ಈಕೆ ಸ್ಟೇಜ್​ ಹತ್ತಿದ್ರೆ ಸಾಕು ಹಣದ ಹೊಳೆ: IAS​ ಕನಸು ಕಂಡಿದ್ದ ಇವ್ರು ಸಂಚಲನ ಸೃಷ್ಟಿಸಿದ್ದು ಹೇಗೆ?


ಆಕೆ ಅಂದುಕೊಂಡಿದ್ದೊಂದು ಆಗಿದ್ದೇ ಮತ್ತೊಂದು.. ಅಂದುಕೊಂಡಿದ್ದಕ್ಕಿಂತ ಆಗಿದ್ದೇ ಆಕೆಗೆ ಇಂದು ವರವಾಗಿದೆ ಅಂದ್ರು ತಪ್ಪಾಗೋದಿಲ್ಲ. ಅವಳು ಒಮ್ಮೆ ಪ್ರತ್ಯಕ್ಷಗೊಂಡರೆ ಸಾಕು ಅಲ್ಲಿ ಹಣದ ಮಳೆಯೇ ಸುರಿಯುತ್ತೆ. ಹಾಗಂತ, ಅವಳೇನೂ ಡ್ಯಾನ್ಸರ್ ಅಲ್ಲ, ಪೇಮೆಂಟ್ ಗಾಯಕಿನೂ ಅಲ್ಲ… ಆದ್ರೂ ಆಕೆ ವೇದಿಕೆ ಮೇಲಿದ್ದರೆ ದುಡ್ಡಿನ ರಾಶಿಯಲ್ಲೇ ಮುಳುಗಿ ಹೋಗಿರ್ತಾಳೆ.. ಹಾಗಾದ್ರೆ ಅವಳ್ಯಾರು? ಅಷ್ಟೊಂದು ಹಣವನ್ನ ಸಂಪಾದನೆ ಮಾಡ್ತಿರೋದಾದ್ರೂ ಹೇಗೆ? ಆ ಸಂಪಾದನೆ ಯಾರಿಗೋಸ್ಕರ?

ಇತ್ತೀಚೆಗೆ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸದ್ದು ಮಾಡಿತ್ತು. ಆ ವಿಡಿಯೋವನ್ನ ನೋಡಿದವರು ಒಂದು ಕ್ಷಣ ಅವಕ್ಕಾಗಿ ಹೋಗಿದ್ರು.. ಯಾಕ್​ ಗೊತ್ತಾ? ಒಬ್ಬ ಕಲಾವಿದೆಯ ಮೇಲೆ ಕಾಸಿನ ಹೊಳೆಯನ್ನೇ ಹರಿಸಿದ್ದ ವ್ಯಕ್ತಿ..

ಇತ್ತೀಚೆಗೆ ವೇದಿಕೆಯಲ್ಲಿ ಈಕೆ ಕುಳಿತು ಹಾಡುತ್ತಿದ್ದರೆ ಅವರ ಮೇಲೆ ಹಣದ ಮಳೆಯೇ ಸುರಿಯುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹರಿದಾಡಿತ್ತು. ಸಾಮಾನ್ಯವಾಗಿ ಈ ರೀತಿ ಹಣವನ್ನು ಒಬ್ಬರ ಮೇಲೆ ಹಾಕುವುದು ಕ್ಯಾಬರೆ, ಡ್ಯಾನ್ಸ್​ ಬಾರ್​ಗಳಲ್ಲಿ ಮಾತ್ರ.. ಅಥವಾ ಪೇಮೆಂಟ್ ಮಾಡುವ ಪ್ರೈವೇಟ್‌ ಡ್ಯಾನ್ಸ್ ಕಾರ್ಯಕ್ರಮಗಳಲ್ಲಿ ಮಾತ್ರ. ಆದರೆ, ಈಕೆ ಆ ರೀತಿಯ ಮಹಿಳೆ ಅಲ್ಲವೇ ಅಲ್ಲ.. ಈಕೆ ಒಬ್ಬ ಮಹಾನ್​ ಗಾಯಕಿ.. ಈಕೆಯನ್ನು ಗುಜರಾತಿ ಜಾನಪದ ರಾಣಿ ಎಂದು ಖ್ಯಾತಿಯನ್ನ ಪಡೆದುಕೊಂಡಿದ್ದಾಳೆ.

