ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ 30 ಕೋಟಿಯ ಗಡಿ ದಾಟಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ನಿನ್ನೆ ಸಂಜೆ 7 ಗಂಟೆಗೆ ಬಂದಿರುವ ವರದಿ ಪ್ರಕಾರ ದೇಶದಲ್ಲಿ ಈವರೆಗೆ 30,09,69,538 ಜನರು ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ. ನಿನ್ನೆ ಒಂದೇ ದಿನ ಅರ್ಹ ಫಲಾನುಭವಿಗಳಿಗೆ 58.34 ಲಕ್ಷ ಡೋಸ್​ ವ್ಯಾಕ್ಸಿನ್ ನೀಡಲಾಗಿದೆ.

  • 18 ರಿಂದ 44 ವರ್ಷ ವಯಸ್ಸಿನವರಲ್ಲಿ 41,23,073 ಮಂದಿ ಮೊದಲ ಡೋಸ್‌ ಲಸಿಕೆ  ಪಡೆದಿದ್ದು,  68,903 ಮಂದಿ ಎರಡೂ ಡೋಸ್​ ಲಸಿಕೆ ಪಡೆದಿದ್ದಾರೆ.
  • ಒಟ್ಟಾರೆಯಾಗಿ, 37 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 7,02,11,075 ಜನರು ಮೊದಲ ಡೋಸ್ ಪಡೆದಿದ್ದಾರೆ.
  • ವ್ಯಾಕ್ಸಿನೇಷನ್ ಡ್ರೈವ್​ನ ಮೂರನೇ ಹಂತ ಪ್ರಾರಂಭವಾದಾಗಿನಿಂದ ಒಟ್ಟು 14,98,113 ಜನರು ಎರಡನೇ ಡೋಸ್​ ಲಸಿಕೆ ಸ್ವೀಕರಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಘಡ, ದೆಹಲಿ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಒಡಿಶಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ 18 ರಿಂದ 44 ವರ್ಷ ವಯಸ್ಸಿನ 10 ಲಕ್ಷಕ್ಕೂ ಹೆಚ್ಚು ಮಂದಿ ಮೊದಲ ಡೋಸ್​ ವ್ಯಾಕ್ಸಿನ್ ಪಡೆದಿದ್ದಾರೆ.

The post ಈವರೆಗೆ ಕೊರೊನಾ ಲಸಿಕೆ ಪಡೆದ 30 ಕೋಟಿ ಭಾರತೀಯರು appeared first on News First Kannada.

Source: newsfirstlive.com

Source link