ಶಿವಮೊಗ್ಗ: ಇಲಿ ಮಾಡಿದ ಎಡವಟ್ಟಿನಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕುರುವಳ್ಳಿ ಬೊಮ್ಮಸಯ್ಯನ ಅಗ್ರಹಾರದ ಆಶ್ರಯ ಬಡಾವಣೆಯಲ್ಲಿ ನಡೆದಿದೆ.

ಮೃತಪಟ್ಟವರನ್ನು ಶಕುಂತಲಾ (52) ಎಂದು ಗುರುತಿಸಲಾಗಿದೆ. ಅಯ್ಯೋ ಇದೇನು ಇಲಿ ಏನು ಎಡವಟ್ಟು ಮಾಡ್ತು. ಇಲಿ ಎಡವಟ್ಟು ಮಾಡಿದ್ದಕ್ಕೆ ಮಹಿಳೆ ಏಕೆ ಮೃತಪಟ್ಟರು ಎಂಬ ಅನುಮಾನ ನಿಮಗೆ ಕಾಡಬಹುದು. ಆದರೆ ಇದು ಸತ್ಯ. ಇದನ್ನು ಓದಿ: ಮಂಗಳಮುಖಿಯರಿಗೆ ಲಸಿಕೆಯೊಂದಿಗೆ ದಿನಸಿ ಕಿಟ್ ವಿತರಣೆ

ಮೃತ ಶಕುಂತಲಾ ಅವರು ಮನೆಯಲ್ಲಿ ಇದ್ದಾಗ ಇಲಿಯೊಂದು ಮನೆಯ ಮಹಡಿಯಿಂದ ಧಿಡೀರ್ ಎಂದು ಅವರ ಮೈ ಮೇಲೆ ಬಿದ್ದಿದೆ. ಇಲಿ ಮೈ ಮೇಲೆ ಬಿದ್ದಿದ್ದರಿಂದ ಗಾಬರಿಗೊಂಡ ಶಕುಂತಲಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

ಕುಸಿದು ಬಿದ್ದ ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ತೆರಳುತ್ತಿದ್ದರು. ಆದರೆ ದಾರಿ ಮಧ್ಯೆ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದನ್ನು ಓದಿ:ಸರ್ಕಸ್ ಕಲಾವಿದರಿಗೆ ದಿನಸಿ ಸಾಮಗ್ರಿ ವಿತರಿಸಿದ ಶಾಸಕ ಗಣೇಶ ಹುಕ್ಕೇರಿ

The post ಇಲಿ ಎಡವಟ್ಟು – ಹೃದಯಾಘಾತದಿಂದ ಮಹಿಳೆ ಸಾವು appeared first on Public TV.

Source: publictv.in

Source link