28 ವರ್ಷದ ಊರ್ವಶಿ ರಾಡಾಡಿಯಾ ವೇದಿಕೆ ಮೇಲೆ ಬಂದ್ರೆ ಭರ್ಜರಿ ಮನರಂಜನೆ ಕಟ್ಟಿಟ್ಟಬುತ್ತಿ. ತನ್ನ ಮುಂದೆ ಹಾರ್ಮೋನಿಯಂ ಇಟ್ಕೊಂಡು ನುಡಿಸ್ತಾ ಗುಜರಾತಿ ಜಾನಪದ ಗೀತಿಗಳನ್ನ ಹಾಡುತ್ತಿದ್ರೆ, ಅಲ್ಲಿನ ಸಭಿಕರು ಈ ರೀತಿ ರಾಶಿ ರಾಶಿ ಹಣದ ಮಳೆಯನ್ನೇ ಸುರಿಸ್ತಾರೆ.. ಬರೀ ಗಂಡಸರು ಮಾತ್ರವಲ್ಲ,, ಮಹಿಳೆಯರು, ಯುವತಿಯರು, ಪುಟ್ಟ ಪುಟ್ಟ ಮಕ್ಕಳು ಎಲ್ಲರೂ ಈಕೆಯ ಮೇಲೆ ದುಡ್ಡನ್ನ ನೀರಿನಂತೆ ಹರಿಸಿಬಿಡ್ತಾರೆ..

ಇವಳು ಇವತ್ತು ಗುಜರಾತಿನಲ್ಲಿ ಎಷ್ಟು ಫೇಮಸ್​ ಅಂದ್ರೆ.. ಜಾನಪದ ಹಾಡುಗಳನ್ನ ಹಾಡೋ ಮೂಲಕವೇ ಭರ್ಜರಿ ಹೆಸರು ಮಾಡಿದ್ದಾಳೆ ಊರ್ವಶಿ.. ಜೊತೆ ಜೊತೆಗೆ ಈಕೆ ಮೇಲೆ ಮಳೆಯಂತೆ ಸುರಿಯೋ ಹಣದ ವಿಡಿಯೋ ನೋಡಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದಾರೆ. ಈ ವಿಡಿಯೋವನ್ನ ಆಕೆ ತನ್ನ ಸೋಷಿಯಲ್ ಮಿಡಿಯಾದ ಪೇಜ್​ನಲ್ಲಿ ಶೇರ್ ಮಾಡಿದ್ದಾಗ, ಅದನ್ನ ಗಮನಿಸಿದ್ದ ವೀಕ್ಷಕರೊಬ್ಬರು ಈ ಹಣವನ್ನೆಲ್ಲಾ ಏನು ಮಾಡುತ್ತಿರಾ ಎಂದು ಪ್ರಶ್ನೆ ಮಾಡಿದ್ದಾನೆ.. ಆ ಪ್ರಶ್ನೆಗೆ ಆಕೆ ಕೊಟ್ಟ ಉತ್ತರ ನೋಡಿ ಎಲ್ಲರು ನಿಬ್ಬೆರಗಾಗಿ ಹೋಗಿದ್ರು.

