ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾಗೆ ಅವಕಾಶ ನೀಡಲಾಗುತ್ತೆ ಅನ್ನೋ ಮಾತು ಸುಳ್ಳಾಗಿದೆ. ಅಚ್ಚರಿಯ ರೀತಿಯಲ್ಲಿ ಉಮೇಶ್ ಯಾದವ್ಗೆ ಮಣೆ ಹಾಕಿರುವ ಟೀಂ ಮ್ಯಾನೇಜ್ಮೆಂಟ್, ಇಶಾಂತ್ ಶರ್ಮಾರನ್ನ ಕೈಬಿಟ್ಟಿದೆ. ಈ ನಿರ್ಧಾರವನ್ನ ಹಲವರು ಪ್ರಶ್ನೆ ಮಾಡ್ತಿದ್ರೆ , ಟೀಮ್ ಮ್ಯಾನೇಜ್ಮೆಂಟ್ ನಮ್ಮಲ್ಲಿ ಸಮರ್ಪಕ ಉತ್ತರವಿದೆ ಅಂತಿದೆ.
ಜೊಹಾನ್ಸ್ಬರ್ಗ್ ಟೆಸ್ಟ್ ಪಂದ್ಯದಲ್ಲಿ ಮೊಹಮದ್ ಸಿರಾಜ್ ಇಂಜುರಿಗೆ ತುತ್ತಾಗಿದ್ದೆ ತಡ, ಇಶಾಂತ್ ಶರ್ಮಾ ಮುಂದಿನ ಟೆಸ್ಟ್ ಆಡ್ತಾರೆ ಎನ್ನಲಾಗಿತ್ತು. ಎತ್ತರದ ಅಡ್ವಾಂಟೇಜ್ ಬೇರೆ ಇದ್ದಿದ್ರಿಂದ ಡೆಲ್ಲಿ ವೇಗಿ ಕಣಕ್ಕಿಳಿಯೋದು ಪಕ್ಕಾ ಅನ್ನೋದು ಎಕ್ಸ್ಪರ್ಟ್ಗಳ ಒಪಿನಿಯನ್ ಕೂಡ ಆಗಿತ್ತು. ಅಚ್ಚರಿಯ ನಿರ್ಧಾರ ಕೈಗೊಂಡಿರುವ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್, ಉಮೇಶ್ ಯಾದವ್ಗೆ ಮಣೆ ಹಾಕಿದೆ.
ಮ್ಯಾನೇಜ್ಮೆಂಟ್ ನಡೆಯನ್ನ ಪ್ರಶ್ನಿಸಿದ ಶಾನ್ ಪೊಲಾಕ್
100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳನ್ನಾಡಿದ ಅನುಭವಿ ಇಶಾಂತ್ ಶರ್ಮಾಗೆ ಕೊಕ್ ಕೊಟ್ಟ ನಡೆಯನ್ನ ಸೌತ್ ಆಫ್ರಿಕಾ ಮಾಜಿ ವೇಗಿ ಶಾನ್ ಪೊಲಾಕ್ ಪ್ರಶ್ನಿಸಿದ್ದಾರೆ. ಅಷ್ಟೆಲ್ಲ ಪಂದ್ಯಗಳನ್ನ ಆಡಿದ ಅನುಭವವಿದ್ರೂ, ಕೊನೆಯ ಆಯ್ಕೆಯ ಬೌಲರ್ ಆಗಿ ಪರಿಗಣಿಸಿರೋದೇಕೆ ಅನ್ನೋದು ಶಾನ್ ಪೊಲಾಕ್ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸಮರ್ಪಕ ಉತ್ತರವನ್ನೂ ಹೊಂದಿದೆ.
ಇಶಾಂತ್ ಡ್ರಾಪ್ ಯಾಕೆ..?
