ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ದರೋಡೆಗೆ ಸಂಚು ರೂಪಿಸಿದ್ದ ಐವರು ಖದೀಮರನ್ನ ಬಂಧಿಸಿದೆ.

ತಸ್ಲಾಂ, ಶೇಖ್ ತನ್ವೀರ್, ಮಹಮ್ಮದ್ ಸುಲ್ತಾನ್, ಸೈಯದ್ ಫೈರೋಜ್ಹ್ ಮತ್ತು ಇಮ್ರಾನ್ ಪಾಷಾ ಬಂಧಿತರು. ಇವರೆಲ್ಲಾ ರೌಡಿಶೀಟರ್ ಷಾ ನವಾಜ್​ನ ಸಹಚರರು ಅಂತ ತಿಳಿದುಬಂದಿದೆ. ಈಜಿಪುರದ ಇನ್ಫ್ಯಾಂಟ್ ಜೀಸಸ್ ಚರ್ಚ್ ಬಳಿ ದರೋಡೆಕೋರರನ್ನ ಪೊಲೀಸರು ಸೆರೆಹಿಡಿದಿದ್ದಾರೆ.  ಬಂಧಿತರಿಂದ 3 ಲಾಂಗು ಹಾಗೂ ಖಾರದಪುಡಿ ಪೊಟ್ಟಣವನ್ನ  ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ವಿವೇಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಈಜಿಪುರ ಬಳಿ, ದರೋಡೆಗೆ ಸಂಚು ರೂಪಿಸಿದ್ದ ಐವರು ಖದೀಮರು ಅರೆಸ್ಟ್​ appeared first on News First Kannada.

Source: newsfirstlive.com

Source link