ಬಡ ಹೆಣ್ಣು ಮಕ್ಕಳ ವಿವಾಹಕ್ಕೆ, ವಿದ್ಯಾಭ್ಯಾಸಕ್ಕೆ ನೆರವು
ಊರ್ವಶಿಯ ಸಾಮಾಜಿಕ ಕಳಕಳಿಗೆ ಫಿದಾ ಆದ ನೆಟ್ಟಿಗರು

ಹೌದು.. ತನ್ನ ಮೇಲೆ ಸುರಿಯೋ ಬಹುತೇಕ ಪಾಲಿನ ಹಣವನ್ನ ಗುಜರಾತಿನಲ್ಲಿರೋ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಾಗೂ ಅವರ ಮಕ್ಕಳ ವಿವಾಹಕ್ಕಾಗಿ ಖರ್ಚು ಮಾಡ್ತೀನಿ ಅಂತಾ ಊರ್ವಶಿಯೇ ಬರೆದುಕೊಂಡಿದ್ದಾರೆ.. ಇದನ್ನ ನೋಡಿದ್ದ ನೆಟ್ಟಿಗರು ಈಕೆಯೆ ಕಾರ್ಯಕ್ಕೆ ಶಹಬ್ಬಾಸ್​ಗಿರಿ ನೀಡಿದ್ದಾರೆ. ಊರ್ವಶಿ ಹಾಡು ಹಾಡ್ತಿದ್ರೆ ಅಲ್ಲಿ ಏನೋ ಒಂದು ರೀತಿಯ ಭಕ್ತಿ ಕೇಳುಗರ ಮನದಲ್ಲಿ ಹಾಗೆಯೇ ಮೂಡಿಬಿಡುತ್ತೆ. ಇದೇ ಕಾರಣಕ್ಕಾಗಿ ಗುಜರಾತ್​ನಲ್ಲಿ ಸಖತ್ ಫೇಮಸ್ ಆಗಿರುವ ಊರ್ವಶಿ, ಸಾಕಷ್ಟು ಆಲ್ಬಮ್ ಸಾಂಗ್ ಗಳನ್ನೂ ಹಾಡಿದ್ದಾರೆ.

 

ನೋಡಿ ಈಕೆಯ ಕಂಠದಲ್ಲಿ ಮೂಡಿ ಬಂದಿರೋ ಆಲ್ಬಮ್ ಸಾಂಗ್ ಗಳು ಇದು.. ಇದೆಲ್ಲವೂ ಗುಜರಾತಿನ ಜಾನಪದ ಹಾಡುಗಳು.. ಇದನ್ನ ಹಾಡುತ್ತಾ ನಲಿಸುತ್ತಾ ಮನರಂಜಿಜಿ ಊರ್ವಶಿ ರಡಾಡಿಯಾವರನ್ನ ಗುಜರಾತಿನಲ್ಲಿ ಕರೆಯೋದೆ ಗುಜರಾತಿ ಜಾನಪದ ರಾಣಿ ಅಂತಾ
ಹೌದು… ಇದು ಈಕೆಗೆ ಕರಗತವಾಗಿರೋ ಮಹಾನ್ ಕಲೆ ಅಂದ್ರೆ ತಪ್ಪಾಗೋದಿಲ್ಲ.. ಇಷ್ಟೆಲ್ಲಾ ಆದ ಬಳಿಕ ದೇಶದಲ್ಲಿ ಈಕೆ ಯಾರು? ಈಕೆಯ ಹಿನ್ನಲೆ ಏನು ಎಂದು ಹುಡುಕಿಕೊಂಡು ಹೊರಟವರಿಗೆ ಒಂದಷ್ಟು ಅಚ್ಚರಿಯ ವಿಚಾರಗಳು ಗೊತ್ತಾಗಿದೆ. ಅದನ್ನ ಕೇಳಿದ ಎಂಥವರೂ ಓಹೋ ಹೌದಾ ಅಂತಾ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

