ಬೆಂಗಳೂರು: ಕೊರೊನಾ ವಿರುದ್ಧ ಹೋರಾಟದಲ್ಲಿ ಇಡೀ ದೇಶ ಮಗ್ನವಾಗಿರುವ ಸಂದರ್ಭದಲ್ಲಿ ಇಂಡಿಯನ್ ಸ್ಪೇಸ್​ ರಿಚರ್ಜ್​ ಆರ್ಗನೈಸೇಷನ್​ನಿಂದ ಒಂದು ಗುಡ್​​ನ್ಯೂಸ್​ ಸಿಕ್ಕಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದ ಆಸ್ಪತ್ರೆಗಳಲ್ಲಿ ವೆಂಟಿಲೇಟರ್​​ಗಳ ಅಭಾವ ಎದುರಾಗಿದೆ. ಈ ಎಲ್ಲಾ ಕೊರತೆಗಳನ್ನ ಮುಂದಿನ ದಿನಗಳಲ್ಲಿ ನೀಗಿಸುವಂತಹ ಸುದ್ದಿಯನ್ನ ಇಸ್ರೋ ನೀಡಿದ್ದು, ತನ್ನಲ್ಲಿರುವ ತಂತ್ರಜ್ಞಾನಗಳನ್ನ ಬಳಸಿಕೊಂಡು ಮೂರು ನೂತನ ವೆಂಟಿಲೇಟರ್​​ಗಳನ್ನ ಅಭಿವೃದ್ಧಿಪಡಿಸಿರೋದಾಗಿ ತಿಳಿಸಿದೆ.

ತಿರುವನಂತಪುರಂನ ವಿಕ್ರಮ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಈ ಮೂರು ಮಾದರಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದಷ್ಟು ಬೇಗ ಕ್ಲಿನಿಕಲ್ ಬಳಕೆಗೆ ಉಪಯೋಗವಾಗುವ ಉದ್ದೇಶದಿಂದ ಈ ಟೆಕ್ನೋಲಜಿಯನ್ನ ವೆಂಟಿಲೇಟರ್​ ನಿರ್ಮಾಣ ಮಾಡುವ ವೈದ್ಯಕೀಯ ಉದ್ಯಮಗಳಿಗೆ ಪರಿಚಯಿಸಲು ಇಸ್ರೋ ಮುಂದಾಗಿದೆ. ಕಡಿಮೆ ವೆಚ್ಚದಲ್ಲಿ ಈ ವೆಂಟಿಲೇಟರ್​ಗಳನ್ನ ನಿರ್ಮಾಣ ಮಾಡಲಾಗಿದ್ದು, ಇವು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸುಲಭವಾಗಿ ಕೊಂಡಯ್ಯಬಲ್ಲ ‘ಪೊರ್ಟೆಬಲ್ ಕ್ರಿಟಿಕಲ್ ವೆಂಟಿಲೇಟರ್’​ಗಳಾಗಿವೆ.

ಮೂರು ವೆಂಟಿಲೇಟರ್​ಗಳು ಯಾವುದು?

  • ‘ಪ್ರಾಣ’ (PRANA: ಪ್ರೋಗ್ರಾಮೆಬಲ್ ರೆಸ್ಪಿರೇಟರಿ ಅಸಿಸ್ಟನ್ಸ್ ಫಾರ್ ನೀಡಿ ಏಡ್): ಈ ವೆಂಟಿಲೇಟರ್​ ಅತ್ಯಾಧುನಿ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿದೆ. ಏರ್​​ವೇ ಪ್ರೆಶರ್ ಸೆನ್ಸರ್ ಫ್ಲೋ ಸೆನ್ಸರ್, ಆಮ್ಲಜನಕ ಸೆನ್ಸಾರ್​, ಸೆರ್ವೋ ಆಕ್ಯೂವೇಟರ್​​ ಜೊತೆಗೆ ಆಧುನಿಕ ವ್ಯವಸ್ಥೆಗಳನ್ನ ಹೊಂದಿದೆ. ಇಲ್ಲಿ ವೆಂಟಿಲೇಷನ್​​ ಮೋಡ್​ಗಳನ್ನ ಸ್ಕ್ರೀನ್ ಟಚ್​​ಗಳ ಮೂಲಕ ಹೊಂದಿಸಬಹುದಾಗಿದೆ. ಕರೆಂಟ್ ಇಲ್ಲದಾಗ ಬ್ಯಾಟರಿ ಹಾಕುವ ಸೌಲಭ್ಯ ಕೂಡ ಇದರಲ್ಲಿ ಇದೆ.
  • VaU: ಇದು ಮೈಕ್ರೊ ಕಂಟ್ರೋಲರ್ ಅವಲಂಬಿತವಾಗಿದೆ.
  • SVASTA: (ಸ್ಪೇಸ್ ವೆಂಟಿಲೇಟರ್ ಏಡೆಡ್ ಸಿಸ್ಟಂ ಫಾರ್ ಟ್ರೌಮಾ ಅಸಿಸ್ಟನ್ಸ್): ಇದು ಗ್ಯಾಸ್ ಅವಲಂಬಿತ ವೆಂಟಿಲೇಟರ್. ತುರ್ತು ಬಳಕೆಗೆ ಇವುಗಳನ್ನ ಬಳಸಬಹುದಾಗಿದೆ.

The post  ಇಸ್ರೋದಿಂದ ಮತ್ತೊಂದು ಕೊಡುಗೆ, 3 ಸ್ಪೆಷಲ್ ವೆಂಟಿಲೇಟರ್​ಗಳ ಅಭಿವೃದ್ಧಿ   appeared first on News First Kannada.

Source: newsfirstlive.com

Source link