ಬೆಂಗಳೂರು: ಆಹಾರ ಮತ್ತು ನಾಗರೀಕ ಖಾತೆ ಸಚಿವರಾದ ಉಮೇಶ್ ಕತ್ತಿ ರೈತರೊಬ್ಬನಿಗೆ ನೀನು ಸತ್ತುಹೋಗಿಬಿಡುವುದು ಉತ್ತಮ ಎಂದು ಹೇಳಿದ್ದಾರೆನ್ನಲಾದ ಆಡಿಯೋ ವೈರಲ್ ಆದ ಹಿನ್ನೆಲೆ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ.. ಸಿಎಂಗೆ ಬಡವರ ಬಗ್ಗೆ ಗೌರವ ಇದ್ರೆ ಇಂಥವರನ್ನ ಒದ್ದು ಹೊರಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಹಡಬಿಟ್ಟಿ ದುಡ್ಡನ್ನ ಮಾಡಿಕೊಂಡು ರೈತರ ಬೆಳೆದ ಕಬ್ಬುಗಳನ್ನ ಕಾರ್ಖಾನೆಗಳಿಗೆ ಹಾಕಿದ್ರೆ ಇವರು ಹೇಳಿದ್ದೇ ತೂಕದ ಲೆಕ್ಕ.. ಕೊಟ್ಟಿದ್ದೇ ದುಡ್ಡು..ಇದ್ರಲ್ಲಿ ದರ್ಬಾರ್ ನಡೆಸಿಕೊಂಡು ಬಂದವ್ರು ಇವರೆಲ್ಲಾ.. ಇವರಿಗೆ ಕಲ್ಚರ್ ಎಲ್ಲಿದೆ..? ಬಡವರ ರಕ್ತ ಹೀರಿ ಬಂದವ್ರು ಇವರೆಲ್ಲ. ಬಡವರ ಕಷ್ಟವನ್ನ ಏನು ತಿಳ್ಕೊಂಡಿದ್ದಾರೆ ಇವ್ರು.? ದುರಹಂಕಾರದ ಪರಮಾವಧಿ ಇವರಿಗೆಲ್ಲ. ಕರ್ಫ್ಯೂ ಆದ್ಮೇಲೆ ಜನರ ಪರಿಸ್ಥಿತಿ ಹೇಗಾಗಿದೆ ಅನ್ನೋದನ್ನ ನೀವೇ ತೋರಿಸ್ತಿದ್ದೀರಿ. ಜನಗಳು ಹಳ್ಳಿಗಳಿಗೆ ಹೋಗ್ತಿರೋದನ್ನ ತೋರ್ಸಿದ್ದೀರಿ. 4 ಲಕ್ಷ ಜನ ಬೆಂಗಳೂರು ಬಿಟ್ಟು ಹೋಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರದಿಂದ ನೆರವು ನೀಡಬೇಕು. ಇವರಪ್ಪನ ಮೆನಯಿಂದೇನು ತಂದ್ಕೊಡಲ್ಲ ಇವ್ರು. ಜನಗಳ ದುಡ್ಡು ಇದು, ಸರ್ಕಾರದ ಖಜಾನೆ ತಂಬ್ಸೋದು ಜನಗಳು.. ಇವರಲ್ಲ. ಜನಗಳ ದುಡ್ಡನ್ನ ಸರಿಯಾಗಿ ಬಳಕೆ ಮಾಡ್ಕೊಳ್ಳೋಕೆ ಆಗ್ದೇ ಇದ್ಮೇಲೆ ಯಾತಕ್ಕಿರ್ಬೇಕು ಸರ್ಕಾರ..?

ಇವನ ಮನೆಯೊಳಗೆ ಏನಾದ್ರೂ ಕಷ್ಟಕ್ಕೆ ಸಾಲ ಮಾಡಿರ್ತಾನಲ್ಲ ಸಾಯ್ತಾನಾ..?

ಆ ಪದ ಬಳಕೆ ಅಮಾನವೀಯ ಸರ್ಕಾರ ಮಾತ್ರವಲ್ಲ ಅತ್ಯಂತ ದುರಹಂಕಾರ ಪರಮಾವಧಿ ಮಂತ್ರಿಯ ಮಾತಿದು. ಸಾಯೋದು ಒಳ್ಳೇದು ಅಂತ ಹೇಳೋದಾದ್ರೆ ಇವನ ಮನೆಯೊಳಗೆ ಏನಾದ್ರೂ ಕಷ್ಟಕ್ಕೆ ಸಾಲ ಮಾಡಿರ್ತಾನಲ್ಲ ಸಾಯ್ತಾನಾ..? 200-300 ಕೋಟಿ ಸಾಲ ಮಾಡಿರ್ತಾರೆ, ಎಲ್ಲೆಲ್ಲೋ ಲೂಟಿ ಹೊಡ್ದು ಎಲ್ಲೆಲ್ಲೋ ಹಾಕೊಂಡಿರ್ತಾರೆ. ಈ ವರ್ಗದಲ್ಲಿ ಬಂದಿರೋದ್ರಿಂದ ಬಡವರ ಕಷ್ಟ ಗೊತ್ತಾಗಲ್ಲ. ಒಂದ್ಕಡೆ ಬಿಜೆಪಿಯವ್ರು ಹಿಂದೂತ್ವ ಸಂಸ್ಥಾಪನೆ ಮಾಡ್ತೀನಿ ಅಂತಾರೆ. ನಮ್ಮ ಸಂಸ್ಕೃತಿನಲ್ಲಿ ಇದನ್ನೇ ಹೇಳ್ಕೊಟ್ಟಿರೋದಾ ಇವ್ರಿಗೆ..? ಬಕಾಸುರನ ಥರಾ ಬಾಚಬೇಕು ಅನ್ನೋದ್ರಲ್ಲಿ ಇದಾರೆ. ತುಂಬಾ ನೋವಾಗಿದ ಇದರಿಂದ ಎಂದಿದ್ದಾರೆ.

The post ಇವನು ಕಷ್ಟಕ್ಕೆ ಸಾಲ ಮಾಡಿರ್ತಾನಲ್ಲ.. ತೀರ್ಸೋಕಾಗ್ದೆ ಸಾಯ್ತಾನಾ..?- ಕತ್ತಿ ವಿರುದ್ಧ ಹೆಚ್​ಡಿಕೆ ಕಿಡಿ appeared first on News First Kannada.

Source: newsfirstlive.com

Source link