ನಾರೋಗ್ಯದ ಕಾರಣ ದಿವ್ಯಾ ಉರುಡುಗ ಬಿಗ್‍ಬಾಸ್ ಮನೆಯಿಂದ ನಿನ್ನೆ ಹೊರ ಹೋಗಿದ್ದಾರೆ. ದಿವ್ಯಾ ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಬಿಗ್‍ಬಾಸ್ ಮನೆಯ ಸ್ಪರ್ಧಿಗಳು, ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ದಿವ್ಯಾ ಇಲ್ಲದೇ ಒಂದೆಡೇ ಬಿಗ್‍ಬಾಸ್ ಮನೆಯೆಲ್ಲಾ ಒಂದು ರೀತಿ ಖಾಲಿ ಖಾಲಿಯಾಗಿದೆ. ಎಲ್ಲರೊಟ್ಟಿಗೆ ತುಂಬಾ ಲವಲವಿಕೆಯಿಂದ ಮನೆಯ ತುಂಬಾ ಓಡಾಡುತ್ತಾ, ಎಲ್ಲರೊಂದಿಗೆ ಬೆರೆತು ಕಾಮಿಡಿ ಮಾಡಿಕೊಂಡು ಎಲ್ಲರನ್ನು ನಗಿಸಿ ಅವರೊಟ್ಟಿಗೆ ತಾನು ಸಂತೋಷದಿಂದ ಇದ್ದ ದಿವ್ಯಾ ಉರುಡುಗರನ್ನು ದೊಡ್ಮನೆ ಮಂದಿ ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ.

ಶಮಂತ್ ನಿನ್ನೆ ದಿವ್ಯಾ ಉರುಡುಗ ಬಗ್ಗೆ ಹಾಡೊಂದನ್ನು ಬರೆದಿದ್ದು, ಕ್ಯಾಮೆರಾ ಮುಂದೆ ನಿಂತು ಹಾಡಿದ್ದಾರೆ. ಜೊತೆಗೆ ಶಮಂತ್ ಹಾಡು ಹೇಳುವಾಗ ಬೆನ್ನ ಹಿಂದೆ ನಿಂತು ಮನೆ ಮಂದಿಯೆಲ್ಲಾ ಸಾಥ್ ನೀಡಿದ್ದಾರೆ.

ದಿವ್ಯಾ ಉರುಡುಗಗೆ ಹುಷಾರಿಲ್ಲ ಅವರು ಟ್ರೀಟ್‍ಮೆಂಟ್ ತೆಗೆದುಕೊಳ್ಳುತ್ತಿದ್ದಾರೆ. ಹಾಗಾಗಿ ಅವರಿಗೆ ಒಂದು ಸಾಂಗ್ ಬರೆದಿದ್ದೇನೆ ಎನ್ನುತ್ತಾ ಶಮಂತ್, ಹೇ, ಹೇ ದಿವ್ಯಾ ಹೇಗಿದ್ಯಾ..? ನನ್ ಕಡೆ ಒಸಿ ನೋಡಕ್ಕಿಲ್ವಾ.. ಇಲ್ಲಿ ಬಂದ ಅರವಿಂದ, ನಿನಗಾಗಿ ಕಾಯ್ಕೊಂಡ್ ಕುಂತ.. ಬಜಾರ್ ಆದಾಗ ಓಡುತ್ತಿದ್ದೆ, ಟಾಸ್ಕೂ ಗಿಸ್ಕು ವಿನ್ ಆಗ್ತಿದ್ದೆ. ಹಾಡು ಚೆನ್ನಾಗೆ ಆಡ್ತಿದ್ದೆ, ಏನಕ್ಕೆ ಬ್ಯಾಕ್ ಟೂ ಬ್ಯಾಕ್ ತಿನ್ನುತ್ತಿದ್ದೆ. ತೀರ್ಥಹಳ್ಳಿ ಊರಿಂದ ಹೊಸಕೆರೆ ಹಳ್ಳಿಗೆ ಬಂದು ಮನ್ಸನ್ನೇ ಕದ್ದು ಬಿಟ್ಟಾವ್ಳೆ.. ಕೇಳೆ ದಿವ್ಯಾ ಉರುಡುಗ.. ಬಿಗ್‍ಬಾಸ್ ಮನೆಗೆ ಬಾ ಬೇಗ, ಕೇಳೆ ದಿವ್ಯಾ ಉರುಡುಗ.. ನಾವೆಲ್ಲಾ ವೈಟಿಂಗ್ ಬಾ ಬೇಗ.. ಎಂದು ಹಾಡಿದ್ದಾರೆ.

ಒಟ್ಟಾರೆ ಶಮಂತ್ ಸಾಂಗ್ ಕೇಳಿ ಮನೆ ಮಂದಿಯಷ್ಟೇ ಅಲ್ಲದೆ ವೀಕ್ಷಕರು ಕೂಡ ಫುಲ್ ಫಿದಾ ಆಗಿದ್ದಾರೆ.

The post ಇಲ್ಲಿ ಬಂದ ಅರವಿಂದ, ನಿನಗಾಗಿ ಕಾಯ್ಕೊಂಡ್ ಕುಂತ appeared first on Public TV.

Source: publictv.in

Source link