ಸಮಂತಾ
ಸಮಂತಾ (Samantha) ಅವರು ವಿಚ್ಛೇದನದ (Divorce) ನಂತರದಲ್ಲಿ ತಮ್ಮ ಜೀವನದ ಮಾರ್ಗವನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. ಅವರು ಈಗ ಫ್ರೀ ಬರ್ಡ್. ಈ ಕಾರಣಕ್ಕೆ ಅವರಿಗೆ ಹೆಚ್ಚು ಇಷ್ಟ ಆಗುವ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ನಾನಾ ಊರುಗಳಿಗೆ, ನಾನಾ ದೇಶಗಳಿಗೆ ಸುತ್ತಾಟ ನಡೆಸುತ್ತಿದ್ದಾರೆ. ಈ ಬಾರಿ ಸಮಂತಾ ಅವರು ತೆರಳಿರುವುದು ಸ್ವಿಜರ್ಲೆಂಡ್ಗೆ (Switzerland). ಈಗ ಚಳಿಗಾಲದ ಸಮಯ. ಹೀಗಾಗಿ, ಸ್ವಿಜರ್ಲೆಂಡ್ ಸಂಪೂರ್ಣವಾಗಿ ಹಿಮಾಚ್ಛಾದಿತವಾಗಿದೆ. ಹಿಮದಿಂದ ಆ ದೇಶದ ಸೌಂದರ್ಯ ಮತ್ತಷ್ಟು ಹೆಚ್ಚಿದೆ. ಅಲ್ಲಿಗೆ ತೆರಳಿರುವ ಸಮಂತಾ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.
‘ಪುಷ್ಪ’ ಸಿನಿಮಾದ ‘ಹೂ ಅಂತೀಯಾ ಮಾವಾ.. ಊಹು ಅಂತೀಯಾ ಮಾವ..’ ಹಾಡು ಸೂಪರ್ ಡೂಪರ್ ಹಿಟ್ ಆಗಿದೆ. ಈ ಸಿನಿಮಾ ಗೆಲ್ಲುವಲ್ಲಿ ಈ ವಿಶೇಷ ಹಾಡಿನ ಪಾತ್ರ ಕೂಡ ಇದೆ. ಬಳ್ಳಿಯಂತೆ ಸೊಂಟ ಬಳುಕಿಸಿದ ಸಮಂತಾ ಅವರನ್ನು ನೋಡಲು ಅನೇಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದರು. ಅಷ್ಟು ದೊಡ್ಡ ಮಟ್ಟದಲ್ಲಿ ಈ ಹಾಡಿಗೆ ಕ್ರೇಜ್ ಸೃಷ್ಟಿ ಆಗಿತ್ತು. ಈ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಸಮಂತಾ ಸ್ವಿಜರ್ಲೆಂಡ್ಗೆ ತೆರಳಿದ್ದಾರೆ. ಅಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ.
ಹಿಮಚ್ಛಾದಿತ ಪ್ರದೇಶಗಳಲ್ಲಿ ಸ್ಕೀಯಿಂಗ್ ಮಾಡಲಾಗುತ್ತದೆ. ಅಂದರೆ, ಕಾಲಿಗೆ ಉದ್ದನೆಯ ಹಲಗೆ ರೀತಿಯ ವಸ್ತುವನ್ನು ಕಟ್ಟಿಕೊಂಡು, ಕೈನಲ್ಲಿ ಕೋಲು ಹಿಡಿದುಕೊಂಡು ಹಿಮದಲ್ಲಿ ಜಾರಿ ಹೋಗುತ್ತಾರೆ. ಇದು ತುಂಬಾನೇ ಡೇಂಜರ್. ಸೂಕ್ತ ತರಬೇತಿ ಇಲ್ಲದೆ ಇದನ್ನು ಮಾಡಲು ಸಾಧ್ಯವಿಲ್ಲ. ತರಬೇತಿ ಪಡೆದ ಹೊರತಾಗಿಯೂ ಕೆಲವೊಮ್ಮೆ ಅಪಘಾತ ಸಂಭವಿಸಬಹುದು. ಫ್ರೆಂಚ್ ನಟ ಗ್ಯಾಸ್ಪಾರ್ಡ್ ಯುಲಿಯೋಲ್ ಜನವರಿ 18ರಂದು ಸ್ಕೀ ಅಪಘಾತದಲ್ಲಿ ಮೃತಪಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸಮಂತಾ ಕೂಡ ಸ್ಕೀಯಿಂಗ್ ಪ್ರಯತ್ನಿಸಿದ್ದಾರೆ. ಈ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇದಕ್ಕೆ ತರಬೇತಿ ನೀಡಿದವರನ್ನು ಅವರು ನೆನಪಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಸ್ಟೇಟಸ್ ಪೋಸ್ಟ್ ಮಾಡಿರುವ ಅವರು, ‘ಇವರಿಂದಾಗಿ ನಾನು ಬದುಕಿದ್ದೇನೆ’ ಎಂದು ಸ್ಕೀ ತರಬೇತುದಾರರಾದ ಕೇಟ್ ಹಾಗೂ ಆ್ಯಂಟೋನಿ ಅವರನ್ನು ಟ್ಯಾಗ್ ಮಾಡಿದ್ದಾರೆ. #skiingisbelieving ಎನ್ನುವ ಹ್ಯಾಶ್ಟ್ಯಾಗ್ ಹಾಕಿದ್ದಾರೆ.