ಬೆಂಗಳೂರು: ವ್ಯಾಕ್ಸಿನ್ ವಿತರಣೆಯಲ್ಲಿ ರಾಜ್ಯ ದಾಖಲೆ ನಿರ್ಮಿಸಿದ್ದು ಇಲ್ಲಿಯವರೆಗೆ ಬರೋಬ್ಬರಿ 2 ಕೋಟಿ ವ್ಯಾಕ್ಸಿನ್ ವಿತರಣೆ ಮಾಡಲಾಗಿದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮಾಹಿತಿ ನೀಡಿದ್ದಾರೆ.

ಕರ್ನಾಟಕ ಇಂದು 2 ಕೋಟಿ ವ್ಯಾಕ್ಸಿನ್ ವಿತರಣೆ ಮುಗಿಸಿದೆ. ಲಸಿಕೆ ವಿತರಣೆಯಲ್ಲಿ ಕರ್ನಾಟಕ ದಕ್ಷಿಣ ಭಾರತದಲ್ಲಿ No.1 ರಾಜ್ಯವಾಗಿದೆ. ಈ ವರ್ಷದ ಡಿಸೆಂಬರ್ 31ರ ಒಳಗೆ ಕರ್ನಾಟಕದ ಎಲ್ಲ ವಯಸ್ಕರಿಗೂ ವ್ಯಾಕ್ಸಿನ್ ಹಾಕುವ ಗುರಿಗೆ ನಾವು ಬದ್ಧರಾಗಿದ್ದೇವೆ. ಧನ್ಯವಾದಗಳು ನರೇಂದ್ರ ಮೋದಿಜಿ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

The post ಈವರೆಗೆ 2 ಕೋಟಿ ಡೋಸ್ ವ್ಯಾಕ್ಸಿನೇಷನ್: ದಕ್ಷಿಣ ಭಾರತದಲ್ಲೇ ಕರ್ನಾಟಕ ನಂಬರ್ 1 appeared first on News First Kannada.

Source: newsfirstlive.com

Source link