ಈಶ್ವರಪ್ಪರನ್ನು ಬಂಧಿಸಿ ಎನ್ನುವವರಿಗೆ ನಾಚಿಕೆಯಾಗಬೇಕು; ಅಧಿಕಾರಕ್ಕಾಗಿ ಬಂಡೆ ಬೇಕಾದನ್ನ ಮಾಡುತ್ತದೆ -ರೇಣುಕಾಚಾರ್ಯ ಪರೋಕ್ಷ ವಾಗ್ದಾಳಿ | Renukacharya indirectly slams dk shivakumar and warns Siddaramaiah by tweets


ಈಶ್ವರಪ್ಪರನ್ನು ಬಂಧಿಸಿ ಎನ್ನುವವರಿಗೆ ನಾಚಿಕೆಯಾಗಬೇಕು; ಅಧಿಕಾರಕ್ಕಾಗಿ ಬಂಡೆ ಬೇಕಾದನ್ನ ಮಾಡುತ್ತದೆ -ರೇಣುಕಾಚಾರ್ಯ ಪರೋಕ್ಷ ವಾಗ್ದಾಳಿ

ಶಾಸಕ ಎಮ್ ಪಿ ರೇಣುಕಾಚಾರ್ಯ

ದಾವಣಗೆರೆ: ಬಸವರಾಜ ಬೊಮ್ಮಾಯಿಯೇ ರಾಜ್ಯದ ಸಿಎಂ ಆಗಿದ್ದಾರೆ. ಅವರೇ ಸಿಎಂ ಆಗಿರಬೇಕಾದ್ರೆ ನಾನು ಆಗೋದ್ರಲ್ಲಿ ತಪ್ಪೇನಿದೆ. ನಾನು ಕೂಡ ಸಿಎಂ ಆಕಾಂಕ್ಷಿಯಾಗಿದೀನಿ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ S.S.ಮಲ್ಲಿಕಾರ್ಜುನ ತಿಳಿಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಹೊಂದಾಣಿಕೆಯಿಂದ ಇದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ. ನಾವು ಸಿದ್ದರಾಮಯ್ಯರನ್ನೇ ಮುಖ್ಯಮಂತ್ರಿ ಮಾಡುತ್ತೇವೆ. ಪಕ್ಷದಲ್ಲಿ ಹಿರಿಯರಿದ್ದಾರೆ, ಅವರೇಕೆ ಸಿಎಂ ಆಗಬಾರದು. ಹೈಕಮಾಂಡ್ ಸೂಚಿಸಿದವರನ್ನು ಸಿಎಂ ಮಾಡುತ್ತೇವೆ ಎಂದರು.

ಇನ್ನು ಸಚಿವ ಕೆ.ಎಸ್.ಈಶ್ವರಪ್ಪ ರಾಜೀನಾಮೆ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ S.S.ಮಲ್ಲಿಕಾರ್ಜುನ, ನಿನ್ನೆ ಇಂದು ಬಾಕಿ ಇರುವ ಫೈಲ್‌ಗಳಿಗೆ ಸಹಿ ಮಾಡಿದ್ದಾರೆ. ಇಂದು ರಾಜೀನಾಮೆ ನೀಡುತ್ತಿದ್ದಾರೆ ಎಂದು ಈಶ್ವರಪ್ಪ ರಾಜೀನಾಮೆಗೆ ಎಸ್.ಎಸ್.ಮಲ್ಲಿಕಾರ್ಜುನ ವ್ಯಂಗ್ಯವಾಡಿದ್ದಾರೆ. ಜಾತ್ರೆ ಇದೆ ಎಂದು ಹೇಳಿ ತುರ್ತಾಗಿ ಕೆಲಸ ಮಾಡಿಸಿದ್ದಾರೆ. ಇದೀಗ 40% ಕಮಿಷನ್ ಕೇಳಿದರೆ ಅವರು ಎಲ್ಲಿಹೋಗಬೇಕು. ಅನ್ಯಾಯವಾಗಿ ಒಂದು ಜೀವ ಬಲಿ ಕೊಟ್ಟಿದ್ದಾರೆಂದು ಈಶ್ವರಪ್ಪ ವಿರುದ್ಧ ಕಿಡಿಕಾಡಿದ್ದಾರೆ.

