ಈದ್ ಹಬ್ಬಕ್ಕೆ ಬಿಡುಗಡೆಯಾಗತ್ತಾ ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​! | Ram Charan and Jr NTR starrer RRR Movie to release on Eid Milad?


ಈದ್ ಹಬ್ಬಕ್ಕೆ ಬಿಡುಗಡೆಯಾಗತ್ತಾ ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​!

ರಾಮ್​ ಚರಣ್​, ಜ್ಯೂ. ಎನ್​ಟಿಆರ್​

ದೇಶದೆಲ್ಲೆಡೆ ಮಹಾಮಾರಿ ಕರೋನಾ ವೈರಸ್ ಹೆಚ್ಚಾಗುತ್ತಿರುವುದರಿಂದ ಜನ ನಿಬಿಡ ಪ್ರದೇಶಗಳಿಗೆ ಸರ್ಕಾರ ಕಠಿಣ ನಿಯಮಗಳನ್ನು ಜಾರಿಮಾಡಿದೆ. ರಾಜ್ಯದ ಹಲವೆಡೆಗಳಲ್ಲಿ ಚಿತ್ರಮಂದಿರಗಳು ಮುಚ್ಚಲ್ಪಟ್ಟಿದ್ದು, ಇನ್ನೂ ಹಲವೆಡೆ ಶೇ 50ರಷ್ಟು ಮಾತ್ರ ಆಸನಕ್ಕೆ ಅವಕಾಶ ನೀಡಲಾಗಿದೆ. ಹಾಗಾಗಿ 2022ರ ಆರಂಭದಲ್ಲಿ ಬಿಡುಗಡೆಯಾಗಬೇಕಿದ್ದ ಹಲವು ಚಿತ್ರಗಳು ಮುಂದೂಡಿವೆ. ಅದರಲ್ಲಿ ಆರ್ ಆರ್ ಆರ್ ಚಿತ್ರ ಕೂಡ ಒಂದು. ಜೂನಿಯರ್ ಎನ್.ಟಿ.ಆರ್, ರಾಮ್ ಚರಣ್, ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಅಭಿನಯದ ಆರ್ ಆರ್ ಆರ್ ಚಿತ್ರ ಈ ಹಿಂದೆ ಜನವರಿ 7ರಂದು ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಚಿತ್ರತಂಡ ಬಿಡುಗಡೆಯನ್ನು ಮುಂದೂಡಿತ್ತು.

ಮೂಲಗಳ ಪ್ರಕಾರ ಆರ್ ಆರ್ ಆರ್ ಚಿತ್ರತಂಡ ಈದ್ ಹಬ್ಬದ ದಿನದಂದ್ದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ದಿನಾಂಕವನ್ನು ಹುಡುಕುತ್ತಿದ್ದಾರೆ. ಇನ್ನೂ ದೇಶದಾದ್ಯಂತ ಪ್ರಕರಣಗಳು ಕಡಿಮೆಯಾಗುತ್ತಿವೆ. ಮಾರ್ಚ ತಿಂಗಳವರೆಗೂ ಪರಿಸ್ಥಿತಿ ತಿಳಿಯಾದರೆ ಸಾಕಷ್ಟು ಹಣ ಹೂಡಿದ ನಿರ್ಮಾಪಕರ ಪರಿಸ್ಥಿತಿಯೂ ಸುಧಾರಿಸುತ್ತದೆ ಎನ್ನಲಾಗುತ್ತಿದೆ. ಆರ್ ಆರ್ ಆರ್ ಚಿತ್ರವೂ ಅತೀ ಹೆಚ್ಚು ಬಂಡವಾಳ ಹೂಡಿದ ಚಿತ್ರವಾಗಿದೆ. ಹಾಗಾಗಿ ನಿರ್ಮಾಪಕರು ಯಾವುದೇ ರೀತಿಯ ತೊಂದರೆಗೆ ಒಳಗಾಗಲು ಸಿದ್ಧರಿಲ್ಲ. ಈಗಾಗಲ್ಲೇ ಆರ್ ಆರ್ ಆರ್ ಚಿತ್ರ ದೇಶದೆಲ್ಲೆಡೆ ಫ್ರೀ ರೀಲಿಸ್ ಪ್ರಮೋಶನ್ ಮೂಲಕ ಸಾಕಷ್ಟು ಪ್ರಚಾರ ಗಿಟ್ಟಿಸಿಕಕೊಂಡಿದೆ. ಆದರಿಂದ್ದ ಚಿತ್ರತಂಡ ಏಪ್ರಿಲ್ 29ರಂದು ಅಂದರೇ ಈದ್ ಹಬ್ಬದಂದು ಬರಲು ಯೋಜಿಸಿದ್ದು, ಪರಿಸ್ಥಿತಿ ತಿಳಿಯಾದ ನಂತರ ಅಧೀಕೃತ ಮಾಹಿತಿ ನೀಡಲು ಚಿತ್ರ ತಂಡ ನಿರ್ಧರಿಸಿದೆ.

ಮೂಲಗಳ ಪ್ರಕಾರ ಒಂದು ವೇಳೆ ನಿರ್ಮಾಪಕರು ಏಪ್ರಿಲ್ 29ರಂದು ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದರೆ ದೊಡ್ಡ ಮಟ್ಟದ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಅಜಯ್ ದೇವಗನ್ ನಿರ್ದೇಶನದ ರನ್ ವೇ ಮತ್ತು ಟೈಗರ್ ಶ್ರಾಫ್ ನಟನೆಯ ಹೀರೋಪಂತಿ 2 ಚಿತ್ರಗಳು ದೊಡ್ಡ ಬಜೆಟ್​ನ ಚಿತ್ರಗಳಾಗಿವೆ. ಒಂದೇ ದಿನ ಎರಡು ಚಿತ್ರಗಳು ಬಿಡುಗಡೆಯಾದರೆ ದೊಡ್ಡ ಮಟ್ಟದ ಕ್ಲ್ಯಾಶ್ ಆಗುವುದು ಪಕ್ಕಾ. ಇದರಿಂದಾಗಿ ನಿರ್ಮಾಪಕರಿಗೆ, ಪ್ರದರ್ಶಕರಿಗೆ ಮತ್ತು ವಿತರಕರಿಗೆ ನಷ್ಟ ಉಂಟಾಗಲಿದೆ. ಹಾಗಾಗಿ ಕೆಲವೂ ಚಿತ್ರಗಳು ಬಿಡುಗಡೆಯನ್ನು ಮುಂದೂಡಿದ್ದು, ಬಿಡುಗಡೆಯ ದಿನಾಂಕವನ್ನು ನಿಗದಿ ಪಡೆಸಬೇಕಿದೆ. ಎಲ್ಲಾ ಅಂದುಕೊಂಡಂತೆಯಾದರೆ ಈದ್ ಹಬ್ಬದ ದಿನದಂದು ಯಾವ ನಟ ಬೆಳ್ಳಿ ಪರದೆಯ ಮೇಲೆ ಮಿಂಚಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.

TV9 Kannada


Leave a Reply

Your email address will not be published. Required fields are marked *