ಈಕೆ ಪಾಕಿಸ್ತಾನಿ ಕ್ರಿಕೆಟರ್ ಪತ್ನಿ.. ಆದ್ರೆ ವಿರಾಟ್ ಕೊಹ್ಲಿಗೆ ಬಿಗ್​ ಫ್ಯಾನ್​

ಈಕೆ ಪಾಕಿಸ್ತಾನಿ ಕ್ರಿಕೆಟರ್ ಪತ್ನಿ.. ಆದ್ರೆ ವಿರಾಟ್ ಕೊಹ್ಲಿಗೆ ಬಿಗ್​ ಫ್ಯಾನ್​

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೇವಲ ಭಾರತವಷ್ಟೇ ಅಲ್ಲದೇ ವಿದೇಶಗಳಲ್ಲೂ ಫ್ಯಾನ್ ಫಾಲೋವರ್ಸ್​ ಹೊಂದಿದ್ದಾರೆ. ಅಚ್ಚರಿ ಅಂದ್ರೆ ಪಾಕ್ ಕ್ರಿಕಟಿಗನ ಪತ್ನಿಯೂ ಸಹ ವಿರಾಟ್ ಕೊಹ್ಲಿಗೆ ಫ್ಯಾನ್ ಆಗಿದ್ದಾರೆ.

ಪಾಕಿಸ್ತಾನಿ ಕ್ರಿಕೆಟರ್ ಹಸನ್ ಅಲಿ ಪತ್ನಿ ಶಾಮಿಯಾ ಅರ್​ಜೂಗೆ ವಿರಾಟ್ ಕೊಹ್ಲಿ ಫೇವರೀಟ್ ಕ್ರಿಕೆಟರ್​ ಅಂತೆ. ಅಷ್ಟೇ ಅಲ್ಲದೆ ತಾನು ವಿರಾಟ್ ಕೊಹ್ಲಿಯ ಬಿಗ್ಗೆಸ್ಟ್ ಫ್ಯಾನ್ ಅಂತ ಶಾಮಿಯಾ ಅರ್ಜೂ ಹೇಳಿಕೊಂಡಿದ್ದಾರೆ.

ಶಾಮಿಯಾ ಅರ್ಜೂ ಪಾಕಿಸ್ತಾನ್ ಮೀಡಿಯಮ್ ಪೇಸರ್ ಹಸನ್ ಅಲಿ ಪತ್ನಿಯಾಗಿದ್ದರೂ ಅವರು ಮೂಲತಃ ಭಾರತೀಯರು. ಈಕೆ ಹುಟ್ಟಿ ಬೆಳೆದಿದ್ದು ಹರಿಯಾಣದಲ್ಲಿ. ಇನ್​ಸ್ಟಾಗ್ರಾಂನ ಸೆಷನ್​ ಒಂದರಲ್ಲಿ ಮಾತನಾಡುತ್ತಾ ವಿರಾಟ್​ ಕೊಹ್ಲಿ ನನ್ನ ಫೇವರೇಟ್ ಬ್ಯಾಟ್ಸ್​ಮ್ಯಾನ್.. ನಾನು ಅವರ ಬಿಗ್ ಫ್ಯಾನ್ ಅಂತ ಹೇಳಿಕೊಂಡಿದ್ದರು. ಈಕೆ 2019ರಲ್ಲಿ ದುಬೈನಲ್ಲಿ ಹಸನ್ ಅಲಿಯನ್ನ ವಿವಾವಾದ್ರು. ಇವರು ದುಬೈನ ಎಮಿರೇಟ್ಸ್​​ ಏರ್​ಲೈನ್ಸ್​ನಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ.

ಇಷ್ಟೇ ಅಲ್ಲ ಈ ಹಿಂದೆ ಮಾಕಿಸ್ತಾನದ ರಿಜ್ಲಾ ರೆಹಾನ್ ಎಂಬಾಕೆ 2019ರ ವರ್ಲ್​​ಕಪ್​ನಲ್ಲಿ ಇಂಟರ್​ವ್ಯೂ ಒಂದರಲ್ಲಿ ಭಾಗಿಯಾಗಿದ್ದ ವೇಳೆ ವಿರಾಟ್​​ರನ್ನ ನನಗೆ ಕೊಡಿ ಎಂದು ಹೇಳುವ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದನ್ನ ಇಲ್ಲಿ ಸ್ಮರಿಸಬಹುದು.

The post ಈಕೆ ಪಾಕಿಸ್ತಾನಿ ಕ್ರಿಕೆಟರ್ ಪತ್ನಿ.. ಆದ್ರೆ ವಿರಾಟ್ ಕೊಹ್ಲಿಗೆ ಬಿಗ್​ ಫ್ಯಾನ್​ appeared first on News First Kannada.

Source: newsfirstlive.com

Source link