ಈಶಾ ಫೌಂಡೇಷನ್: ತಮಿಳುನಾಡಿನಿಂದ ಚಿಕ್ಕಬಳ್ಳಾಪುರಕ್ಕೆ ಬಂದ ನಾಗ ವಿಗ್ರಹ! ಲಾರಿಗೆ ಪೂಜೆಪುನಸ್ಕಾರ, ಹಾಡು ನೃತ್ಯ!! | Esha Foundation brings Naga Statue from Tamilnadu to Chikkaballapur puja performed


Esha Foundation: ನಾಗಶಿಲೆಯು ಚಿಕ್ಕಬಳ್ಳಾಪುರ ನಗರದ ಒಕ್ಕಲಿಗ ಕಲ್ಯಾಣ ಮಂಟಪದಿಂದ ಬಿಬಿ ರಸ್ತೆ ಎಂ.ಜಿ.ರಸ್ತೆ ದಿನ್ನೇಹೊಸಹಳ್ಳಿ ರಸ್ತೆ ಸೂಸೆಪಾಳ್ಯಾ ಹನುಮಂತಪುರ ಗ್ರಾಮಗಳ ಮೂಲಕ ಈಶಾ ಫೌಂಡೇಷನ್ ನ ನೂತನ ಆಶ್ರಮಕ್ಕೆ ತೆರಳಿತು. ದಾರಿ ಮಧ್ಯೆ ಜನ ನಾಗಶಿಲೆಗೆ ಕೈಮುಗಿದು ಆರತಿ ಬೆಳಗಿ ಪೂಜೆ ಪುನಸ್ಕಾರ ಮಾಡಿದ್ರು.

ಈಶಾ ಫೌಂಡೇಷನ್: ತಮಿಳುನಾಡಿನಿಂದ ಚಿಕ್ಕಬಳ್ಳಾಪುರಕ್ಕೆ ಬಂದ ನಾಗ ವಿಗ್ರಹ! ಲಾರಿಗೆ ಪೂಜೆಪುನಸ್ಕಾರ, ಹಾಡು ನೃತ್ಯ!!

ಈಶಾ ಫೌಂಡೇಷನ್: ತಮಿಳುನಾಡಿನಿಂದ ಚಿಕ್ಕಬಳ್ಳಾಪುರಕ್ಕೆ ಬಂದ ನಾಗ ವಿಗ್ರಹ! ಲಾರಿಗೆ ಪೂಜೆಪುನಸ್ಕಾರ, ಹಾಡು ನೃತ್ಯ!!

ತಮಿಳುನಾಡಿನ ಕೊಯಮತ್ತೂರು ಬಳಿ ಆಶ್ರಮ ಮಾಡಿ ಆದಿಯೋಗಿ ಪ್ರತಿಮೆ ನಿರ್ಮಾಣ ಮಾಡಿದಂತೆ.., ಚಿಕ್ಕಬಳ್ಳಾಪುರದ ಬಳಿ 112 ಅಡಿಗಳ ಶಿವನಮೂರ್ತಿ ನಿರ್ಮಾಣ ಮಾಡಲು ಈಶಾ ಫೌಂಡೇಷನ್ (Esha Foundation) ಅಡಿಗಲ್ಲು ಹಾಕಿದೆ. ಮೊದಲ ಹೆಜ್ಜೆಯಾಗಿ ನಾಗಪ್ರತಿಷ್ಠೆಗೆ ಮುಂದಾಗಿದ್ದು ಈಗ ತಮಿಳುನಾಡಿನಿಂದ ಬೃಹತ್ ನಾಗ ವಿಗ್ರಹ (Naga Statue) ಬೃಹತ್ ಲಾರಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿತು. ನಾಗ ವಿಗ್ರಹ ಸಾಗುವ ಮಾರ್ಗದಲ್ಲಿ ಎಲ್ಲಡೆ ಪೂಜೆ ಪುನಸ್ಕಾರ ಹಾಡು ನೃತ್ಯ ಶಿವಾನಾಮ ಕೇಳಿಬಂತು. ಈ ಕುರಿತು ಒಂದು ವರದಿ

