ಚೈನೀಸ್ ಅಡುಗೆಯಲ್ಲಿ ಈರುಳ್ಳಿ ಸೊಪ್ಪಿನ ಬಳಕೆ ನಾವು ಹೆಚ್ಚಾಗಿ ಕಾಣುತ್ತೇವೆ. ಇನ್ನು, ಫ್ರೈಡ್ ರೈಸ್, ಸಾಂಬಾರ್ ಇತ್ಯಾದಿ ಖಾದ್ಯಗಳಲ್ಲಿ ಸಹ ಈರುಳ್ಳಿ ಸೊಪ್ಪು ಬಳಕೆಯನ್ನು ಕಾಣುತ್ತೇವೆ.

ಆದರೇ ಈರುಳ್ಳಿ ಸೊಪ್ಪಿನ ಆರೋಗ್ಯ ಸಂಬಂಧಿ ಉಪಯೊಗಗಳು ಹೆಚ್ಚಿನವರಿಗೆ ಗೊತ್ತಿಲ್ಲ. ಈರುಳ್ಳಿ ಸೊಪ್ಪಿನಲ್ಲಿ ಕಾರ್ಬೊಹೈಡ್ರೇಟ್, ವಿಟಮಿನ್, ಪ್ರೊಟೀನ್, ಸಲ್ಫರ್ ಮತ್ತು ಕ್ಯಾಲ್ಸಿಯಂ ಸಾಕಷ್ಟು ಪ್ರಮಾಣದಲ್ಲಿವೆ.

ಓದಿ : ಕೋವಿಡ್ ಸೋಂಕು ಎಫೆಕ್ಟ್: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಂದೂಡಿಕೆ

ಈರುಳ್ಳಿ ಸೊಪ್ಪಿನಲ್ಲಿ ಇರುವ ಆರು ಆರೋಗ್ಯ ಸಂಬಂಧಿ ಉಪಯೋಗಗಳು  :

 ಕ್ಯಾನ್ಸರ್ ಗೆ ರಾಮಬಾಣ

ಈರುಳ್ಳಿ ಸೊಪ್ಪಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಲ್ಫರ್ ನ ಅಂಶವಿದೆ. ಸಂಪೂರ್ಣ ಆರೋಗ್ಯ ರಕ್ಷಣೆಯಲ್ಲಿ ಸಲ್ಪರ್ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈರುಳ್ಳಿ ಸೊಪ್ಪಿನಲ್ಲಿರುವ  ಸಲ್ಫರಲ್ಲಿ ಅಲೈಲ್ ಸಲ್ಫೈಡ್ ಮತ್ತು ಫ್ಲವೊನಾಯಿಡ್ಸ್  ಎಂಬ ಅಂಶಗಳಿವೆ. ಇವು ಕ್ಯಾನ್ಸರನ್ನು ದೂರ ತಳ್ಳುತ್ತದೆ. ಅಲ್ಲದೆ, ಕ್ಯಾನ್ಸರ್ ಕಾರಕಾಂಶಗಳನ್ನು ಆರಂಭದಲ್ಲೇ ಕೊಲ್ಲುತ್ತವೆ.

ಡಯಾಬಿಟಿಸ್ ಹೋಗಲಾಡಿಸಲು ಈರುಳ್ಳಿ ಸೊಪ್ಪು ಯೋಗ್ಯ

ಈರುಳ್ಳಿ ಸೊಪ್ಪಿನಲ್ಲಿ ಸಲ್ಫರ್ ಸಾಕಷ್ಟು ಪ್ರಮಾಣದಲ್ಲಿರುವ ಕಾರಣದಿಂದಾಗಿ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಹೆಚ್ಚಾಗುವುದರಿಂದ ಡಯಾಬಿಟಿಸ್ ನಿಂದ ರಕ್ಷಿಸುತ್ತದೆ.

