ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಹತ್ತಿರದ ಇತರೆ ನಗರಗಳು ವಿಷಕಾರಿ ಗಾಳಿಯಿಂದ ತತ್ತರಿಸಿ ಇನ್ನೇನು ಚೇತರಿಸಿಕೊಳ್ಳುತ್ತಿವೆ ಎನ್ನುವಷ್ಟರಲ್ಲಿ ಮತ್ತೇ ವಾಯುಮಾಲಿನ್ಯ ಹೆಚ್ಚಾಗಿದೆ ಎಂದು ವರದಿಗಳಾಗಿವೆ.
ಹೌದು, ಇತ್ತೀಚಿಗೆ ರಾಜಧಾನಿ ವಾಯುಮಾಲಿನ್ಯದ ತವರಾಗಿ ಮಾರ್ಪಟ್ಟಿತ್ತು. ಇಲ್ಲಿ ಉಸಿರಾಡೋದು ಕೂಡ ತುಂಬಾ ಕಷ್ಟವಾಗಿದೆ ಎಂದು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್. ವರ್ಕ್ ಫ್ರಮ್ ಹೋಂಗೆ ಸೂಚನೆ ನೀಡಿ ಆದೇಶ ಕೂಡ ಹೊರಡಿಸಿತ್ತು.
ಆ ಬಳಿಕ ವಾಯುಮಾಲಿನ್ಯದ ಪ್ರಮಾಣ ಕೊಂಚ ಕಡಿಮೆಯಾಗಿ ಜನರು ಸ್ವಚ್ಚಂದವಾಗಿ ಉಸಿರಾಡಲು ಆರಂಭಿಸಿದ್ದರು. ಆದರೆ ಇದೀಗ ದಿಢೀರ್ನೆ ಮತ್ತೆ ವಾಯುಮಾಲಿನ್ಯದಲ್ಲಿ ಏರಿಕೆಯಾಗಿದೆ. ದೆಹಲಿಯಲ್ಲಿನ ಇಂದಿನ ವಾಯುಮಾಲಿನ್ಯ ಏರ್ ಕ್ವಾಲಿಟಿ ಇಂಡೆಕ್ಸ್ನಲ್ಲಿ 386 ರಷ್ಟು ದಾಖಲಾಗಿದೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಇದರ ಪ್ರಮಾಣ 350 ರ ಆಸುಪಾಸಿನಲ್ಲಿತ್ತು ಇದೀಗ ಏರಿಕೆ ಕಂಡಿದೆ. ಹೀಗಾಗಿ ರಾಷ್ಟ್ರರಾಜಧಾನಿಯಲ್ಲಿ ಶುದ್ಧಗಾಳಿಯ ಸಮಸ್ಯೆ ಇನ್ಮುಂದೆ ಮತ್ತಷ್ಟು ಜಟಿಲವಾಗೋ ಸಾಧ್ಯತೆಗಳಿವೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ:BREAKING: ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ; ವರ್ಕ್ ಫ್ರಮ್ ಹೋಂಗೆ ಸುಪ್ರೀಂ ಸೂಚನೆ