6ನೇ ವಯಸ್ಸಿನಲ್ಲೇ ಹಾಡೋದಕ್ಕೆ ಶುರು ಮಾಡಿದ್ದ ಊರ್ವಶಿ

1990 ಮೇ 25 ರಂದು ಗುಜರಾತ್​​ನ ಅಮ್ರೇಲಿಯಲ್ಲಿ ಜನಿಸಿದ್ದ ಈಕೆ ಬೆಳೆಯುತ್ತಲೇ ಕ್ಲಾಸಿಕಲ್ ಮ್ಯೂಸಿಕ್​ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದರು.. ತನ್ನ ಮೂರನೇ ವಯಸ್ಸಿನಲ್ಲಿಯೇ ಈಕೆ ಕ್ಲಾಸಿಕಲ್ ಮ್ಯೂಸಿಕ್ ತರಬೇತಿಗೆಂದು ಮ್ಯೂಸಿಕ್​ ಕ್ಲಾಸ್​ಗೆ ಹೋಗ್ತಿದ್ಲು.. ಹೀಗೆ, ಸತತವಾಗಿ ಮೂರು ವರ್ಷಗಳ ಕಾಲ ತರಬೇತಿ ಪಡೆದುಕೊಂಡಿದ್ದ ಊರ್ವಶಿ ಮುಂದೆ ಏಕಾಂಗಿಯಾಗಿ ಜಾನಪದ ಹಾಡುಗಳನ್ನ

ಹಾಡೋದಕ್ಕೆ ಶುರು ಮಾಡಿಕೊಂಡಿದ್ದರು.
ಸಂಪಾದನೆ ಮಾಡುತ್ತಿದ್ದ ಹಣದಲ್ಲಿ ಕಲಿಸಿದ್ದ ಫೋಷಕರು

ಹೌದು.. ಊರ್ವಶಿ ರಾಡಾಡಿಯಾ ತಂದೆ ತಾಯಿ ಕಡು ಬಡತನದಲ್ಲಿ ಬೆಳೆದು ಬಂದಿದ್ದವರು.. ಕೂಲಿ ನಾಲಿ ಮಾಡಿಕೊಂಡು ಆಗಾಗ ವೇದಿಕೆ ಮೇಲೆ ಹಾಡುಗಳನ್ನ ಹಾಡುತ್ತ ಇಬ್ಬರೂ ಬಿಡಿಗಾಸು ಸಂಪಾದನೆ ಮಾಡುತ್ತಿದ್ದರು. ಹೀಗೆ, ಸಂಪಾದನೆ ಮಾಡಿ ಮನೆ ಖರ್ಚು ವೆಚ್ಚವನ್ನೆಲ್ಲಾ ಮುಗಿಸಿ ಮಿಕ್ಕ ಮೂರು ಸಾವಿರ ರೂಪಾಯಿ ಹಣವನ್ನ ಮಗಳ ಮ್ಯೂಸಿಕ್ ಟ್ಯೂಷನ್​​ಗಾಗಿ ಕೂಡಿಡುತ್ತಿದ್ರು. ಈ ವಿಚಾರವನ್ನ ಊರ್ವಶಿ ಇಂದಿಗೂ ಮೆಲಕು ಹಾಕಿಕೊಳ್ಳುತ್ತಾರೆ.

ಐಎಎಸ್​ ಅಧಿಕಾರಿಯಾಗುವ ಕನಸು ಹೊಂದಿದ್ದ ಊರ್ವಶಿ!

ಇನ್ನು ಚಿಕ್ಕಂದಿನಿಂದಲೂ ಸಮಾಜ ಸೇವೆ ಮಾಡಬೇಕು ಅಂದುಕೊಂಡಿದ್ದ ಊರ್ವಶಿ, ಚೆನ್ನಾಗಿ ಓದಿ ದೊಡ್ಡವಳಾದ ಮೇಲೆ ಐಎಎಸ್ ಅಧಿಕಾರಿ ಆಗಬೇಕು ಎಂದು ಅನ್ನೋ ಕನಸು ಕಂಡಿದ್ದಳು. ಆದ್ರೆ ಜೀವನದಲ್ಲಿ ಒಂದೊಂದೇ ತಿರುವು ಅಂತಾರಲ್ಲ ಹಾಗೆಯೇ ಊರ್ವಶಿ ಬಾಳಲ್ಲೂ ಒಂದು ಟ್ವಿಸ್​ ಸಿಕ್ಕಿತ್ತು..ಅದು 12 ನೇ ವಯಸ್ಸಿನಲ್ಲಿಯೇ ಮನೆಯ ಜವಾಬ್ದಾರಿ ಪೂರ್ತಿ ಈಕೆ ಮೇಲೆ ಬಂದಿದ್ದರಿಂದ ಓದನ್ನ ಮೊಟಕುಗೊಳಿಸಿ ಹೆಚ್ಚು ಹಾಡಿನತ್ತ ಗಮನ ಹರಿಸಿದ್ದರು.

