ಈರುಳ್ಳಿ ದರ ದಿಢೀರ್ ಕುಸಿತ, ಕಂಗಾಲಾದ ರೈತ; ಮಾರುಕಟ್ಟೆಗೆ ಈರುಳ್ಳಿ ತಂದು ದರವಿಲ್ಲದೇ ಅಲ್ಲಿಯೇ ಬಿಟ್ಟು ಹೋದ ರೈತರು | Rapid fall in onion rate, a farmer in Kangala; Farmers who brought onions to the market and left without a price


ಈರುಳ್ಳಿ ದರ ದಿಢೀರ್ ಕುಸಿತ, ಕಂಗಾಲಾದ ರೈತ; ಮಾರುಕಟ್ಟೆಗೆ ಈರುಳ್ಳಿ ತಂದು ದರವಿಲ್ಲದೇ ಅಲ್ಲಿಯೇ ಬಿಟ್ಟು ಹೋದ ರೈತರು

ಈರುಳ್ಳಿ

ದಾವಣಗೆರೆ: ಈರುಳ್ಳಿ (Onion) ದರ ದಿಢೀರ್ ಕುಸಿದಿದ್ದರಿಂದ ರೈತರು ಆತಂಕಗೊಂಡಿದ್ದಾರೆ. ಮಾರುಕಟ್ಟೆಗೆ ಈರುಳ್ಳಿ ತಂದು ದರವಿಲ್ಲದೇ ಅಲ್ಲಿಯೇ ಬಿಟ್ಟು  ರೈತರು ಹೋಗುತ್ತಿದ್ದಾರೆ. ಕಳೆದ ಒಂದು ತಿಂಗಳ ಹಿಂದೆ ಈರುಳ್ಳಿಗೆ ಒಂದು ಕೆಜಿಗೆ 17 ರಿಂದ 20 ರೂಪಾಯಿ ದರವಿತ್ತು. ಈಗ ದಿಢೀರ್ ಕುಸಿತಗೊಂಡಿದ್ದು, ಒಂದು ಕೆಜಿಗೆ 13 ರೂಪಾಯಿ ಗರಿಷ್ಠ ದರ ನಿಗದಿ ಮಾಡಲಾಗಿದೆ. ದಾವಣಗೆರೆ ಎಪಿಎಂಸಿ ಮಾರುಕಟ್ಟೆಗೆ ತಂದ ಈರುಳ್ಳಿ ಬಿಟ್ಟು ರೈತರು ಹೋಗುತ್ತಿದ್ದಾರೆ. ವಿಜಯಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ರೈತರು 23 ಸಾವಿರ ರೂಪಾಯಿಗೆ ಲಾರಿ ಬಾಡಿಗೆ ಮಾಡಿಕೊಂಡು ದಾವಣಗೆರೆಗೆ ಈರುಳ್ಳಿ ತಂದಿದ್ದಾರೆ. ನಿತ್ಯ ಮೂರು ಸಾವಿರದಿಂದ ಮೂರು ಸಾವಿರದಾ ಐದು ನೂರು ಟನ್ ಈರುಳ್ಳಿ ದಾವಣಗೆರೆ ಮಾರುಕಟ್ಟೆಗೆ ಬರುತ್ತದೆ. ಈ ವರ್ಷ ಈರುಳ್ಳಿ ಹೆಚ್ಚಿಗೆ ಬೆಳೆದ ಹಿನ್ನೆಲೆ ದರ ಕುಸಿತಗೊಂಡಿದೆ ಎನ್ನಲಾಗುತ್ತಿದೆ. ಕೊಲ್ಕತ್ತಾ ಸೇರಿದಂತೆ ವಿವಿಧ ಕಡೆ ಸದ್ಯಕ್ಕೆ ಈರುಳ್ಳಿ ಮಾರಾಟ ಸ್ಥಗಿತವಾದ ಹಿನ್ನೆಲೆ ದರ ಕುಸಿತವಾಗಿದೆ ಎಂದು ದಲ್ಲಾಳಿಗಳು ಹೇಳುತ್ತಿದ್ದಾರೆ. ಸರ್ಕಾರ ಈರುಳ್ಳಿಗೆ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *