ಕೊಪ್ಪಳ: ಜೂನ್ 7 ರಂದು ಶಾಸಕಾಂಗ ಸಭೆಯ ಬಗ್ಗೆ ನನಗೆ ಗೊತ್ತಿಲ್ಲ. ಕೊರೊನಾ ವಿಷಯವಾಗಿ ಸಭೆ ನಡೆಸಬಹುದು. ಈ ಅವಧಿ ಪೂರ್ಣ ಯಡಿಯೂರಪ್ಪ ಸಿಎಂ ಆಗಿರುತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಆಶ್ಲೀಲ ಸಿಡಿ ಪ್ರಕರಣದ ಬಗ್ಗೆ ಅವರೇ ಒಪ್ಪಿಕೊಂಡಿದ್ದಾರೆ ಎಂದು ಮಾಧ್ಯಮದಲ್ಲಿ ಬಂದಿದೆ. ಈಗ ತನಿಖೆಯಾಗುತ್ತಿದೆ. ಈ ಬಗ್ಗೆ ಈಗ ಏನು ಹೇಳುವುದಿಲ್ಲ ಪಾಟೀಲ್ ಅಂದ್ರು.

ಲಾಕ್‍ಡೌನ್ ನಂತರ ಕೊಪ್ಪಳ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಕೊರೊನಾ ಸೋಂಕಿತರ ಪಾಸಿಟಿವಿಟಿ ದರ ಹಾಗು ಸಾವಿನ ಪ್ರಕರಣಗಳು ಕಡಿಮೆಯಾಗಿವೆ. ನಾವು ತೆಗೆದುಕೊಂಡು ಕಠಿಣ ಕ್ರಮದಿಂದ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ಮದುವೆಗಳನ್ನು ನಿರ್ಬಂಧಿಸಲಾಗಿದೆ. ಇಲ್ಲಿಯ ಕಠಿಣ ಕ್ರಮವನ್ನು ಬೇರೆ ಜಿಲ್ಲೆಯವರು ಅನುಸರಿಸುತ್ತಿದ್ದಾರೆ. ಹೋಂ ಐಸೋಲೇಷನ್ ನಲ್ಲಿರುವ 1000 ಕ್ಕೂ ಅಧಿಕ ಜನರನ್ನು ಈಗ ಕೋವಿಡ್ ಸೆಂಟರ್ ಗೆ ಸೇರಿಸಲಾಗಿದೆ. ಮೇ 24ರಂದು ಕೊಪ್ಪಳ ನಗರಸಭೆ ಇಂಜನೀಯರ್ ಗಳ ಅದ್ಧೂರಿ ಮದುವೆ ಬಗ್ಗೆ ಪರಿಶೀಲಿಸಲಾಗುವುದು. ಯಾರೇ ಆಗಲಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

The post ಈ ಅವಧಿ ಪೂರ್ಣ ಯಡಿಯೂರಪ್ಪ ಸಿಎಂ ಆಗಿರ್ತಾರೆ: ಬಿ.ಸಿ.ಪಾಟೀಲ್ appeared first on Public TV.

Source: publictv.in

Source link