ಇಮ್ರಾನ್ ಖಾನ್​​ನ್ನು ಮಾತ್ರ ಕೊಲ್ಲಲು ಬಂದಿದ್ದೆ: ಪಾಕ್ ಶೂಟರ್ ಹೇಳಿಕೆ – I came only to kill Imran Khan Pakistan Shooter Says On Camera


ಸಿರ್ಫ್ ಇಮ್ರಾನ್ ಖಾನ್ ಕೋ ಮಾರ್ ಥಾ (ನಾನು ಇಮ್ರಾನ್ ಖಾನ್ ಅವರನ್ನು ಮಾತ್ರ ಕೊಲ್ಲಲು ಬಂದಿದ್ದೇನೆ)” ಎಂದು ಆರೋಪಿ ಶೂಟರ್ ಕ್ಯಾಮೆರಾ ಮುಂದೆ ಹೇಳಿದ್ದಾನೆ

ಇಂದು ಸಂಜೆ (ಗುರವಾರ)ರ್ಯಾಲಿಯಲ್ಲಿ ಇಮ್ರಾನ್ ಖಾನ್ (Imran khan) ಮೇಲೆ ಗುಂಡು ಹಾರಿಸಿದ ವ್ಯಕ್ತಿ, ಪಾಕಿಸ್ತಾನದ ಮಾಜಿ ಪ್ರಧಾನಿಯನ್ನು ಕೊಲ್ಲಲು ಬಂದಿದ್ದೇನೆ ಏಕೆಂದರೆ ಅವರು ಜನರನ್ನು ಹಾದಿ ತಪ್ಪಿಸಿದ್ದಾರೆ ಎಂದು ಹೇಳಿದ್ದಾನೆ. ಸಿರ್ಫ್ ಇಮ್ರಾನ್ ಖಾನ್ ಕೋ ಮಾರ್ ಥಾ (ನಾನು ಇಮ್ರಾನ್ ಖಾನ್ ಅವರನ್ನು ಮಾತ್ರ ಕೊಲ್ಲಲು ಬಂದಿದ್ದೇನೆ)” ಎಂದು ಆರೋಪಿ ಶೂಟರ್ ಕ್ಯಾಮೆರಾ ಮುಂದೆ ಹೇಳಿದ್ದಾನೆ.  ತಾನು ಗುಜ್ರಾನ್‌ವಾಲಾಗೆ ಬೈಕ್‌ನಲ್ಲಿ ಬಂದಿದ್ದು, ವಾಹನವನ್ನು ತಮ್ಮ ಚಿಕ್ಕಪ್ಪನ ಸ್ಥಳದಲ್ಲಿ ಬಿಟ್ಟಿರುವುದಾಗಿ ಅವನು ಹೇಳಿದ್ದಾನೆ .ಇಬ್ಬರು ಶೂಟರ್‌ಗಳು ಇದ್ದರು ಎಂದು ವರದಿಗಳು ಸೂಚಿಸುತ್ತವೆ, ಒಬ್ಬ ಪಿಸ್ತೂಲ್ ಮತ್ತು ಇನ್ನೊಬ್ಬ ಆಟೋಮ್ಯಾಟಿಕ್ ರೈಫಲ್ ಹೊಂದಿದ್ದರು. ರಾಜಕೀಯ ರ್ಯಾಲಿಯಲ್ಲಿ ಇಮ್ರಾನ್ ಖಾನ್ ಕಾಲಿಗೆ ಗುಂಡು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಜೀರಾಬಾದ್‌ನಲ್ಲಿ ಗುರುವಾರ ನಡೆದ ನೈಜ ಸ್ವಾತಂತ್ರ್ಯ ರ್ಯಾಲಿಯಲ್ಲಿ ಗುಂಡು ಹಾರಿಸಲಾಗಿದೆ. ARY ನ್ಯೂಸ್ ಪ್ರಕಾರ, ಜಫರಾಲಿ ಖಾನ್ ಚೌಕ್‌ನಲ್ಲಿ ಈ ಘಟನೆ ನಡೆದಿದೆ.

ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ. ಘಟನೆಯ ನಂತರ ಇಮ್ರಾನ್ ಖಾನ್ ಅವರನ್ನು ಕಂಟೈನರ್‌ನಿಂದ ಬುಲೆಟ್ ಪ್ರೂಫ್ ವಾಹನಕ್ಕೆ ವರ್ಗಾಯಿಸಲಾಯಿತು. ಗುಂಡಿನ ದಾಳಿಯ ನಂತರ ಇಮ್ರಾನ್ ಖಾನ್ ಅವರನ್ನು ಬುಲೆಟ್ ಪ್ರೂಫ್ ವಾಹನಕ್ಕೆ ವರ್ಗಾಯಿಸಿರುವುದನ್ನು ರ್ಯಾಲಿಯ ವಿಡಿಯೋಗಳು ತೋರಿಸಿವೆ. ರ್ಯಾಲಿಯಲ್ಲಿ ಅವರು ತೆರೆದ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಪಿಟಿಐ ಮುಖಂಡ ಫೈಸಲ್ ಜಾವೇದ್ ಕೂಡ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.