ಸ್ಯಾಂಡಲ್​​ವುಡ್ ನಟ ಅರಸು ಅವರು ತಮ್ಮ ಸಿನಿ ಜರ್ನಿಯ ಬಗ್ಗೆ ಫಸ್ಟ್​​ ನ್ಯೂಸ್​​ನೊಂದಿಗೆ ಮಾತನಾಡಿದ್ದು, ಸಿನಿಮಾ ಕ್ಷೇತ್ರದಲ್ಲಿ ಕಂಡ ಅವಮಾನಗಳು ಹಾಗೂ ಸಿಕ್ಕ ಅವಕಾಶಗಳ ಬಗ್ಗೆ ತಿಳಿಸಿದ್ದಾರೆ.

ಚಿತ್ರರಂಗದಲ್ಲಿ ಏಳು-ಬೀಳು ಎಲ್ಲರಿಗೂ ಸಾಮಾನ್ಯ. ಅವಮಾನ ಎಷ್ಟು ಮಾಡಿದರೂ ಅಷ್ಟೇ ಸನ್ಮಾನನೂ ಆಗುತ್ತೆ. ಆದರೆ ನಾವು ಅವುಗಳನ್ನು ಸರಿದೂಗಿಸಿಕೊಂಡು ಹೋಗಬೇಕು. ಯಾವುದೋ ಕಾರಣಕ್ಕೆ ಚಿತ್ರದ ಶೂಟಿಂಗ್​ಗೆ ಹೋಗಲು ಆಗದಿದ್ದರೇ ದುರಹಂಕಾರ ಅಂತಾರೇ. ಅದನ್ನು ನಾವು ಏನೂ ಮಾಡಲು ಆಗೋದಿಲ್ಲ.

ಸಿನಿಮಾದಲ್ಲಿ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಊಟ, ಹಣ ಕೂಡ ಇಲ್ಲದೇ ಸಿನಿಮಾ ಮಾಡಿದ್ದೀವಿ. ಉಪ್ಪಿ ಸರ್.. ಹಾಗೂ ಶಿವಣ್ಣ ಅವರ ಲವಕುಶ ಸಿನಿಮಾ ಶೂಟಿಂಗ್​​ ಸಂದರ್ಭದಲ್ಲಿಯೂ ಇದೇ ರೀತಿ ಆಗಿತ್ತು. ಆಗ ಒಂದು ದಿನ ಸಿನಿಮಾದಲ್ಲಿ ಕೆಲಸ ಮಾಡಬೇಕು ಅಂತಾನೇ ನಾವೇ ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್​ನಲ್ಲಿ ಭಾಗಿಯಾಗಿದ್ವಿ, ಹಲವು ಕರೆ ಇದೇ ರೀತಿ ಆಗಿದೆ. ಆದರೆ ಸಿನಿಮಾ ನನಗೆ ಸಾಕಷ್ಟು ಕಲಿಸಿಕೊಟ್ಟಿದೆ ಎಂದು ಹೇಳಿದ್ದಾರೆ.

The post ಇಬ್ರು ಸ್ಟಾರ್​ ನಟರ ಚಿತ್ರದಲ್ಲೇ ಊಟಾನೂ ಸಿಕ್ಕಿಲ್ಲ – ನಟ ಅರಸು appeared first on News First Kannada.

Source: newsfirstlive.com

Source link