ಈಜಿಪ್ಟ್​ನಿಂದ 750 ಟನ್ ಡೀಸೆಲ್ ಸಾಗಿಸುತ್ತಿದ್ದ ಹಡಗು ಟುನೀಶಿಯಾದ ಸಮುದ್ರದಲ್ಲಿ ಮುಳುಗಡೆ | Ship carrying 750 tonnes of diesel sinks off Tunisia coast


ಈಜಿಪ್ಟ್​ನಿಂದ 750 ಟನ್ ಡೀಸೆಲ್ ಸಾಗಿಸುತ್ತಿದ್ದ ಹಡಗು ಟುನೀಶಿಯಾದ ಸಮುದ್ರದಲ್ಲಿ ಮುಳುಗಡೆ

ಸಮುದ್ರದಲ್ಲಿ ಮುಳುಗಿದ ಹಡಗು

ನವದೆಹಲಿ: ಈಜಿಪ್ಟ್‌ನಿಂದ ಮಾಲ್ಟಾಕ್ಕೆ 750 ಟನ್‌ಗಳಷ್ಟು ಡೀಸೆಲ್ ಸಾಗಿಸುತ್ತಿದ್ದ ಹಡಗು ಟುನೀಶಿಯಾದ ಆಗ್ನೇಯ ಕರಾವಳಿಯ ಗಲ್ಫ್​ ಆಫ್ ಗೇಬ್ಸ್ ಸಮುದ್ರದಲ್ಲಿ ಮುಳುಗಿದೆ. ಡೀಸೆಲ್​ನ (Diesel) ಸೋರಿಕೆಯಾಗದಂತೆ ತಡೆಯಲು ಸಾಕಷ್ಟು ಪ್ರಯತ್ನಪಡಲಾಗುತ್ತಿದೆ. ಟ್ಯಾಂಕರ್ ಈಕ್ವಟೋರಿಯಲ್ ಗಿನಿಯಾ-ಧ್ವಜದ ಕ್ಸೆಲೋ ಈಜಿಪ್ಟ್‌ನ ಬಂದರಿನ ಡಮಿಯೆಟ್ಟಾದಿಂದ ಯುರೋಪಿಯನ್ ದ್ವೀಪವಾದ ಮಾಲ್ಟಾಕ್ಕೆ ಹೋಗುತ್ತಿದ್ದು, ಕೆಟ್ಟ ಹವಾಮಾನದ ಕಾರಣದಿಂದಾಗಿ ಶುಕ್ರವಾರ ಸಂಜೆ ಟ್ಯುನಿಷಿಯಾದ ಸಮುದ್ರಮಾರ್ಗದ ಮೂಲಕ ಹಡಗಿನಲ್ಲಿ ಡೀಸೆಲ್ ಸಾಗಿಸಲು ನಿರ್ಧರಿಸಲಾಗಿತ್ತು.

ಹಡಗು ಇಂದು ಬೆಳಗ್ಗೆ ಟುನೀಶಿಯಾದ ಪ್ರಾದೇಶಿಕ ನೀರಿನಲ್ಲಿ ಮುಳುಗಿದೆ. ಸದ್ಯಕ್ಕೆ ಯಾವುದೇ ಸೋರಿಕೆ ಇಲ್ಲ ಎಂದು ನೌಕೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿಪತ್ತು ತಡೆ ಸಮಿತಿಯು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಲು ಸಭೆ ಸೇರುತ್ತದೆ ಎಂದು ತಿಳಿಸಲಾಗಿದೆ.

ಈಜಿಪ್ಟ್‌ನಿಂದ ಮಾಲ್ಟಾಕ್ಕೆ 750 ಟನ್ ಡೀಸೆಲ್ ಸಾಗಿಸುತ್ತಿದ್ದ ಹಡಗು ಟುನೀಶಿಯಾದ ಆಗ್ನೇಯ ಕರಾವಳಿಯ ಗಲ್ಫ್ ಆಫ್ ಗೇಬ್ಸ್‌ನಲ್ಲಿ ಮುಳುಗಿದೆ. ಈಕ್ವಟೋರಿಯಲ್ ಗಿನಿಯಾ-ಧ್ವಜದ ಹಡಗು ಈಜಿಪ್ಟ್ ಬಂದರಿನ ಡಮಿಯೆಟ್ಟಾದಿಂದ ಮಾಲ್ಟಾಕ್ಕೆ ಹೋಗುತ್ತಿತ್ತು. ಗಲ್ಫ್ ಆಫ್ ಗೇಬ್ಸ್‌ನಲ್ಲಿ ಸುಮಾರು 7 ಕಿಮೀ (4 ಮೈಲುಗಳು) ಸಾಗುತ್ತಿದ್ದಂತೆ ನೀರು ಎಂಜಿನ್ ಕೋಣೆಯನ್ನು ಆವರಿಸಿತು. ಸದ್ಯಕ್ಕೆ ಹಡಗಿನ ಪರಿಸ್ಥಿತಿ ಚಿಂತಾಜನಕವಾಗಿದೆ. ಯಾವುದೇ ಕ್ಷಣದಲ್ಲಿ ಡೀಸೆಲ್ ಸೋರಿಕೆಯಾಗಬಹುದು ಅಥವಾ ಸ್ಫೋಟವೂ ಆಗುವ ಆತಂಕ ಎದುರಾಗಿದೆ.

TV9 Kannada


Leave a Reply

Your email address will not be published.