ಇಸ್ಲಾಮಾಬಾದ್​​: ಪಾಕಿಸ್ತಾನದಿಂದ ಮತ್ತೊಂದು ಭದ್ರತಾ ಲೋಪ ಉಂಟಾಗಿದ್ದು, ಇಸ್ಲಾಮಾಬಾದ್​ನಲ್ಲಿರುವ ಭಾರತದ ಹೈಕಮಿಷನ್ ಕಚೇರಿ ಮೇಲೆ ಡ್ರೋಣ್​ ಹಾರಾಡಿದೆ. ಇತ್ತೀಚೆಗೆ ಜಮ್ಮುವಿನ IAF ವಾಯುನೆಲೆಯಲ್ಲಿ ಡ್ರೋಣ್​ ಮೂಲಕ IED ಸ್ಫೋಟ ನಡೆದಿತ್ತು. ಈ ಸ್ಫೋಟಕ್ಕೆ ಪಾಕಿಸ್ತಾನದ ಡ್ರೋಣ್ ಬಳಕೆಯಾಗಿ ಎನ್ನಲಾಗಿದೆ. ಈ ಬೆಳವಣಿಗೆ ಮಧ್ಯೆ ಭಾರತ ಹೈಕಮಿಷನರ್ ಕಚೇರಿ ಮೇಲೆ ಡ್ರೋಣ್ ಹಾರಾಡಿರೋದು ಆತಂಕಕ್ಕೆ ಕಾರಣವಾಗಿದೆ. ಇದನ್ನ ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನವನ್ನ ತರಾಟೆಗೆ ತೆಗೆದುಕೊಂಡಿದೆ.

ವರದಿಗಳ ಪ್ರಕಾರ ಇಂಡಿಯನ್ ಹೈಕಮಿಷನ್ ಕಚೇರಿ ಮೇಲೆ ಕಳೆದ ವಾರ ಹಾರಾಟ ನಡೆಸಿದೆ. ಆದರೆ ಇದುವರೆಗೂ ಅಧಿಕೃತವಾಗಿ ಭಾರತೀಯ ಅಧಿಕಾರಿಗಳು ಈ ಘಟನೆ ಬಗ್ಗೆ ಸ್ಪಷ್ಟಪಡಿಸಿಲ್ಲ. ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಡ್ರೋಣ್​ಗಳ ಹಾರಾಟ ಮತ್ತು ಜಮ್ಮುವಿನಲ್ಲಿ ನಡೆದ ಸ್ಫೋಟ ಪ್ರಕರಣದ ಬೆನ್ನಲ್ಲೇ ಪಾಕಿಸ್ತಾನದಿಂದ ಮತ್ತೊಂದು ಭದ್ರತಾ ನಿಯಮ ಉಲ್ಲಂಘನೆಯಾಗಿದೆ ಎಂದು ಭಾರತ ಆರೋಪಿಸಿದೆ.

ಜೂನ್ 27 ರಂದು ವಾಯುನೆಯಲ್ಲಿ ನಡೆದ ಸ್ಫೋಟ ಪ್ರಕರಣದ ಬಳಿಕ ಜೂನ್ 30 ರಂದು ಜಮ್ಮುವಿನಲ್ಲಿ ಪಾಕಿಸ್ತಾನದ ಎರಡು ಡ್ರೋನ್‌ಗಳು ಕಾಣಿಸಿಕೊಂಡಿದ್ದವು. ಕಲುಚಕ್ ಪ್ರದೇಶದಲ್ಲಿ ಮುಂಜಾನೆ 4:40ಕ್ಕೆ ಒಂದು ಡ್ರೋನ್ ಕಾಣಿಸಿಕೊಂಡರೆ, ಇನ್ನೊಂದು ಡ್ರೋನ್ ಕುಂಜವಾಣಿಯಲ್ಲಿ ಮುಂಜಾನೆ 4:52 ಕ್ಕೆ ಕಾಣಿಸಿಕೊಂಡಿತ್ತು. ಇನ್ನೊಂದು ವಿಚಾರ ಏನಂದ್ರೆ ಈ ಎರಡೂ ಪ್ರದೇಶಗಳು ಜುಮ್ಮು ವಾಯುನೆಲೆಯಿಂದ ಕೇವಲ 7 ರಿಂದ 10 ಕಿ.ಮೀ ಅಂತರದಲ್ಲಿದೆ.

The post ಇಸ್ಲಾಮಾಬಾದ್​ನಲ್ಲಿ ಪಾಕ್​ ಕಿರಿಕ್; ಭಾರತದ ಕಚೇರಿ ಮೇಲೆ ಹಾರಿದ ಡ್ರೋಣ್ appeared first on News First Kannada.

Source: newsfirstlive.com

Source link