ನಮ್ಮ ಭಾರತೀಯ ಸಂಸ್ಕೃತಿಗೆ ಮನಸೋಲದವಱರಿದ್ದಾರೆ. ಅದರಲ್ಲೂ ನಮ್ಮ ಕನ್ನಡ ನಾಡು ಕನ್ನಡ ಭಾಷೆ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಎಲ್ಲಿಯ ದಕ್ಷಿಣ ಕೊರಿಯಾ ಎಲ್ಲಿಯ ನಮ್ಮ ಕರ್ನಾಟಕ. ಹತ್ತ್ ಹತ್ರ 5,000 ಕಿಲೋಮೀಟರ್ ಕರ್ನಾಟಕಕ್ಕೂ ದಕ್ಷಿಣ ಕೊರಿಯಾ ಅಂತರವಿದೆ. ಆದ್ರೆ ಈ ಕೊರಿಯನ್ ಕ್ಯೂಟ್ ಗರ್ಲ್​​​ಗೂ ಕನ್ನಡದ ಮೇಲಿಯನ ಅಭಿಮಾನಕ್ಕೂ ಯಾವುದೇ ಡಿಸ್ಟೆನ್ಸ್ ಇಲ್ಲ.

ನೀನಾದೆ ನಾ, ನೀನಾದೆ ನಾ.. ಇದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಸಿನಿಮಾದ ಬ್ಯೂಟಿಫುಲ್ ಮೆಲೋಡಿ ಸಾಂಗ್. ಈ ಹಾಡಿಗೆ ಈಗಾಗಲೇ ಚಿತ್ರಪ್ರೇಮಿಗಳು ತಲೆದೂಗಿದ್ದಾರೆ. ಈಗ ದಕ್ಷಿಣ ಕೊರಿಯಾದ ಈ ಕುವರಿಯ ಸರದಿ.

ಈಕೆಯ ಹೆಸರು ಪ್ಯಾರಿ ಜಿವೋನ್.. ಈಕೆಯ ಮೆದುಳು ಕೊರಿಯಾ ದೇಶದ್ದಾಗಿದ್ದರೂ ಈಕೆಯ ಮನಸ್ಸು ನಮ್ಮ ಭಾರತ ದೇಶದ್ದು. ಕಾರಣ ಪ್ಯಾರಿ ಜಿವೋನ್​​​ಗೆ ಭಾರತೀಯ ಸಂಸ್ಕೃತಿ ಪರಂಪರೆಯ ಮೇಲೆ ಭಾರೀ ಅಭಿಮಾನ. ನಮ್ಮ ದೇಶದ ಆಚಾರ ವಿಚಾರದ ಜೊತೆಗೆ ಆಹಾರ ಹಾಗೂ ಇಂಡಿಯನ್ ಸಿನಿಮಾಗಳೆಂದ್ರೆ ಬಲು ಪ್ರೀತಿ.

ಸೋಶಿಯಲ್ ಮೀಡಿಯಾದಲ್ಲಿ ಇಂಡಿಯನ್ ಡ್ರೆಸ್​ಗಳನ್ನ ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಡ್ತಾರೆ ದಕ್ಷಿಣ ಕೊರಿಯಾ ಮೂಲಕ ಪ್ಯಾರಿ ಜಿವೋನ್.

ನಮ್ಮ ಕನ್ನಡಿಗರಿಗೆ ಅದರಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಸೌಥ್ ಕೊರಿಯಾದ ಪ್ಯಾರಿ ಜಿವೋನ್ ಮೆಲೆ ಸಖತ್ ಅಭಿಮಾನ ಉಂಟಾಗಲು ಕಾರಣ ನೀನಾದೆ ನಾ ಹಾಡು. ಯುವರತ್ನ ಸಿನಿಮಾದ ನೀನಾದೆ ನಾ ಹಾಡನ್ನ ಅದ್ಭುತವಾಗಿ ಹಾಡಿ ಯೂಟ್ಯೂಬ್ ಲೋಕದಲ್ಲಿ ತೆಲಿಬಿಟ್ಟಿದ್ದಾರೆ ಪ್ಯಾರಿ ಜಿವೋನ್..

ಈ ಮುಂಚೆ ಮುಂಗಾರು ಮಳೆ 2 ಚಿತ್ರದ ಸರಿಯಾಗಿ ನೆನಪಿದೆ ನನಗೆ ಹಾಡನ್ನ ಹಾಡಿ ಪೇಮಸ್ ಆಗಿದ್ದರು ಈ ಕೊರಿಯನ್ ಕ್ಯೂಟಿ. ಈಗ ಅಪ್ಪು ಅವರ ಯುವರನ್ನ ಚಿತ್ರ ಹಾಡನ್ನ ಹಾಡುವುದ್ರ ಮೂಲಕ ಕನ್ನಡಿಗರಿಗೆ ಹತ್ತಿರವಾಗುತ್ತಿದ್ದಾರೆ ದಕ್ಷಿಣ ಕೊರಿಯಾದ ಪ್ಯಾರಿ ಜಿವೋನ್. ಈ ರೀತಿಯ ಹೊರ ದೇಶದ ಜನರ ಕನ್ನಡದ ಅಭಿಮಾನಕ್ಕೆ ನಿಮ್ಮ ಮೆಚ್ಚುಗೆ ಇರ್ಲಿ.

The post ಈ ಕ್ಯೂಟ್ ಗರ್ಲ್​ಗೆ​​​ ಅಪ್ಪು ಮೇಲೆ ಲವ್..! ಈಕೆಯ ದೇಶ ಕೊರಿಯಾ.. ಮನಸು ಕರ್ನಾಟಕ appeared first on News First Kannada.

Source: newsfirstlive.com

Source link