ನವದೆಹಲಿ: ಕೋವಿಡ್​​-19 ಲಸಿಕೆ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮೂಲಕ ಸಾಮಾಜಿಕ ಮಾಧ್ಯಮಗಳು ಅದ್ರಲ್ಲೂ ಫೇಸ್​ಬುಕ್​​​ ಸಮಾಜವನ್ನು ಕೊಲ್ಲುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್​​ ಕಟು ಟೀಕೆ ಮಾಡಿದ್ರು.. ಇದಕ್ಕೆ ಕಟು ಪ್ರತಿಕ್ರಿಯೆ ಕೊಟ್ಟಿರುವ ಫೇಸ್​​ಬುಕ್​ ತಪರಾಕಿ ಹಾಕಿದೆ. ಫೇಸ್ಬುಕ್​​​ ಬಳಸುತ್ತಿರುವ ಅಮೆರಿಕಾ ಮೂಲದ ಶೇ. 80ರಷ್ಟು ಯೂಸರ್ಸ್​​ ಲಸಿಕೆ ತಗೆದುಕೊಂಡಿದ್ದಾರೆ. ಇನ್ನು ಹಲವರು ತೆಗೆದುಕೊಳ್ಳಲು ಮುಂದಾಗಿದ್ದಾರೆ. ಯಾವ ರೀತಿಯಲ್ಲೂ ನಾವು ಜನ  ಕೊರೋನಾ ಲಸಿಕೆ ತೆಗೆದುಕೊಳ್ಳದಿರಲು ಕಾರಣರಲ್ಲ ಎನ್ನುವ ಮೂಲಕ ಜೋ ಬೈಡನ್​​ಗೆ ಫೇಸ್​​ಬುಕ್​​ ತಿರುಗೇಟು ನೀಡಿದೆ.

ಜುಲೈ 4ನೇ ತಾರೀಕಿನೊಳಗೆ ಅಮೆರಿಕಾದ ಶೇ.70ರಷ್ಟು ಮಂದಿಗೆ ಲಸಿಕೆ ನೀಡಬೇಕು ಎಂಬುದು ನಿಮ್ಮ ಸರ್ಕಾರದ ನಿರ್ಧಾರ. ನಿಗದಿತ ಸಮಯದೊಳಗೆ ಸರ್ಕಾರದ ಉದ್ದೇಶದಂತೆ ಶೇ. 70ರಷ್ಟು ಅಮೆರಿಕನ್ನರು ವ್ಯಾಕ್ಸಿನೇಟ್​ ಮಾಡಿಸಿಕೊಳ್ಳದೇ ಹೋದರೆ ಅದು ನಿಮ್ಮ ಆಡಳಿತ ವೈಫಲ್ಯ. ಸಾಮಾಜಿಕ ಮಾಧ್ಯಮಗಳಿಗೂ ನಿಮ್ಮ ಸರ್ಕಾರದ ವೈಫಲ್ಯಕ್ಕೂ ಎಂಥಾ ಸಂಬಂಧ? ಎಂದು ಜೋ ಬೈಡೆನ್​​ಗೆ ಫೇಸ್​ಬುಕ್​ ಪ್ರಶ್ನಿಸಿದೆ.

ಇದಕ್ಕೂ ಮುನ್ನ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಜೋ ಬೈಡೆನ್​​, ಕೊರೋನಾ ಲಸಿಕೆ ಕುರಿತು ಸುಳ್ಳು ಸುದ್ದಿ ಹರಡುವ ಮೂಲಕ ಸೋಷಿಯಲ್​ ಮೀಡಿಯಾಗಳು ಜನರನ್ನು ಕೊಲ್ಲುತ್ತಿವೆ ಎಂದಿದ್ದರು. ಹೀಗೆ ಸುಳ್ಳು ಸುದ್ದಿ ಹರಡುತ್ತಿರುವ ಜನರ ವಿರುದ್ಧ ಯಾಕೇ ಫೇಸ್​​ಬುಕ್​​ ಕ್ರಮ ತೆಗೆದುಕೊಂಡಿಲ್ಲ ಎಂದು ಚಾಟಿ ಬೀಸಿದ್ದರು.

The post ಇಲ್ಲಿ ಟ್ವಿಟರ್ V/S ಕೇಂದ್ರ ಆದಹಾಗೆ.. ಅಮೆರಿಕಾದಲ್ಲಿ ಬೈಡನ್ V/S ಫೇಸ್​ಬುಕ್.. ಅಷ್ಟಕ್ಕೂ ಏನಾಯ್ತು? appeared first on News First Kannada.

Source: newsfirstlive.com

Source link