ಅಲ್ಲಿಗೆ ಊರ್ವಶಿ ರಾಡಾಡಿಯಾರ ಐಎಎಸ್​ ಕನಸು ನುಚ್ಚು ನೂರಾಗಿತ್ತು. ಈಕೆ ವೇದಿಕೆ ಮೇಲೆ ಹೋಗಿ ಹಾಡಬೇಕಿತ್ತು, ಅದರಿಂದ ಬಂದ ಹಣದಿಂದಲೇ ಜೀವನ ನಡೆಯಬೇಕಿತ್ತು ಅಂತಾ ಒಂದು ಪರಿಸ್ಥಿತಿಯಲ್ಲಿ ಊರ್ವಶಿ ಸಿಲುಕಿಕೊಂಡಿದ್ದರು..ಅದ್ರಂತೆ ಆಕೆ ಜಾನಪದ ಹಾಡುಗಳನ್ನ ಹಾಡೋದಕ್ಕೆ ಶುರು ಮಾಡಿಕೊಂಡಿದ್ದರು. ಆದ್ರೆ, ಅಷ್ಟು ದೊಡ್ಡ ಮಟ್ಟದಲ್ಲಿ ಆಕೆ ಹೆಸರು ಮಾಡೋದಕ್ಕೆ ಸಾಧ್ಯವಾಗಿರಲಿಲ್ಲ. ಆದ್ರೆ ಅದೊಂದು ಅವಕಾಶ ಆಕೆ ಯಾರು ಅನ್ನೋದು ಗುಜರಾತಿನಲ್ಲಿ ತೋರಿಸಿಕೊಟ್ಟಿತ್ತು.

ಆಕಸ್ಮಿಕವಾಗಿ ಒದಗಿಬಂದಿತ್ತು ಅದೃಷ್ಟದ ಅವಕಾಶ!

ಆಕೆಯ ಮೊದಲ ಪರ್ಫಾರ್ಮೆನ್ಸ್​​​​ ಒಂದು ರೋಚಕ ಕಥೆ ಆಗಿತ್ತು. ಆಕೆಗೆ ಅಲ್ಲಿ ಅವಕಾಶ ಸಿಗೋದು ಬಹಳ ಅನುಮಾನ ಆಗಿತ್ತು. ಆದ್ರೂ, ಕೂಡ ಊರ್ವಶಿಗೆ ಅಂದು ಒಂದು ದೊಡ್ಡ ವೇದಿಕೆ ಮೇಲೆ ಹಾಡು ಹಾಡೋದಕ್ಕೆ ಅವಕಾಶ ಬಂದೊದಗಿತ್ತು. ಆವತ್ತು ಬೇರೊಬ್ಬರು ಆ ವೇದಿಕೆಯಲ್ಲಿ ಪ್ರದರ್ಶನ ನೀಡಬೇಕಿತ್ತು..ಆದ್ರೆ, ಕಾರಣಾಂತರಗಳಿಂದಾಗಿ ಒಬ್ಬ ಖ್ಯಾತ ಲೇಡಿ ಗಾಯಕಿಯೊಬ್ಬರು ಬರೋದು ತಡವಾಗಿತ್ತು. ಅವರು ಬರೋದು ತಡವಾಗಿದ್ದರಿಂದ ಅಲ್ಲಿ ನೆರೆದಿದ್ದ ಗಣ್ಯರ ಮುಂದೆ ಯಾವುದೇ ಅವಮಾನ ಆಗಬಾರದೆಂದು ಅಲ್ಲೇ ಇದ್ದ ಊರ್ವಶಿ ರಾಡಾಡಿಯ ಅವರಿಗೆ ಹಾಡೋದಕ್ಕೆ ವೇದಿಕೆಯನ್ನ ಕಲ್ಪಿಸಿಕೊಡಲಾಗಿತ್ತು.ಅಂದು ಆಕೆ ಹಾಡಿದ್ದನ್ನ ನೋಡಿದ್ದ ಅಲ್ಲಿ ನೆರೆದಿದ್ದ ಗಣ್ಯರು ಒಳ್ಳೆ ಫ್ಯೂಚರ್​ ಇದೆ ಅಂತಾ ಭವಿಷ್ಯ ನುಡಿದಿದ್ರು.. ಅಲ್ಲಿಂದಲೇ ನೋಡಿ ಈಕೆಯ ಅದೃಷ್ಟದ ಬಾಗಿಲು ತೆರೆದುಕೊಂಡಿದ್ದು.

