ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದ ಹಸೂಡಿ ಗ್ರಾಮ ಪಂಚಾಯಿತಿ ಮಟ್ಟದ ಕಾರ್ಯಪಡೆ ಸಭೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಮನೆ ಮನೆಗೆ ತೆರಳಿ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ ಎಂದು ಪಿಡಿಒ ವಿವರಣೆ ನೀಡುತ್ತಿದ್ದರು. ಈ ವೇಳೆ ಸ್ಥಳದಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮದ ಮಹಿಳೆ ಮೀನಮ್ಮ.. ಸಚಿವರ ಎದುರು ಸುಳ್ಳು ಮಾಹಿತಿ ನೀಡುತ್ತಿದ್ದೀರಾ ಎಂದು ಆರೋಪ ಹೊರಿಸಿದ್ದಾರೆ.

ಸ್ಯಾನಿಟೈಸೇಷನ್ ಮಾಡದೇ ಮಾಡಿದ್ದೀವಿ ಎಂದು ಹೇಳುತ್ತಿದ್ದೀರಾ.. ಬರೀ ಫೋಟೊ ಹೊಡೆದು ಹಾಕಿದರೆ ಸಾಕೇ..? ಎಲ್ಲಿ ಸ್ಯಾನಿಟೈಸೇಷನ್ ಮಾಡಿದ್ದೀರಾ ಹೇಳಿ, ಸುಮ್ಮನೆ ಸುಳ್ಳು ಹೇಳುತ್ತೀರಾ ಅಷ್ಟೇ ಎಂದು ಸಚಿವರ ಎದುರೇ ಪಿಡಿಒರನ್ನು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಮಧ್ಯೆ ಪ್ರವೇಶಿಸಿದ ಸಚಿವ ಈಶ್ವರಪ್ಪ ಆಯ್ತು ಸುಮ್ಮನಿರಮ್ಮ ನಾನು ಕೇಳುತ್ತೇನೆ, ನೀನೆ ಮಾತನಾಡಿದರೆ ಹೇಗೆ ಎಂದು ಮಹಿಳೆಯನ್ನು ಸಮಾಧಾನಪಡಿಸಿದ್ದಾರೆ. ಆದರೂ ಪಿಡಿಒ ವಿರುದ್ಧ ಮೀನಮ್ಮ ಹರಿಹಾಯ್ದಿದ್ದಾರೆ. ಕೊನೆಗೂ ಮಹಿಳೆಯನ್ನು ಸಮಾಧಾನಪಡಿಸುವಲ್ಲಿ ಈಶ್ವರಪ್ಪ ಯಶಸ್ವಿಯಾಗಿದ್ದು ನಂತರ ಸಭೆಯಿಂದ ಹೊರಗೆ ಕಳುಹಿಸಲಾಗಿದೆ. ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ, ಜಿಲ್ಲಾ ಪಂಚಾಯಿತಿ ಸಿಇಒ ವೈಶಾಲಿ ಮತ್ತಿತರ ಅಧಿಕಾರಿಗಳ ಸಮ್ಮುಖದಲ್ಲೇ ಮಹಿಳೆ ಪಿಡಿಒವನ್ನು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ.

The post ಈಶ್ವರಪ್ಪ ಎದುರೇ ಪಿಡಿಓಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಮಹಿಳೆ.. ನಡೆದಿದ್ದೇನು..? appeared first on News First Kannada.

Source: newsfirstlive.com

Source link