ಬಾಗ್ದಾದ್: ಇರಾಕ್​ನ ಬಾಗ್ದಾದ್​​ನ ಅಲ್​​-ಖತೀಬ್ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಅಳವಡಿಸಿದ್ದ ಆಮ್ಲಜನಕದ ಸಿಲಿಂಡರ್​​ ಸ್ಫೋಟಗೊಂಡು ಸಂಭವಿಸಿದ ಆಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆ 82ಕ್ಕೇರಿದೆ.

ಘಟನೆಯಲ್ಲಿ 82 ಮಂದಿ ಸಾವನ್ನಪ್ಪಿದ್ದು, 110 ಮಂದಿ ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯ ಮಾಧ್ಯಮಗಳಿಗೆ ಅಧಿಕೃತವಾಗಿ ಮಾಹಿತಿ ನೀಡಿದೆ. ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಆ ಬಳಿಕ ಇಡೀ ಆಸ್ಪತ್ರೆಗೆ ಬೆಂಕಿ ಆವರಿಸಿದೆ. ಶನಿವಾರ ತಡರಾತ್ರಿ ಘಟನೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಘಟನೆ ಕುರಿತ ಮಾಹಿತಿ ಲಭಿಸಿದ ಕೂಡಲೇ ಆಗ್ನಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯಲ್ಲಿ ಸಿಲುಕಿದ ಜನರನ್ನು ರಕ್ಷಿಸಲು ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸಲು ಇರಾಕ್​ ಪ್ರಧಾನಿ ಆದೇಶ ನೀಡಿದ್ದಾರೆ.

The post ಇರಾಕ್​ ಆಕ್ಸಿಜನ್ ಸ್ಫೋಟ- 82ಕ್ಕೇರಿದ ಸಾವಿನ ಸಂಖ್ಯೆ, 110 ಮಂದಿಗೆ ಗಾಯ appeared first on News First Kannada.

Source: News First Kannada
Read More