ಬೆಂಗಳೂರು; ಮನಸ್ಮೃತಿ ಆಚರಣೆಯಲ್ಲಿ ಇದ್ದಿದ್ದರೆ ಸಚಿವ ಕೆ.ಎಸ್ ಈಶ್ವರಪ್ಪ ಕುರಿ ಕಾಯಬೇಕಿತ್ತಷ್ಟೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಸದನದ ಬಳಿಕ ಮಾಧ್ಯಮಗೋಷ್ಠಿ ಆಯೋಜಿಸಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಇವತ್ತು ಸದನದಲ್ಲಿ ಉಂಟಾದ ಗಲಾಟೆಗೆ ಕಾರಣ ಬಿಜೆಪಿ ಎಂದು ಆರೋಪಿಸಿದರು. ಬಿಜೆಪಿಯವರು ಆರ್ಎಸ್ಎಸ್ನವರ ಗುಲಾಮರಾಗಿದ್ದಾರೆ. ಹೀಗೆ ಮಾಡಿ ಅಂತಾ ಆರ್ಎಸ್ಎಸ್ ನವರೇ ಹೇಳಿಸಿರಬಹುದು. ಪಾಪ ಈಶ್ವರಪ್ಪ ಅವರಿಗೆ ಗೊತ್ತಿಲ್ಲ. ಅವರು ಹೀಗೆ ಮುಂದುವರೆದ್ರೆ ಕುರಿ ಕಾಯಬೇಕಷ್ಟೇ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.