ಬೆಂಗಳೂರು: ಇಸ್ಪೀಟ್ ಅಡ್ಡೆ ಮೇಲೆ ಬಾಗಲೂರು ಪೊಲೀಸರು ದಾಳಿ ನಡೆಸಿ 9 ಮಂದಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ದಾಳಿ ವೇಳೆ ಬರೋಬ್ಬರಿ 6.70 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆ. ಇಷ್ಟೊಂದು ಪ್ರಮಾಣದ ಹಣವನ್ನ ನೋಡಿ ಪೊಲೀಸರೇ ಗಾಬರಿಯಾಗಿದ್ದಾರೆ. ಈಶಾನ್ಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ನೇತೃತ್ವದಲ್ಲಿ ದಾಳಿ ನಡೆದಿತ್ತು. ದಾಳಿ ವೇಳೆ ಆರೋಪಿಗಳು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ನೇರವಾಗಿ ಪೊಲೀಸರು ಮನೆಯೊಳಗೆ ನುಗ್ಗಿದ್ದರಿಂದ ಆರೋಪಿಗಳು ಅಲ್ಲೇ ಲಾಕ್ ಆಗಿದ್ದಾರೆ.

ಇನ್ನು ಪೊಲೀಸರ ತಪಾಸಣೆ ವೇಳೆ ಇಸ್ಪೀಟ್ ಆಡುವುದರ ಜೊತೆಗೆ ಡ್ರಿಂಕ್ಸ್​ ಮಾಡುತ್ತಿರೋದು ಕಂಡು ಬಂದಿದೆ. ಅಲ್ಲಲ್ಲಿ ಮದ್ಯದ ಬಾಟಲಿ ಹಾಗೂ ಮದ್ಯ ಕುಡಿದ ಲೋಟಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರೋದು ಕಂಡು ಬಂದಿದೆ. ಸದ್ಯ 9 ಮಂದಿಯನ್ನ ವಶಕ್ಕೆ ಪಡೆದ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.

The post ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರಿಗೇ ಕಾದಿತ್ತು ಶಾಕ್ appeared first on News First Kannada.

Source: newsfirstlive.com

Source link