ಕೊಪ್ಪಳ: ಜನರನ್ನ ಕೊರೊನಾ ಟೆಸ್ಟ್​​ಗೆ ಒಳಪಡುವಂತೆ ಪ್ರೇರೇಪಿಸಲು ಇಲ್ಲೊಂದು ಗ್ರಾಮದಲ್ಲಿ ಪ್ರೋತ್ಸಾಹ ಧನ ನೀಡಲಾಗ್ತಿದೆ.

ಕೊಪ್ಪಳ ಜಿಲ್ಲೆ ಗಂಗಾವತಿಯ ಕೇಸರಹಟ್ಟಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಹಳ್ಳಿ ಪ್ರೋತ್ಸಾಹ ಧನ ಘೋಷಣೆ ಮಾಡಿದ್ದಾರೆ. ಅಲ್ಲದೆ ಸ್ವತಃ ಮನೆ-ಮನೆಗೆ ತೆರಳಿ, ಕೋವಿಡ್ ಟೆಸ್ಟ್ ‌ಮಾಡಿಸುವಂತೆ ಜನರಿಗೆ ಮನವಿ ಮಾಡ್ತಿದ್ದಾರೆ. ಟೆಸ್ಟ್​ ಮಾಡಿಸಲು ನೆಪ ಹೇಳಿದವರಿಗೆ ಒಂದು ದಿನದ ಕೂಲಿ ನೀಡುವ ಭರವಸೆ ಕೊಟ್ಟಿದ್ದಾರೆ. ಜ್ವರ, ಕೆಮ್ಮು, ನೆಗಡಿಯಂಥ ರೋಗ ಲಕ್ಷಣ‌ ಇದ್ದರೆ ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ಬಸವರಾಜ ಅವರು ಕೇಳಿಕೊಂಡಿದ್ದಾರೆ.

ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಸೂಚನೆ ಮೇರೆಗೆ ಕೊರೊನಾ ತಡೆಗೆ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು ಕೈಜೊಡಿಸಲು ಡಿಸಿ ಮನವಿ ಮಾಡಿದ್ದರು. ಈ ಹಿನ್ನೆಲೆ ಬಸವರಾಜ ಅವರು ಈ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅವರಿಗೆ ತಾಲೂಕು ಪಂಚಾಯ್ತಿ ಇಓ, ಗ್ರಾ.ಪಂ ಸದಸ್ಯರು ಹಾಗೂ ರೈತ ಮುಖಂಡರು ಸಾಥ್ ನೀಡಿದ್ದಾರೆ.

The post ಈ ಗ್ರಾಮದಲ್ಲಿ ಕೊರೊನಾ ಟೆಸ್ಟ್ ಮಾಡಿಸಿದ್ರೆ ₹500 ಪ್ರೋತ್ಸಾಹ ಧನ appeared first on News First Kannada.

Source: newsfirstlive.com

Source link