 

ಅಂದು ಹಾಡೋದಕ್ಕೆ ಶುರುಮಾಡಿದ್ದ ಊರ್ವಶಿ ಗುಜರಾತಿ ಸಂಗೀತ ಉದ್ಯಮದಲ್ಲಿ ದೊಡ್ಡ ಹೆಸರನ್ನ ಇಂದು ಮಾಡಿದ್ದಾರೆ. ದ್ವಾರಿಕಾ, ಭಾವ್ ನಾ ಫೆರಾ, ನಗರ್ ನಂದ್ ಜಿ ನಾ ಲಾಲ್ ಮತ್ತು ಕಸುಂಬಿ ನೋ ರಂಗ್ ನಂತಹ ಹಾಡುಗಳು ಅವರಿಗೆ ಹೆಚ್ಚು ಖ್ಯಾತಿಯನ್ನ ತಂದು ಕೊಟ್ಟಿತ್ತು. ಆ ಮೂಲಕ ಗುಜರಾತ್ ಅಷ್ಟೇ ಅಲ್ಲದ ಉತ್ತರ ಭಾರತದಲ್ಲಿ ಹೆಚ್ಚು ಅಭಿಮಾನಗಳನ್ನ ಹೊಂದಿದ್ದಾರೆ.

ಊರ್ವಶಿಯ ಒಂದು ಶೋಗೆ 15 ಲಕ್ಷ ರೂಪಾಯಿ!
ವರ್ಷಕ್ಕೆ 100 ಶೋ ಮುಂಗಡವಾಗಿಯೇ ಬುಕ್​!

ನಮ್ಮ ಕಡೆಯೆಲ್ಲೆಲ್ಲಾ ಆರ್ಕೆಸ್ಟ್ರಾ ಅಂತಾ ಕಾರ್ಯಕ್ರಮಗಳನ್ನ ನಡೆಸಬೇಕಾದ್ರೆ ಅವರಿಗೆ ಹಣ ಕೊಟ್ಟು ಕರೆಸುಕೊಳ್ಳುವಂತೆ, ಗುಜರಾತ್​ನಲ್ಲಿ ಮದುವೆ ಸಮಾರಂಭಗಳು, ಜಾತ್ರ ಮಹೋತ್ಸವಗಳ ಸಂದರ್ಭದಲ್ಲಿ 15 ಲಕ್ಷ ಕೊಟ್ಟು ಕಲಾವಿದರನ್ನ ಕರೆಸಿಕೊಳ್ಳಲಾಗುತ್ತೆ. ಇದು ಕೇವಲ ಅವರಿಗೆ ನೀಡುವ ಸಂಭಾವನೆ. ಇದನ್ನ ಹೊರತುಪಡಿಸಿ ಇವರ ಮೇಲೆ ಸುರಿಯೋ ಹಣವೆಲ್ಲಾ ಅಭಿಮಾನಿಗಳು ತಮ್ಮ ಮನಸೋಯಿಚ್ಚೆ ಸುರೀತಾರೆ. ಹೀಗೆ, ಬಂದ ಹಣದಲ್ಲಿ ಸ್ವಲ್ಪ ಪಾಲನ್ನ ಊರ್ವಶಿ ರಾಡಾಡಿಯಾ ಬಡ ಹೆಣ್ಣು ಮಕ್ಕಳ ಓದು ಒಳಿತಿಗಾಗಿ ಖರ್ಚು ಮಾಡ್ತಾರೆ..

