ನವದೆಹಲಿ: ಪಾಕಿಸ್ತಾನದಲ್ಲಿ ಹಣದುಬ್ಬರ ಕೈಮೀರಿ ಹೋಗಿದೆ. ತೀರಿಸಲು ಅಸಾಧ್ಯವಾಗಷ್ಟು ವಿದೇಶಿ ಸಾಲದ ಸುಳಿಯ ಸಂಕಷ್ಟದಲ್ಲಿ ಟೆರರಿಸ್ತಾನ ಇದೆ. ಸಾಲ ಎಲ್ಲೂ ಹುಟ್ಟುತ್ತಿಲ್ಲ, ಆದರೆ ಇಮ್ರಾನ್ ಖಾನ್ ಕೈಚಾಚೋದನ್ನ ಬಿಡ್ತಿಲ್ಲ. ಇದೀಗ ತಮ್ಮ ದೇಶದ ಸಾರ್ವಭೌಮತ್ವದೊಂದಿಗೆ ಇಮ್ರಾನ್ ಖಾನ್ ರಾಜಿ ಮಾಡಿಕೊಂಡಿದ್ದಾರೆ. ಹಣದುಬ್ಬರ ವಿಚಾರದಲ್ಲಿ ನಡೆಯನ್ನ ಸರ್ಬಿಯಾದ ಪಾಕ್ ರಾಯಭಾರಿ ಖಂಡಿಸಿದೆ. ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮಾನ ಮರ್ಯಾದೆಯನ್ನ ಹರಾಜಿಗೆ ಹಾಕಿ ಅವಮಾನಿಸಲಾಗಿದೆ.
ಇತ್ತೀಚೆಗೆ, ಸರ್ಬಿಯಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಟ್ವೀಟ್ ಮಾಡುವ ಮೂಲಕ ಮತ್ತು ಮೂರು ತಿಂಗಳಿಂದ ಸಂಬಳವನ್ನು ಪಾವತಿಸದಿರುವ ಬಗ್ಗೆ ದೂರು ನೀಡಿದಾಗ ಪಾಕಿಸ್ತಾನದಲ್ಲಿ ಕೋಲಾಹಲ ಉಂಟಾಗಿತ್ತು. ಈ ಟ್ವೀಟ್ನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನೂ ಟ್ಯಾಗ್ ಮಾಡಲಾಗಿದೆ. ಅದೇ ಟ್ವೀಟ್ ಕೆಳಗೆ ಮತ್ತೊಂದು ಟ್ವೀಟ್ ಇದ್ದು ಅದರಲ್ಲಿ ಬೇರೆ ಆಯ್ಕೆ ಇರಲಿಲ್ಲ ಎಂದು ಬರೆಯಲಾಗಿದೆ.
ಪಾಕಿಸ್ತಾನದಲ್ಲಿ ಹಣದುಬ್ಬರ ಮಿತಿ ಮೀರಿ ಹೋಗಿದೆ. ಈ ಹಿಂದೆ ದಾಖಲಾಗಿದ್ದ ಎಲ್ಲಾ ದಾಖಲೆಗಳು ಉಡೀಸ್ ಆಗಿದೆ. ಇಮ್ರಾನ್ ಖಾನ್ ಅವರೇ ನಾವು ಎಷ್ಟು ದಿನಮೌನವಾಗಿ ಇರಬೇಕು ಎಂದು ನಿರೀಕ್ಷೆ ಮಾಡುತ್ತಿದ್ದೀರಿ? ಸಂಬಳ ಇಲ್ಲದೇ ಮೂರು ತಿಂಗಳ ಆಗಿದೆ. ಅಧಿಕಾರಿಗಳ ಮಕ್ಕಳಿಗೆ ಶಾಲೆ ಫೀಸ್ ಕಟ್ಟಲಾಗದೇ ಅವರನ್ನ ಹೊರ ಹಾಕಲಾಗಿದೆ. ಸಂಬಳ ನೀಡದಿದ್ದರೂ ಕೆಲಸ ಮಾಡುತ್ತಿದ್ದೇವೆ. ಇದೇನಾ ನಿಮ್ಮ ‘ನಯಾ ಸರ್ಕಾರ’ ಎಂದು ರಾಯಭಾರಿ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.
ಈ ಟ್ವೀಟ್ನಿಂದಾಗಿ ಪಾಕಿಸ್ತಾನ ಭಾರೀ ಅವಮಾನಕ್ಕೆ ಒಳಗಾಗಿದೆ. ವಿಶ್ವದಾದ್ಯಂತ ಭಾರೀ ವೈರಲ್ ಆಗ್ತಿದ್ದಂತೆಯೇ, ಇಮ್ರಾನ್ ಖಾನ್ ಸರ್ಕಾರ ಈ ಟ್ವೀಟ್ ಅನ್ನ ಡಿಲೀಟ್ ಮಾಡಿಸಿದೆ.
ಅಂದ್ಹಾಗೆ ಪಾಕಿಸ್ತಾನದಲ್ಲಿ ಉಂಟಾಗಿರುವ ಹಣದುಬ್ಬರದಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. 70 ವರ್ಷಗಳಲ್ಲಿಯೇ ಇದೇ ಮೊದಲ ಬಾರಿಗೆ ಹಣದುಬ್ಬರ ಗರಿಷ್ಠ ಮಟ್ಟವನ್ನು ತಲುಪಿದೆ. ಆಹಾರ ಪದಾರ್ಥಗಳ ಬೆಲೆ ದುಪ್ಪಟ್ಟಾಗಿದೆ. ತುಪ್ಪ, ಎಣ್ಣೆ, ಮೈದಾ, ಕೋಳಿಮಾಂಸದ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಡೀಸೆಲ್-ಪೆಟ್ರೋಲ್ ಬೆಲೆಗಳು ಸಾಮಾನ್ಯ ಜನರ ಕೈಗೆ ಸಿಗುತ್ತಿಲ್ಲ. ಹೀಗಾಗಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಅಲ್ಲಿನ ನಾಗರಿಕರು ರೊಚ್ಚಿಗೆದ್ದಿದ್ದಾರೆ.
ಹೆಚ್ಚುತ್ತಿದೆ ವಿದೇಶಿ ಸಾಲ
ಪಾಕಿಸ್ತಾನದ ಮೇಲಿನ ವಿದೇಶಿ ಸಾಲ ನಿರಂತರವಾಗಿ ಹೆಚ್ಚುತ್ತಿದೆ. ದಿನನಿತ್ಯದ ಖರ್ಚನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪವನ್ನ ಎದುರಿಸುತ್ತಿರುವ ಪಾಕಿಸ್ತಾನಕ್ಕೆ ವಿಶ್ವದಲ್ಲಿ ಒಳ್ಳೆಯ ಹೆಸರು ಇಲ್ಲ. ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ನ ಗ್ರೇ ಲಿಸ್ಟ್ನಲ್ಲಿ ಪಾಕಿಸ್ತಾನ ಇದೆ.
The post ಇ್ರಮಾನ್ ಖಾನ್ ಶೇಪ್ ಔಟ್; ಪಾಕ್ ರಾಯಭಾರಿ ಕಚೇರಿಯಿಂದಲೇ ಸಂಬಳಕ್ಕಾಗಿ ಟ್ವೀಟ್ appeared first on News First Kannada.