ದೇಶದಲ್ಲೇ ಅತಿ ಹೆಚ್ಚು ಕೇಸ್ ಬರ್ತಾ ಇರುವ ರಾಜ್ಯ ಮಹಾರಾಷ್ಟ್ರ. ಮಹಾರಾಷ್ಟ್ರದ ಒಂದು ