ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ್ದ ಪೊಲೀಸ್ ಪೇದೆಗಳ ವಿರುದ್ಧವೇ ಕೇಸ್ ಬುಕ್, ಕೆಲಸದಿಂದ ಸಸ್ಪೆಂಡ್ – four police constable suspended for not registered a case against gambling


ದೀಪಾವಳಿ ಹಿನ್ನೆಲೆ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ನಾಲ್ವರು ಪೋಲಿಸ್​ ಪೇದೆಗಳು ದಾಳಿ ಮಾಡಿದ್ದು, ಪೇದೆಗಳು ಮೂವರು ಜೂಜುಕೋರರಿಂದ 20 ಸಾವಿರ ಹಣ ಹಾಗೂ ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.

ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ್ದ ಪೊಲೀಸ್ ಪೇದೆಗಳ ವಿರುದ್ಧವೇ ಕೇಸ್ ಬುಕ್, ಕೆಲಸದಿಂದ ಸಸ್ಪೆಂಡ್

ಸಾಂಧರ್ಬಿಕ ಚಿತ್ರ

ವಿಜಯನಗರ: ಈ ದೀಪಾವಳಿ ಹಬ್ಬ ಪೊಲೀಸ್​ ಪೇದಗಳ ಪಾಲಿಗೆ ಮರೆಯಲಾರದಂತ ಹಬ್ಬವಾಗಿದೆ. ಎಲ್ಲಡೆ ಬೆಳಕು ಆವರಿಸಿದರೆ ಇವರ ಜೀವನದಲ್ಲಿ ಕತ್ತಲು ಆವರಿಸಿತು. ದೀಪಾವಳಿ (Deepavali) ಹಿನ್ನೆಲೆ ಇಸ್ಪೀಟ್  (Gambling) ಆಡುತ್ತಿದ್ದು, ಅಡ್ಡೆ ಮೇಲೆ ನಾಲ್ವರು ಪೋಲಿಸ್​ ಪೇದೆಗಳು (Police Constable) ದಾಳಿ ಮಾಡಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡು ಕೆಲ ಜೂಜುಕೋರರು ಓಡಿ ಹೋಗಿದ್ದಾರೆ. ಸಿಕ್ಕಿ ಬಿದ್ದ ಮೂವರು ಜೂಜುಕೋರರ ಬಳಿ 20 ಸಾವಿರ ಹಣ ಹಾಗೂ ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.

ಬಳಿಕ ವೆಂಕಟೇಶ್ ಎಂಬವರು ಸ್ಥಳಿಯರು ಪ್ರಕರಣದ ಕುರಿತು ಮಾಹಿತಿ ಪಡೆಯಲು ಪೊಲೀಸ್​ ಠಾಣೆಗೆ ಬಂದಿದ್ದಾರೆ. ಈ ವೇಳೆ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ನಂತರ ವೆಂಕಟೇಶ್​​ ನಾಲ್ವರು ಪೊಲೀಸ್​​ ಪೇದಗಳ ವಿರುದ್ಧ ಹೊಸಪೇಟೆ ಪಟ್ಟಣ ಪೊಲೀಸ್​​ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ನಾಲ್ವರು ಪೊಲೀಸ್​ ಪೇದೆಗಳಾದ ಮಹೇಶ. ಅಭಿಷೇಕ್. ಮಂಜುನಾಥ, ಶ್ರೀಕಾಂತರನ್ನು ಪೊಲೀಸರು ನ್ಯಾಯಾಲಕ್ಕೆ ಹಾಜರು ಪಡಿಸಿದ್ದಾರೆ.

ನ್ಯಾಯಾಲಯ ನಾಲ್ವರು ಪೇದೆಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ನಂತರ ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ನಾಲ್ವರು ಪೇದೆಗಳನ್ನು ಅಮಾನತು ಮಾಡಿ ಎಸ್​.ಪಿ ಡಾ. ಕೆ ಅರುಣ್ ಆದೇಶ ಹೊರಡಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ

TV9 Kannada


Leave a Reply

Your email address will not be published.