ಆವತ್ತು ಐಎಎಸ್​ ಅಧಿಕಾರಿ ಆಗಬೇಕು ಅಂತಾ ಪಟ್ಟು ಹಿಡಿದು ಛಲ ಬಿಡದೇ ಓದಿದ್ರೆ, ಊರ್ವಶಿ ರಾಡಾಡಿಯಾ ಅದನ್ನೂ ಸಾಧಿಸಿ ತೋರಿಸಬಹುದಿತ್ತು.. ಆ ಮೂಲಕ ಸಮಾಜ ಸೇವೆಯನ್ನೇ ಮಾಡಬಹುದಿತ್ತು. ಆದ್ರೆ, ಊರ್ವಶಿ ಆಗಿದ್ದು ಮಾತ್ರ ಜಾನಪದ ಗಾಯಕಿ..ಬಟ್​, ಏನೇ ಆದ್ರೂ ಅವರ ಸಮಾಜ ಸೇವೆಯ ಆಶಯ ಮಾತ್ರ ನಿಲ್ಲಲಿಲ್ಲ ಅನ್ನೋದೇ ಸಂತೋಷದ ವಿಚಾರ..

ದೊಡ್ಡವರು ಹೇಳೋ ಹಾಗೆ ದೇವರು ನಾವು ಏನ್ ಆಗಬೇಕು ಅಂತಾ ನಿರ್ಧಾರ ಮಾಡಿರ್ತಾನೋ ಹಾಗೆಯೇ ಆಗುತ್ತಂತೆ. ಊರ್ವಶಿ ರಡಾಡಿಯಾ ಬದುಕಿನಲ್ಲಿಯೂ ಆಗಿರೋದು ಅದೇ ಊರ್ವಶಿ ಅಂದುಕೊಂಡಿದ್ದೊಂದು ಆಗಿದ್ದು ಮತ್ತೊಂದು.. ಗಾಯನದಲ್ಲಿ ದೇಶದ ಗಮನ ಸೆಳೆದಯುತ್ತಿರುವ ಊರ್ವಶಿಯ ಮನಸ್ಸು ಆಕೆಯ ಸ್ವರದಷ್ಟೇ ಸ್ವಚ್ಛವಾಗಿದ್ದು, ಅವರ ಸಾಮಾಜಿಕ ಸೇವೆಗಳ ಆಲೋಚನೆಗಳಿಗೆ ಆ ದೇವರು ಮತ್ತಷ್ಟು ಶಕ್ತಿ ನೀಡಲಿ ಅನ್ನೋದೇ ಎಲ್ಲರ ಹಾರೈಕೆ ..

The post ಈಕೆ ಸ್ಟೇಜ್​ ಹತ್ತಿದ್ರೆ ಸಾಕು ಹಣದ ಹೊಳೆ: IAS​ ಕನಸು ಕಂಡಿದ್ದ ಇವ್ರು ಸಂಚಲನ ಸೃಷ್ಟಿಸಿದ್ದು ಹೇಗೆ? appeared first on News First Kannada.

News First Live Kannada


Leave a Reply

Your email address will not be published. Required fields are marked *