ತವರಿನಲ್ಲಿ ಸೌತ್ ಆಫ್ರಿಕಾ ಪ್ರವಾಸಕ್ಕೂ ಮುನ್ನ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಇಶಾಂತ್ ಶರ್ಮಾ, ವಿಕೆಟ್ ಕಬಳಿಸುವಲ್ಲಿ ಎಡವಿದ್ರು. ಅದಾದ ಬಳಿಕ ಇಂಜುರಿಗೆ ತುತ್ತಾಗಿ ನಂತರದ ಪಂದ್ಯಕ್ಕೆ ಅಲಭ್ಯರಾದ್ರು. ಇದರ ಜೊತೆಗೆ ಇಂಗ್ಲೆಂಡ್ ವಿರುದ್ಧ ಲೀಡ್ಸ್ನಲ್ಲಿ ಆಡಿದ ಕೊನೆಯ ವಿದೇಶಿ ಪಂದ್ಯದಲ್ಲಿ ಇಶಾಂತ್ ವಿಕೆಟ್ ಬೇಟೆಯಾಡಲಿಲ್ಲ. ಕಳೆದ 13 ಇನ್ನಿಂಗ್ಸ್ಗಳಿಂದ ಕೇವಲ 14 ವಿಕೆಟ್ ಕಿತ್ತಿರುವ ಡೆಲ್ಲಿ ವೇಗಿ, ಮೊದಲನಂತೆ ಏಫೆಕ್ಟಿವ್ ಸ್ಪೆಲ್ ಮಾಡ್ತಿಲ್ಲ. ಇದು ಆಯ್ಕೆಗೆ ತೊಡಕಾಗಿದೆ.
ಇದೀಷ್ಟೇ ಅಲ್ಲ.. ಇಶಾಂತ್ ಶರ್ಮಾ ಟೀಮ್ ಇಂಡಿಯಾದ ಕೊನೆಯ ಆಯ್ಕೆಯ ವೇಗಿ ಆಗೋದಕ್ಕೆ ಉಳಿದ ಬೌಲರ್ಗಳ ಪ್ರದರ್ಶನವೂ ಕಾರಣವಾಗಿದೆ. 2021ರ ಅಂಕಿಅಂಶಗಳನ್ನೇ ಗಮನಿಸಿದ್ರೆ, ಇಶಾಂತ್ ಪ್ರದರ್ಶನ ಶಾರ್ದೂಲ್ ಠಾಕೂರ್ ಬೌಲಿಂಗ್ಗಿಂತ ಕೆಳಮಟ್ಟದಲ್ಲಿದೆ. ಇದೂ ಕೂಡ ಇಶಾಂತ್ ಆಯ್ಕೆಗಿರೋ ತೊಡಕಾಗಿದೆ.
2021ರಲ್ಲಿ ಭಾರತೀಯ ವೇಗಿಗಳು
2021 ಕ್ಯಾಲೆಂಡರ್ ವರ್ಷದಲ್ಲಿ 12 ಪಂದ್ಯಗಳನ್ನಾಡಿರುವ ಮೊಹಮ್ಮದ್ ಸಿರಾಜ್ 36 ವಿಕೆಟ್ ಕಬಳಿಸಿದ್ರೆ, ಜಸ್ಪ್ರಿತ್ ಬೂಮ್ರಾ 9 ಟೆಸ್ಟ್ ಪಂದ್ಯಗಳಿಂದ 30, ಮೊಹಮ್ಮದ್ ಶಮಿ 5 ಟೆಸ್ಟ್ ಪಂದ್ಯಗಳಿಂದ 23 ವಿಕೆಟ್ ಕಬಳಿಸಿದ್ದಾರೆ. 04 ಪಂದ್ಯಗಳನ್ನಾಡಿರುವ ಶಾರ್ದೂಲ್ ಠಾಕೂರ್ 16 ವಿಕೆಟ್ ಪಡೆದಿದ್ರೆ, 8 ಪಂದ್ಯಗಳನ್ನಾಡಿ ಇಶಾಂತ್ ಕಬಳಿಸಿರೋದು ಕೇವಲ 14 ವಿಕೆಟ್ಗಳಾಗಿವೆ.
ಕಳೆದೊಂದು ವರ್ಷದ ಪ್ರದರ್ಶನವನ್ನ ಗಮನಿಸಿದ್ರೆ, ಇಶಾಂತ್ ಶರ್ಮಾರನ್ನ ಕೈ ಬಿಟ್ಟಿದ್ದು ಉತ್ತಮ ನಿರ್ಧಾರವೇ ಆಗಿದೆ. ಆದ್ರೆ, ಹಿರಿಯ ಆಟಗಾರನಿಗೆ ಡ್ರಾಪ್ ಮಾಡಿದ ಬಗ್ಗೆ ಸರಿಯಾಗಿ ವಿವರಿಸಿದ್ಯಾ ಇಲ್ವಾ ಅನ್ನೋದು ಪ್ರಶ್ನೆಯಾಗಿದೆ. ಅದರ ಜೊತೆಗೆ ಇಶಾಂತ್ ಮುಂದಿನ ಭವಿಷ್ಯವೇನು ಅನ್ನೋದು ಕುತೂಹಲ ಮೂಡಿಸಿದೆ.