ದಾವಣಗೆರೆ ಜಿಲ್ಲೆಯಲ್ಲೂ ಕಮಿಷನ್ ದಂಧೆ ವ್ಯಾಪಕವಾಗಿದೆ. ಆದರೆ ನಮ್ಮಲ್ಲಿ 20-20 ಪರ್ಸೆಂಟ್ ಕಮಿಷನ್ ದಂಧೆ ಇದೆ. 20 ಪರ್ಸೆಂಟ್ ಕೇಂದ್ರಕ್ಕೆ, 20 ಪರ್ಸೆಂಟ್ ರಾಜ್ಯ ಸರ್ಕಾರಕ್ಕೆ ಎಂದು ಜಿ.ಎಂ.ಸಿದ್ದೇಶ್ವರ್, ಶಾಸಕರ ವಿರುದ್ಧ ಪರೋಕ್ಷವಾಗಿ ಮಾಜಿ ಸಚಿವ S.S.ಮಲ್ಲಿಕಾರ್ಜುನ ಆರೋಪ ಮಾಡಿದ್ದಾರೆ. ಪ್ರತಿಯೊಂದು ಕಾಮಗಾರಿಯಲ್ಲೂ 40 ಪರ್ಸೆಂಟ್ ಕಮಿಷನ್ ಕೊಡುವ ಪದ್ಧತಿ ಇದೆ. ಹೀಗಾಗಿ ಕಾಮಗಾರಿಗಳು ಕಳಪೆಯಾಗಿವೆ. ಹತ್ತಾರು ಕೋಟಿ ವೆಚ್ಚದಲ್ಲಿ‌ ಕುಂದವಾಡ ಕೆರೆ ಆಧುನೀಕರಣ ಮಾಡುತ್ತಿದ್ದಾರೆ. ನಾಲ್ಕು ಗುಂಡಿ ತೆಗೆದು ಸುಮ್ಮನಾಗಿದ್ದಾರೆ. ಹೀಗೆ ಸ್ಮಾರ್ಟ್ ಸಿಟಿ ಸೇರಿದಂತೆ ನೂರಾರು ಕಾಮಗಾರಿಗಳು ಕಲಪೆ ಆಗುತ್ತಿವೆ. ಇಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಜನಪ್ರತಿನಿಧಿಗಳಿಗೆ ಸಮಾನವಾಗಿ ಕಮಿಷನ್ ಹೋಗುತ್ತಿದೆ ಎಂದರು.

ಈಶ್ವರಪ್ಪ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುತ್ತಿದ್ದಾರೆ
ಇನ್ನು ಮತ್ತೊಂದೆಡೆ ಈಶ್ವರಪ್ಪರನ್ನು ಬಂಧಿಸಿ ಎನ್ನುವವರಿಗೆ ನಾಚಿಕೆಯಾಗಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಗರಂ ಆಗಿದ್ದಾರೆ. ಕೆ.ಎಸ್.ಈಶ್ವರಪ್ಪ ಯಾವುದೇ ಅಪರಾಧವನ್ನು ಮಾಡಿಲ್ಲ. ಈಶ್ವರಪ್ಪ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡುತ್ತಿದ್ದಾರೆ. ಈಶ್ವರಪ್ಪ ಆರೋಪಮುಕ್ತರಾಗಿ ಬರುತ್ತಾರೆ. ಕಾಂಗ್ರೆಸ್‌ಗೆ ಯಾವುದೇ ವಿಷಯ ಸಿಗದ ಹಿನ್ನೆಲೆ ಕೆ.ಎಸ್.ಈಶ್ವರಪ್ಪ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಯಡಿಯೂರಪ್ಪ, ಈಶ್ವರಪ್ಪನವರು ಪ್ರಶ್ನಾತೀತ ನಾಯಕರು. ಯಾವುದೇ ಕಾರಣಕ್ಕೂ ಸೈಡ್‌ಲೈನ್ ಪ್ರಶ್ನೆಯೇ ಇಲ್ಲ ಎಂದರು.

