ಕೊರೊನಾ ಮಹಾಮಾರಿಯ ಅಬ್ಬರಕ್ಕೆ ದೇಶದೆಲ್ಲೆಡೆ ಸಂಕಷ್ಟ ಎದುರಾಗಿದೆ. ಈಗಾಗಲೇ ವೈರಸ್​​ನಿಂದ ಹಲವರು ಜೀವ ಕಳೆದುಕೊಂಡಿದ್ದರೇ ಸಾವಿರಾರು ಮಂದಿ ಆಸ್ಪತ್ರೆ ಸೇರಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಅಧಿಕಾರಿಗಳು, ವೈದ್ಯರು, ಸಿನಿಮಾ ತಾರೆಯರು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ನಡುವೆ ತಮ್ಮ ಅಭಿಮಾನಿಗಳಲ್ಲಿ ಜೀವನದ ಕುರಿತು ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಮಾಡಲು ಮುಂದಾಗಿರುವ ನಟಿ ರಶ್ಮಿಕಾ ಮಂದಣ್ಣ, ಈ ಕುರಿತು ಟ್ವೀಟ್​ ಮಾಡಿದ್ದಾರೆ.

ನನ್ನ ಸ್ನೇಹಿತರೊಬ್ಬರು ಒಂದು ಮಾತನನ್ನು ಹೇಳಿದರು. ಅದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಿಮಗೆ ಸಂತೋಷ ನೀಡುವ ಅಥವಾ ನಿಮ್ಮನ್ನು ನಗುವಂತೆ ಮಾಡುವ, ಉತ್ಸಾಹಗೊಳಿಸುವ ಅಥವಾ ಹಣ, ಜ್ಞಾನವನ್ನು ನೀಡುವ ಸಂಗತಿಗಳೊಂದಿಗೆ ನಿಮ್ಮ ಸಮಯ ಕಳೆಯಿರಿ… ಮತ್ತೇನಿಲ್ಲ Period! ಎಂದು ರಶ್ಮಿಕಾ ತಮ್ಮ ಟ್ವೀಟ್​​ನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ರಶ್ಮಿಕಾ ‘Spreading Hopes’ ಎಂಬ ಅಭಿಯಾನಕ್ಕೆ ಚಾಲನೆ ನೀಡಿದ್ರು. ಆ ಮೂಲಕ ಕೊರೊನಾ ಎರಡನೇ ಅಲೆಯಲ್ಲಿ ಮುಂದೇ ನಿಂತು ಹೋರಾಟ ಮಾಡುತ್ತಿರುವ ಸೂಪರ್ ಹೀರೋಗಳಿಗೆ ಗೌರವ ಸೂಚಿಸುವ ಕಾರ್ಯವನ್ನು ಆರಂಭಿಸಿದ್ದರು. ಈ ಬಗ್ಗೆ ತಮ್ಮ ಅಭಿಮಾನಿಗಳೊಂದಿಗೆ ವಿಡಿಯೋ ಹಂಚಿಕೊಂಡಿದ್ದರು.

25 ವರ್ಷ ರಶ್ಮಿಕಾ ಮಂದಣ್ಣ ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲು ಬ್ಯುಸಿಯಗಿದ್ದು, ತೆಲುಗಿನಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್​ ಅವರೊಂದಿಗೆ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬುಡಕಟ್ಟು ಯುವತಿಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು ಬಾಲಿವುಡ್​​​ನಲ್ಲಿ ಅಮಿತಾಬ್​ ಅವರ ಗುಡ್​ ಬಾಯ್​ ಸಿನಿಮಾದೊಂದಿಗೆ ಮಿಷನ್​ ಮಂಜು ಸಿನಿಮಾದಲ್ಲಿ ಕೂಡ ನಟಿಸುತ್ತಿದ್ದಾರೆ. ರಶ್ಮಿಕಾರ ಮಾತು ಕೇಳಿದ ಅವರ ಅಭಿಮಾನಿಗಳು ಇರೋದೆ ಒಂದು ಹೃದಯ ಅದೆಷ್ಟು ಬಾರಿ ಕದೀತಿರಿ ರಶ್ಮಿಕಾ? ಅಂತ ಹೊಗಳಿಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ.

The post ಇರೋದೆ ಒಂದು ಹೃದಯ ಅದೆಷ್ಟು ಬಾರಿ ಕದೀತಿರಿ ರಶ್ಮಿಕಾ? ಕೊಡಗು ಕುವರಿ ಮಾತಿಗೆ ಫಿದಾ appeared first on News First Kannada.

Source: newsfirstlive.com

Source link