ಕಣ್ಣುಗಳಿಗೆ ಈರುಳ್ಳಿ ಸೊಪ್ಪು ಹಿತಕಾರಿ

ಈರುಳ್ಳಿ ಸೊಪ್ಪಿನಲ್ಲಿ ಕ್ಯಾರೋಟೆನಾಯಿಡ್ ಅಂಶವಿದೆ. ಇದು ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಅಷ್ಟಲ್ಲದೇ, ಕಣ್ಣಿನ ಕಾಂತಿಯನ್ನು ಹೆಚ್ಚಿಸುತ್ತದೆ. ಇದರಿಂದ ದೃಷ್ಟಿದೋಷ ನಿವಾರಣೆಯಾಗುವುದಕ್ಕೂ ಈರುಳ್ಳಿ ಸೊಪ್ಪು ಸಹಕಾರಿ.

ಹೊಟ್ಟೆ ಹಸಿವು ಹೆಚ್ಚಿಸುತ್ತದೆ.

ಈರುಳ್ಳಿ ಸೊಪ್ಪಿನಲ್ಲಿ  ಫೈಬರ್ ಅಂಶವು ಕೂಡ ಇರುತ್ತದೆ. ಫೈಬರ್ ಇದ್ದಾಗ ಜೀರ್ಣಕ್ರೀಯೆ ಸಹಕಾರುಯಾದ ಅಂಶ. ಜೀರ್ಣ ಕ್ರಿಯೆ ಸರಾಗವಾದಾಗ ಹೊಟ್ಟೆ ಹಸಿವು  ಸಾಮಾನ್ಯವಾಗಿ ಹೆಚ್ಚುತ್ತದೆ.

ಎಲುಬು ಗಟ್ಟಿಯಾಗಲು ಈರುಳ್ಳಿ ಸೊಪ್ಪು ಸಿದ್ದೌಷಧ

ಈರುಳ್ಳಿ ಸೊಪ್ಪಿನಲ್ಲಿ ಸಾಕಷ್ಟು ಕ್ಯಾಲ್ಸಿಯಂ ಅಂಶ ಇರುತ್ತದೆ. ಕ್ಯಾಲ್ಸಿಯಂ ಯಾವತ್ತಿಗೂ ಎಲುಬನ್ನು ಗಟ್ಟಿಯಾಗಿಡುತ್ತದೆ. ಈರುಳ್ಳಿ ಸೊಪ್ಪನ್ನು ಸಲಾಡ್‍ ನೊಂದಿಗೆ ಸೇವಿಸಬಹುದು. ಸಾಂಬಾರ್‍ ಮಾಡಿ ಸವಿಯಬಹುದು. ಪಲ್ಯ ಮಾಡಿ ತಿನ್ನ ಬಹುದು. ಈರುಳ್ಳಿ ಸೊಪ್ಪು ಆರೋಗ್ಯವನ್ನು ವೃದ್ದಿಸುತ್ತದೆ ಎನ್ನುತ್ತಾರೆ ವೈದ್ಯರು.

ಶೀತ, ಕೆಮ್ಮು, ಜ್ವರ ನಿವಾರಕ

ಈರುಳ್ಳಿ ಸೊಪ್ಪಿನಲ್ಲಿ ಆಂಟಿಬ್ಯಾಕ್ಟೀರಿಯ ಮತ್ತು ಆಂಟಿ ವೈರಲ್ ಗುಣವಿದೆ. ಒಂದು ರೀತಿಯಲ್ಲಿ ವೈರಸ್ ಮತ್ತು ಜ್ವರದ ವಿರುದ್ಧ ಹೋರಾಡುವಲ್ಲಿ ಇದು ಅತ್ಯಂತ ಸೂಕ್ತವಾದ ಅಸ್ತ್ರ.

ಓದಿ : Oxford ವಿದ್ಯಾರ್ಥಿನಿಯ ವಿವಾದ : ಅಗತ್ಯವಿದ್ದಾಗ ನಾವು ಧ್ವನಿ ಎತ್ತುತ್ತೇವೆ : ಕೇಂದ್ರ

ಆರೋಗ್ಯ – Udayavani – ಉದಯವಾಣಿ
Read More