ಅಧಿಕಾರಕ್ಕಾಗಿ ಬಂಡೆ ಬೇಕಾದನ್ನ ಮಾಡುತ್ತದೆ. ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹುಷಾರು ಎಂದು ಡಿಕೆ ಶಿವಕುಮಾರ್ ಹೆಸರು ಉಲ್ಲೇಖಿಸದೆ ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ. ಸರಣಿ ಟ್ವಿಟ್ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪಕ್ಕದಲ್ಲಿ ಕುಳಿತ ಬಂಡೆ ಬೆನ್ನಿಗೆ ಚೂರಿ ಹಾಕಬಹುದು. ಎಲ್ಲಿಯೋ ಕುಳಿತು ಇನ್ನೇಲ್ಲಿಯೋ ಆಟವಾಡುತ್ತಾರೆ. ಈ ಮಹಾನಾಯಕನಿಗೆ ಸಿದ್ದರಾಮಯ್ಯ ಪ್ರತಿಸ್ಪರ್ಧಿ. ಸಿದ್ದರಾಮಯ್ಯರನ್ನ ಖೇಡ್ಡಾಗೆ ಕೆದವಿದ್ರೂ ಅಚ್ಚರಿಯಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಸರಣಿ ಟ್ವೀಟ್ ಮೂಲಕ ಪರೋಕ್ಷವಾಗಿ ಡಿಕಿಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೆ.ಎಸ್.ಈಶ್ವರಪ್ಪ ಮತ್ತೆ ಸಚಿವ ಸಂಪುಟಕ್ಕೆ ಸೇರಿಕೊಳ್ಳುತ್ತಾರೆ
ಕೆ.ಎಸ್.ಈಶ್ವರಪ್ಪ ಯಾವುದೇ ಅಪರಾಧವನ್ನು ಮಾಡಿಲ್ಲ. ಯಾರೋ ಮಾಡಿದ ಅಪರಾಧದಲ್ಲಿ ಇವರನ್ನ ಸಿಲುಕಿಸಿದ್ದಾರೆ ಎಂದು ಹೊನ್ನಾಳಿಯಲ್ಲಿ ಮಾಜಿ ಸಿಎಂ B.S.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಕೆ.ಎಸ್.ಈಶ್ವರಪ್ಪ ಆರೋಪಮುಕ್ತರಾಗಿ ಹೊರಬರುತ್ತಾರೆ. ಕೆ.ಎಸ್.ಈಶ್ವರಪ್ಪ ಮತ್ತೆ ಸಚಿವ ಸಂಪುಟಕ್ಕೆ ಸೇರಿಕೊಳ್ಳುತ್ತಾರೆ. ಕಾಂಗ್ರೆಸ್ ಬೊಬ್ಬೆ ಹೊಡೆದಿದ್ದಕ್ಕೆ ರಾಜೀನಾಮೆ ನೀಡುತ್ತಿದ್ದಾರೆ. ಡಿಕೆಶಿ ಇಂತಹದ್ದಕ್ಕಾಗಿ ಕಾಯುತ್ತಿದ್ದರು. ಸಣ್ಣಪುಟ್ಟ ವಿಚಾರದಲ್ಲಿ ರಾಜಕೀಯ ಲಾಭಕ್ಕೆ ಪ್ರಯತ್ನಿಸುತ್ತಿದ್ದಾರೆ. 40% ಕಮಿಷನ್ ಕೇವಲ ಆರೋಪವಷ್ಟೇ, ಅದರಲ್ಲಿ ಸತ್ಯಾಂಶವಿಲ್ಲ ಎಂದು ಯಡಿಯೂರಪ್ಪ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

TV9 Kannada


Leave a Reply

Your email address will not be published.