ಗರ್ಭಾವಸ್ಥೆ ಮಹಿಳೆಯರ ಜೀವನದಲ್ಲಿ ಬಹುಮುಖ್ಯವಾದ ಕಾಲಘಟ್ಟ. ಪ್ರತಿ ಮಹಿಳೆಯೂ ಸುರಕ್ಷಿತ ಹಾಗೂ ಆರೋಗ್ಯಯುತ ಹೆರಿಗೆ ಬಯಸುತ್ತಾರೆ.

ಗರ್ಭಧಾರಣೆಯ ಸಮಯದಲ್ಲಿ ಹೆಚ್ಚಾಗಿ ಮಹಿಳೆಯರನ್ನು ಹಲವಾರು ಸಣ್ಣಪುಟ್ಟ ರೋಗಗಳು ಕಾಡುತ್ತವೆ. ಆದ್ದರಿಂದ ಕೆಲವೊಂದು ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಇದರಿಂದ ಹುಟ್ಟುವ ಮಗುವಿನ ಮೇಲೆ ಪರಿಣಾಮ ಬೀರುವುದು ಖಚಿತ. ಕೆಲವೊಂದು ಆಹಾರ ಸೇವನೆಯಿಂದ ದೂರ ಇರುವುದು ಆರೋಗ್ಯದ ದೃಷ್ಟಿಯಿಂದ ಗರ್ಭಿಣಿ ಮಹಿಳೆಯರಿಗೆ ಉತ್ತಮ. ಆಹಾರ ಸೇವನೆಯ ಜತೆಗೆ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳತ್ತ ಗಮನಹರಿಸಬೇಕಾಗುತ್ತದೆ.

ಕಾಫಿ ಸೇವನೆ ಬೇಡ :

ಗರ್ಭಿಣಿ ಮಹಿಳೆಯರು ಕಾಫಿ ಸೇವನೆಯಿಂದ ದೂರ ಇರುವುದು ಒಳ್ಳೆಯದು, ಕಾರಣ ಕಾಫಿ ಸೇವನೆ ಗರ್ಭಿಣಿಯರಲ್ಲಿ ಬ್ಲಡ್ ಪ್ರೆಷರ್ ಹೆಚ್ಚುಸುತ್ತದೆ. ಹಾಗೂ ಕಾಫಿ ಸೇವನೆ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತವೆ ವರದಿಗಳು.

ಮದ್ಯ ಸೇವನೆ ಬಿಟ್ಟು ಬಿಡಿ:

ಗರ್ಭಧರಿಸಿದ ಸಮಯದಲ್ಲಿ ಮಹಿಳೆಯರು ವೈನ್, ಬೀಯರ್ ಹಾಗೂ ಮದ್ಯದ ಸೇವನೆ ಬಿಡಬೇಕು. ಮದ್ಯ ಸೇವನೆ ಮಗುವಿನ ಮಿದುಳು ಹಾಗೂ ಅಂಗಾಂಗ ಬೆಳವಣೆಗೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ದೀರ್ಘಾವಧಿ ವರೆಗೆ ಕುಳಿತುಕೊಳ್ಳಬೇಡಿ :

ದೀರ್ಘ ಸಮಯದವರೆಗೆ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದು ಅಥವಾ ನಿಲ್ಲುವುದು ಗರ್ಭಿಣಿ ಮಹಿಳೆಯರಿಗೆ ಆರೋಗ್ಯಕಾರಿಯಲ್ಲ. ಇದು ರಕ್ತನಾಳಗಳ ಮೇಲೆ ಒತ್ತಡ ಹೆಚ್ಚಿಸುತ್ತದೆ.

ಧೂಮಪಾನಕ್ಕೆ ನೋ ಹೇಳಿ :

ಗರ್ಭಾವಸ್ಥೆಯಲ್ಲಿ ಧೂಮಪಾನ ಹಾನಿಕಾರಕ. ಧೂಮಪಾನದಲ್ಲಿರುವ ಕೆಮಿಕಲ್ಸ್ ಗರ್ಭದಲ್ಲಿರುವ ಮಗುವಿನ ಮೇಲೆ ದುಷ್ಪರಿಣಾಮ ಬೀರುತ್ತದೆ.

ಇವು ಗರ್ಭಿಣಿ ಮಹಿಳೆಯರು ಗಮನಿಸಬೇಕಾದ ಮುಖ್ಯ ವಿಷಯಗಳು

ಆರೋಗ್ಯ – Udayavani – ಉದಯವಾಣಿ
Read More

Leave a comment