎಸ್​ ಯಡಿಯೂರಪ್ಪ CM ನಿವಾಸ ಕಾವೇರಿಯಲ್ಲಿ ಸರಳ ಯೋಗ ದಿನಾಚರಣೆ ಆಚರಿಸಿದರು. ಪೈಪೋಟಿಯ ನಡುವೆಯೂ ತಾವು ಅಂದುಕೊಂಡಿದ್ದನ್ನು ಇಬ್ಬರೂ ಸಚಿವರು ಸಾಧಿಸಿಕೊಂಡಿದ್ದಾರೆ.

Image

ಯಾಕೆ ಪ್ರತಿಷ್ಠೆ?
ಯೋಗ ದಿನಾಚರಣೆ ಕಾರ್ಯಕ್ರಮದ ಸ್ಥಳ ವಿಚಾರ ಕುರಿತಂತೆ ಇಬ್ಬರ ಮಧ್ಯೆ ಪ್ರತಿಷ್ಠೆ ಉಂಟಾಗಿದೆ. ಈ ವಿಚಾರ ಸಿಎಂ ಬಿಎಸ್​ ಯಡಿಯೂರಪ್ಪವರೆಗೂ ಪ್ರತಿಷ್ಠೆಯ ವಿಚಾರ ಹೋಗಿತ್ತು ಅಂತಾ ಹೇಳಲಾಗಿದೆ. ಅದೇ ಕಾರಣಕ್ಕೆ ಆರೋಗ್ಯ ಇಲಾಖೆಯ ವತಿಯಿಂದ CM ಜೊತೆ ಕಾವೇರಿಯಲ್ಲಿ ಯೋಗ ದಿನವನ್ನ ಆರೋಗ್ಯ ಸಚಿವರು ಆಚರಿಸಿದರು. ಕ್ರೀಡಾ ಇಲಾಖೆ ಹಾಗೂ ಆಯುಷ್ಯ ಉನ್ನತ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ DCM ಅಶ್ವಥ್ ನಾರಾಯಣ್ ಆಚರಿಸಿದರು. ವಿವಿಧ ಮಠಾಧೀಶರು, ಕ್ರೀಡಾ ಸಚಿವರ ಜೊತೆ ಅಶ್ವಥ್ ನಾರಾಯಣ್ ಯೋಗ ದಿನಾಚರಣೆಯನ್ನ ಮಾಡಿದ್ದಾರೆ. ಇನ್ನೊಂದು ವಿಚಾರ ಏನಂದ್ರೆ ಯೋಗ ದಿನಾಚರಣೆ ವಿಚಾರದಲ್ಲಿ ಸಚಿವರ ಪೈಪೋಟಿ ಸಿಎಂಗೆ ಗೊತ್ತಿದ್ದರೂ ಸುಮ್ಮನೆ ಆಗಿದ್ದಾರೆ ಎನ್ನಲಾಗಿದೆ.

Image

The post ಇಬ್ಬರು ಸಚಿವರ ಮಧ್ಯೆ ‘ಯೋಗ’ಕ್ಕಾಗಿ ಪ್ರತಿಷ್ಠೆ; ಕೊನೆಗೂ ಸಿಎಂ ಮುಂದೆ ಹಠ ಸಾಧಿಸಿಯೇ ಬಿಟ್ಟರು appeared first on News First Kannada.

Source: newsfirstlive.com

Source link