ಇಸ್ರೋ ಐತಿಹಾಸಿಕ ಸಾಧನೆ: ವಿದ್ಯಾರ್ಥಿಗಳು ರೂಪಿಸಿದ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಿದ ಎಸ್​ಎಸ್​ಎಲ್​ವಿ | ISROs Historic Achievement SSLV flight carries student satellites


AzaadiSAT ಮೂಲಕ ತಲಾ 50 ಗ್ರಾಂ ತೂಕದ 75 ಪೇಲೋಡ್​ಗಳನ್ನು (ಸಣ್ಣ ಉಪಗ್ರಹಗಳು) ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ.

ಇಸ್ರೋ ಐತಿಹಾಸಿಕ ಸಾಧನೆ: ವಿದ್ಯಾರ್ಥಿಗಳು ರೂಪಿಸಿದ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಿದ ಎಸ್​ಎಸ್​ಎಲ್​ವಿ

ಎಸ್​ಎಸ್​ಎಲ್​ವಿ ಉಡ್ಡಯನ

ಬೆಂಗಳೂರು: ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಪಗ್ರಹ ಉಡಾವಣೆ ಕೇಂದ್ರದಿಂದ ಎಸ್​ಎಸ್​ಎಲ್​ವಿ-ಡಿ1 (SSLV-D1) ಉಪಗ್ರಹ ಉಡ್ಡಯನ ವಾಹನವು ಭಾನುವಾರ (ಆಗಸ್ಟ್ 7) ಬೆಳಿಗ್ಗೆ 9:18ರ ಪೂರ್ವ ನಿಗದಿತ ಸಮಯದಲ್ಲಿ ನಭಕ್ಕೆ ಚಿಮ್ಮಿತು. AzaadiSAT ಮೂಲಕ ತಲಾ 50 ಗ್ರಾಂ ತೂಕದ 75 ಪೇಲೋಡ್​ಗಳನ್ನು (ಸಣ್ಣ ಉಪಗ್ರಹಗಳು) ಕಕ್ಷೆಗೆ ಸೇರಿಸಲು ಇಸ್ರೋ ಮುಂದಾಗಿದೆ. ಇಸ್ರೋ ರೂಪಿಸಿರುವ EOS-02 ಭೂ ನಿಗಾ ಉಪಗ್ರಹ ಮತ್ತು ಇಸ್ರೋ ಮಾರ್ಗದರ್ಶನದಲ್ಲಿ ದೇಶದ ವಿವಿಧೆಡೆಯ ಗ್ರಾಮೀಣ ವಿದ್ಯಾರ್ಥಿನಿಯರು ರೂಪಿಸಿರುವ 75 ಪುಟ್ಟ ಉಪಗ್ರಹಗಳು (ಪೇಲೋಡ್) ಈ ಬಾಹ್ಯಾಕಾಶ ವಾಹನದ ಮೂಲಕ ಅಂತರಿಕ್ಷದ ಭೂ ಕಕ್ಷೆ ಸೇರಿದವು.

SSLV-D1/EOS-02 ಯೋಜನೆಯ ಕೌಂಟ್​ಡೌನ್ ಭಾನುವಾರ ನಸುಕಿನ 02:26ಕ್ಕೆ ಆರಂಭವಾಗಿತ್ತು. ಕೊನೆಯ ಹಂತದ ಪ್ರಕ್ರಿಯೆ ಮತ್ತು ಪರಿಶೀಲನೆಗಳು ಮುಗಿದ ನಂತರ ಬೆಳಿಗ್ಗೆ 09:18ಕ್ಕೆ ಉಪಗ್ರಹ ಹೊತ್ತ ರಾಕೆಟ್​ ಆಗಸಕ್ಕೆ ನೆಗೆಯಿತು.

ಇಸ್ರೋದ ಭೂ-ಕೇಂದ್ರಗಳಲ್ಲಿ ರೂಪಿಸಿರುವ ‘ಸ್ಪೇಸ್ ಕಿಡ್ಸ್ ಇಂಡಿಯಾ’ (Space Kidz India) ವ್ಯವಸ್ಥೆಯ ಈ ಉಪಗ್ರಹಗಳು ರವಾನಿಸುವ ದತ್ತಾಂಶಗಳನ್ನು ಸ್ವೀಕರಿಸಲಿದೆ. ಈ ಸಣ್ಣ ಉಪಗ್ರಹಗಳಲ್ಲಿ ದೂರದ ಸಿಗ್ನಲ್​ಗಳನ್ನು ಗ್ರಹಿಸುವ / ರವಾನಿಸುವ ಪ್ರಬಲ ಟ್ರಾನ್ಸ್​ಪಾಂಡರ್​ ಮತ್ತು ಸೆಲ್ಫಿ ಕ್ಯಾಮೆರಾಗಳಿವೆ. ಇದೇ ಎಸ್​ಎಸ್​ಎಲ್​ವಿಯಲ್ಲಿ EOS-02 ಭೂ ನಿಗಾ ಉಪಗ್ರಹವೂ ಇದೆ. ಇದು ಕೃಷಿ, ಅರಣ್ಯ ಮತ್ತು ವಿಪತ್ತು ನಿರ್ವಹಣೆಗೆ ನೆರವಾಗಲಿದೆ.

ಇಸ್ರೋದ ಈ ಪ್ರಯತ್ನ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಬಾಹ್ಯಾಕಾಶ ಸಂಸ್ಥೆಯು 10ರಿಂದ 500 ಕೆಜಿ ತೂಗುವ ಮಿನಿ, ನ್ಯಾನೊ ಮತ್ತು ಮೈಕ್ರೊ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಪ್ರಯತ್ನಗಳನ್ನು ಆರಂಭಿಸಲಿದೆ. ಆರ್ಥಿಕವಾಗಿಯೂ ಇದು ಲಾಭದಾಯಕವಾಗಲಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *