‘ಈ ಚಿತ್ರ ಮಿಸ್ ಮಾಡಿಕೊಳ್ಳಬೇಡಿ’; ರಶ್ಮಿಕಾ ಮಂದಣ್ಣ ನಟನೆಯ ‘ಸೀತಾ ರಾಮಂ’ ಚಿತ್ರಕ್ಕೆ ಸಿಕ್ತು ಉತ್ತಮ ವಿಮರ್ಶೆ | Sita Ramam Movie Review Rashmika Mandanna Starrer New Movie Get Good Review on Twitter


Sita Ramam Movie Twitter Review‘ಸೀತಾ ರಾಮಂ’ ಚಿತ್ರ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಎರಡು ಕಾಲಘಟ್ಟಗಳಲ್ಲಿ ಸಿನಿಮಾ ಸಾಗಲಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷ್ಯ ಸಿಕ್ಕಿತು. ಈ ಚಿತ್ರದಲ್ಲಿ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.

‘ಈ ಚಿತ್ರ ಮಿಸ್ ಮಾಡಿಕೊಳ್ಳಬೇಡಿ’; ರಶ್ಮಿಕಾ ಮಂದಣ್ಣ ನಟನೆಯ ‘ಸೀತಾ ರಾಮಂ’ ಚಿತ್ರಕ್ಕೆ ಸಿಕ್ತು ಉತ್ತಮ ವಿಮರ್ಶೆ

‘ಸೀತಾ ರಾಮಂ’ ಚಿತ್ರಕ್ಕೆ ಉತ್ತಮ ವಿಮರ್ಶೆ

ರಶ್ಮಿಕಾ ಮಂದಣ್ಣ (Rashmika Mandanna), ದುಲ್ಕರ್ ಸಲ್ಮಾನ್, ಮೃಣಾಲ್ ಠಾಕೂರ್ ನಟನೆಯ ‘ಸೀತಾ ರಾಮಂ’ ಚಿತ್ರ (Sita Ramam) ಇಂದು (ಆಗಸ್ಟ್ 5) ರಿಲೀಸ್ ಆಗಿದೆ. ಮೊದಲ ದಿನ ಯಾವ ರೀತಿಯ ವಿಮರ್ಶೆ ಪಡೆದುಕೊಳ್ಳುತ್ತದೆ ಎಂಬುದರ ಆಧಾರದ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗುತ್ತದೆ. ಅದೇ ರೀತಿ ‘ಸೀತಾ ರಾಮಂ’ ಚಿತ್ರ ಮೊದಲ ದಿನದ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಚಿತ್ರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಚಿತ್ರ ನೋಡಿದವರು ‘ಈ ಚಿತ್ರವನ್ನು ಮಿಸ್ ಮಾಡಿಕೊಳ್ಳಬೇಡಿ’ ಎಂದು ಬರೆದುಕೊಂಡಿದ್ದಾರೆ. ಈ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.

‘ಸೀತಾ ರಾಮಂ’ ಚಿತ್ರ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಎರಡು ಕಾಲಘಟ್ಟಗಳಲ್ಲಿ ಸಿನಿಮಾ ಸಾಗಲಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸಾಕ್ಷ್ಯ ಸಿಕ್ಕಿತು. ಈ ಚಿತ್ರದಲ್ಲಿ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಅವರ ನಟನೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ದುಲ್ಕರ್ ಸಲ್ಮಾನ್ ಅವರು ಸೇನಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿರುವುದು ಚಿತ್ರತಂಡದ ಖುಷಿ ಹೆಚ್ಚಿಸಿದೆ.

‘ಸೀತಾ ರಾಮಂ ಅದ್ಭುತ ಸಿನಿಮಾ. ದುಲ್ಕರ್ ಹಾಗೂ ಮೃಣಾಲ್ ಇಡೀ ಸಿನಿಮಾ ಆವರಿಸಿಕೊಂಡಿದ್ದಾರೆ. ಕೊನೆಯಲ್ಲಿ ಸಾಕಷ್ಟು ಎಮೋಷನ್ ಇದೆ. ಸಿನಿಮಾ ಎರಡನೇ ಬಾರಿ ನೋಡಿದರೂ ತಪ್ಪಿಲ್ಲ’ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ‘ಇತ್ತೀಚಿನ ವರ್ಷಗಳಲ್ಲಿ ನೋಡಿದ ಒಂದೊಳ್ಳೆಯ ಲವ್​​ಸ್ಟೋರಿ ಸಿನಿಮಾಗಳಲ್ಲಿ ಸೀತಾ ರಾಮಂ ಕೂಡ ಒಂದು. ಹನು ರಾಘವಪುಡಿ ಅವರೇ ಒಂದೊಳ್ಳೆಯ ಹಿಟ್​ ಕೊಟ್ಟಿದ್ದೀರಿ’ ಎಂದು ಕೆಲವರು ಬರೆದುಕೊಂಡಿದ್ದಾರೆ.

TV9 Kannada


Leave a Reply

Your email address will not be published. Required fields are marked *