ಇಸ್ರೇಲ್ ವಾಯುದಾಳಿಯಲ್ಲಿ ಕುಟುಂಬದ 10 ಮಂದಿ ಸಾವು, ಬದುಕುಳಿದ 6 ತಿಂಗಳ ಮಗು

ಇಸ್ರೇಲ್ ವಾಯುದಾಳಿಯಲ್ಲಿ ಕುಟುಂಬದ 10 ಮಂದಿ ಸಾವು, ಬದುಕುಳಿದ 6 ತಿಂಗಳ ಮಗು

ಗಾಜಾದ ಹಮಾಸ್ ಬಂಡುಕೋರರೊಂದಿಗೆ ಆರಂಭಗೊಂಡ ಇಸ್ರೇಲ್ ಮಿಲಿಟರಿ ಪಡೆಯ ಯುದ್ಧ ದಿನೇ ದಿನೇ ತೀವ್ರತೆ ಪಡೆದುಕೊಳ್ಳುತ್ತಿದೆ. ಗಾಜಾ ನಗರದಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಿಂದ ಒಂದೇ ಕುಟುಂಬದ ಸುಮಾರು 10  ಮಂದಿ ಸಾವನ್ನಪ್ಪಿದ್ದು, ಪವಾಡಸದೃಶವೆಂಬಂತೆ ಆರು ತಿಂಗಳ ಮಗು ಬದುಕುಳಿದಿದೆ.

ಈದ್ ಅಲ್-ಫಿತರ್ ರಜಾದಿನವನ್ನು ಆಚರಿಸಲು ಪತ್ನಿ ಮತ್ತು ಐದು ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ದಾಳಿಗೆ ಸಿಲುಕಿ ಕುಟುಂಬದ ಬಹುತೇಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಮಗುವಿನ ತಂದೆ ಮೊಹಮ್ಮದ್ ಹದೀದಿ ಹೇಳಿದ್ದಾರೆ.  ಕಳೆದ ಶನಿವಾರ ಘಟನೆ ನಡೆದಿದ್ದು ಸಾವನ್ನಪ್ಪಿದ ಕುಟುಂಬದ 10 ಮಂದಿ ಪೈಕಿ ಬಹುತೇಕ ಪುಟ್ಟ ಮಕ್ಕಳೇ ಆಗಿದ್ದಾರೆ.

ಪತ್ನಿ ಮತ್ತು 6 ರಿಂದ 14 ವರ್ಷದ ಮಕ್ಕಳಲ್ಲಿ ಮೂವರು ಸಾವನ್ನಪ್ಪಿದ್ದರೆ, 11 ವರ್ಷದ ಮಗು ಕಾಣೆಯಾಗಿದೆ. ಆರು ತಿಂಗಳ ಮಗ ಒಮರ್ ಮಾತ್ರ ಬದುಕುಳಿದಿದ್ದಾನೆ ಎಂದು ಹದೀದಿ ತಿಳಿಸಿದ್ದಾರೆ. ಬದುಕುಳಿದ ಮಗುವಿಗೆ ಕಾಲು ಮುರಿದಿದೆ. ಮಗುವನ್ನು ಗಾಜಾದ ಅಲ್-ಶಿಫಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗ್ತಿದೆ.  ದಾಳಿಯ ಬೆನ್ನಲ್ಲೇ ನೂರಾರು ಜನರು ಗಾಜಾ ನಗರದ ಬೀದಿಗಳಲ್ಲಿ, ಕುಟುಂಬ ಸದಸ್ಯರ ಮೃತದೇಹಗಳನ್ನು ಹೊತ್ತು ಮೆರವಣಿಗೆ ನಡೆಸಿದ್ದಾರೆ.

ಸೋಮವಾರ ರಾತ್ರಿಯಿಂದ ಹಮಾಸ್ ಬಂಡುಕೋರರು ಇಸ್ರೇಲ್​ ಮೇಲೆ ನೂರಾರು ರಾಕೆಟ್​ಗಳನ್ನ ಹಾರಿಸಿದ್ದಾರೆ. ಅಕ್ಕದೆ ಪ್ರತೀಕಾರವಾಗಿ ಇಸ್ರೇಲ್ ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ನಡೆಸಿದೆ. ಗಾಜಾದಲ್ಲಿ 31 ಮಕ್ಕಳು ಮತ್ತು 20 ಮಹಿಳೆಯರು ಸೇರಿದಂತೆ ಕನಿಷ್ಠ 126 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ನಲ್ಲಿ 6 ವರ್ಷದ ಬಾಲಕ ಮತ್ತು ಸೈನಿಕ ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆಂದು ವರದಿಯಾಗಿದೆ.

The post ಇಸ್ರೇಲ್ ವಾಯುದಾಳಿಯಲ್ಲಿ ಕುಟುಂಬದ 10 ಮಂದಿ ಸಾವು, ಬದುಕುಳಿದ 6 ತಿಂಗಳ ಮಗು appeared first on News First Kannada.

Source: newsfirstlive.com

Source link