ಬೃಹತ್ ಲಾರಿಯಲ್ಲಿ ಸಾಗ್ತಿರುವ ಬೃಹತ್ ನಾಗ ವಿಗ್ರಹ, ನಾಗವಿಗ್ರಹದ ಮುಂದೆ ಶಿವನ ಭಕ್ತರು, ಈಶಾ ಫೌಂಡೇಷನ್ ನ ಸದ್ಗುರು ಜಗ್ಗಿ ವಾಸುದೇವ್ ಭಕ್ತರು ಶಿವನಾಮ ಜಪಿಸುತ್ತಾ… ಹಾಡು ನೃತ್ಯ ಮಾಡುತ್ತಾ… ನಾಗ ಶಿಲೆಗೆ ಸ್ವಾಗತ ಕೋರುವ ದೃಶ್ಯ ಚಿಕ್ಕಬಳ್ಳಾಪುರ ನಗರದಲ್ಲಿ ಕಂಡುಬಂದಿತು. ಚಿಕ್ಕಬಳ್ಳಾಪುರ ತಾಲೂಕಿನ ಜಾಲಾರಿ ನರಸಿಂಹಸ್ವಾಮಿ ಕ್ಷೇತ್ರದ ಬಳಿ ಅಲವಗುರ್ಕಿ ಗ್ರಾಮದ ಸರ್ವೆ ನಂಬರ್ ನಲ್ಲಿ ಜಗ್ಗಿ ವಾಸುದೇವ್ ರವರು (Jaggi Vasudev) ನೂತನ ಆಶ್ರಮ ಮಾಡ್ತಿದ್ದು, ಆಶ್ರಮದಲ್ಲಿ 112 ಅಡಿಗಳ ಶಿವನ ಪ್ರತಿಷ್ಠಾಪನೆಗೆ ಅಡಿಗಲ್ಲು ಹಾಕಿದ್ದು, ಆಶ್ರಮದಲ್ಲಿ ನಾಗಪ್ರತಿಷ್ಠೆ ಮಾಡಲು ತಮಿಳುನಾಡಿನಿಂದ ಬೃಹತ್ ನಾಗಶಿಲೆ ತರಲಾಯಿತು. ನಾಗಶಿಲೆ ಚಿಕ್ಕಬಳ್ಲಾಪುರ ನಗರಕ್ಕೆ ಬರುತ್ತಿದ್ದಂತೆ ಸದ್ಗುರು ಜಗ್ಗಿ ವಾಸುದೇವ್ ಭಕ್ತರು ಶಿವನಾಮ ಜಪಿಸುತ್ತಾ… ಹಾಡು ನೃತ್ಯದ ಮೂಲಕ ನಾಗಶಿಲೆ ಸ್ವಾಗತ ಮಾಡಿದ್ರು.

ಇನ್ನು ನಾಗಶಿಲೆಯು ಚಿಕ್ಕಬಳ್ಳಾಪುರ ನಗರದ ಒಕ್ಕಲಿಗ ಕಲ್ಯಾಣ ಮಂಟಪದಿಂದ ಬಿಬಿ ರಸ್ತೆ ಎಂ.ಜಿ.ರಸ್ತೆ ದಿನ್ನೇಹೊಸಹಳ್ಳಿ ರಸ್ತೆ ಸೂಸೆಪಾಳ್ಯಾ ಹನುಮಂತಪುರ ಗ್ರಾಮಗಳ ಮೂಲಕ ಈಶಾ ಫೌಂಡೇಷನ್ ನ ನೂತನ ಆಶ್ರಮಕ್ಕೆ ತೆರಳಿತು. ದಾರಿ ಮಧ್ಯೆ ಜನ ನಾಗಶಿಲೆಗೆ ಕೈಮುಗಿದು ಆರತಿ ಬೆಳಗಿ ಪೂಜೆ ಪುನಸ್ಕಾರ ಮಾಡಿದ್ರು.

ಜಾಲಾರಿ ನರಸಿಂಹಸ್ವಾಮಿ ಕ್ಷೇತ್ರದ ಬಳಿ ಈಗಾಗಲೇ… ಈಶಾ ಫೌಂಡೇಷನ್ 110 ಎಕರೆ ರೈತರ ಭೂಮಿಯನ್ನು ಖರೀದಿ ಮಾಡಿದ್ದು, ಭೂಮಿ ವಿಸ್ತರಣೆ ಕಾರ್ಯ ಮುಂದುವರೆದಿದೆ. ಮುಂದಿನ ಸಂಕ್ರಾಂತಿ ಹಬ್ಬಕ್ಕೆ ಆದಿಯೋಗಿ ಶಿವನ ವಿಗ್ರಹ ಪ್ರತಿಷ್ಠಾಪನೆ ಮಾಡುವ ಬಗ್ಗೆ ಜಗ್ಗಿ ವಾಸುದೇವನ್ ಅನುಯಾಯಿಗಳ ಬಳಿ ಹೇಳಿದ್ದಾರಂತೆ. ಇತ್ತೀಚೆಗೆ ಆಶ್ರಮಕ್ಕೆ ಭೇಟಿ ನೀಡಿ ಆದಿಯೋಗಿಯ ಕಾಮಗಾರಿ ವಿಕ್ಷಣೆ ಮಾಡಿ ಸಲಹೆ ನೀಡಿದ್ದಾರಂತೆ. ಒಟ್ನಲ್ಲಿ ಕೊಯಮತ್ತೂರು ಬಳಿ ವಿಘ್ನ ಉಂಟಾದ್ರೆ… ಚಿಕ್ಕಬಳ್ಳಾಪುರಕ್ಕೆ ತಮಿಳುನಾಡು ಆಶ್ರಮ ಶಿಫ್ಟ್​ ಆಗಬಹುದು. – ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ

ತಾಜಾ ಸುದ್ದಿ

TV9 Kannada


Leave a Reply

Your email address will not be published.