ಹೈದರಾಬಾದ್: ದೇಶದಲ್ಲಿ ಮ್ಯೂಟೆಂಟ್ ಒಮಿಕ್ರಾನ್ ಕೊರೊನಾ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳು ಮುಂಜಾಗೃತ ಕ್ರಮಗಳನ್ನ ತೆಗೆದುಕೊಂಡು ಫುಲ್ ಅಲರ್ಟ್ ಆಗಿವೆ. ಅದರಂತೆ ತೆಲಂಗಾಣ ಸರ್ಕಾರ, ವ್ಯಾಕ್ಸಿನೇಷನ್ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ.
ಯಾರೆಲ್ಲಾ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲವೋ ಅಂತವರಿಗೆ ಬಿಗ್ ಶಾಕ್ ಆಗಲಿದೆ. ಹೌದು.. ತೆಲಂಗಾಣ ಸರ್ಕಾರ ಲಸಿಕೆ ಹಾಕಿಕೊಂಡಿರುವ ಬಗ್ಗೆ ಸಾರ್ವಜನಿಕ ಸ್ಥಳಗಳಲ್ಲಿ ಱಂಡಪ್ ಆಗಿ ಚೆಕ್ ಮಾಡಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ತೆಲಂಗಾಣ ರಾಜ್ಯದ ಪಬ್ಲಿಕ್ ಹೆಲ್ತ್ ಡೈರೆಕ್ಟರ್ ಡಾ.ಜಿ.ಶ್ರೀನಿವಾಸ್ ರಾವ್.. ಯಾರೆಲ್ಲಾ ವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ? ಅನ್ನೋದನ್ನ ಱಂಡಮ್ ಆಗಿ ಚೆಕ್ ಮಾಡಲು ನಿರ್ಧರಿಸಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಕಡ್ಡಾಯ ಎಂದಿದ್ದಾರೆ.
ಜನರು ಸಾರ್ವಜನಿಕ ಸ್ಥಳಗಳಿಗೆ ಹೋಗಬೇಕು ಅಂದರೆ ಕಡ್ಡಾಯವಾಗಿ ವ್ಯಾಕ್ಸಿನ್ ಸರ್ಟಿಫಿಕೇಟ್ ತೆಗೆದುಕೊಂಡು ಹೋಗಬೇಕು ಅಂತಾ ನಾವು ವಿನಂತಿಸುತ್ತೇವೆ. ನಮ್ಮ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಆಗಾಗ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡುತ್ತದೆ. ಈ ಸಂದರ್ಭದಲ್ಲಿ ಜನರ ಬಳಿ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಕೇಳಲಾಗುತ್ತದೆ.
ಮಾಸ್ಕ್ ಹಾಕದಿದ್ರೆ ಸಾವಿರ ರೂಪಾಯಿ ದಂಡ..!
ಈ ಸಂದರ್ಭದಲ್ಲಿ ಯಾರ ಬಳಿ ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಇದೆಯೋ, ಅವರಿಗೆ ಕೊರೊನಾ ಜಾಗೃತಿ ಕುರಿತು ಮಾಹಿತಿಯನ್ನ ನೀಡುತ್ತಾರೆ. ಒಂದು ವೇಳೆ ವ್ಯಾಕ್ಸಿನ್ ಹಾಕಿಸಿಕೊಳ್ಳದಿದ್ರೆ, ಅಲ್ಲಿಯೇ ವ್ಯಾಕ್ಸಿನ್ ಹಾಕಲಿದ್ದಾರೆ. ಇನ್ನು ಮಾಸ್ಕ್ ಧರಿಸದಿದ್ದರೆ ಒಂದು ಸಾವಿರ ರೂಪಾಯಿ ದಂಡವನ್ನ ವಿಧಿಸಲಿದ್ದಾರೆ ಎಂದು ಎಚ್ಚರಿಕೆಯನ್ನ ನೀಡಿದ್ದಾರೆ. ಇನ್ನು ಎರಡನೇ ಅಲೆ ಸಂದರ್ಭದಲ್ಲೂ ತೆಲಂಗಾಣ ಸರ್ಕಾರ, ಮಾಸ್ಕ್ ಧರಿಸದಿದ್ದವರಿಗೆ ಭಾರೀ ಮೊತ್ತದ ದಂಡವನ್ನ ವಿಧಿಸಿತ್ತು.
ಎಲ್ಲೆಡೆ ಒಮಿಕ್ರಾನ್ ಆತಂತ ಎದುರಾಗಿದೆ. ಹೀಗಾಗಿ ತೆಲಂಗಾಣ ಸರ್ಕಾರ ಡಿಸೆಂಬರ್ ಅಂತ್ಯದೊಳಗೆ ಶೇಕಡಾ 100 ವ್ಯಾಕ್ಸಿನೇಷನ್ ಗುರಿಯನ್ನ ಹೊಂದಿದೆ. ಅದರಂತೆ ಇದೀಗ ವ್ಯಾಕ್ಸಿನ್ ತೆಗೆದುಕೊಂಡಿರುವ ಬಗ್ಗೆ ಱಂಡಮ್ ಆಗಿ ಚೆಕ್ ಮಾಡಲು ಮುಂದಾಗಿದೆ.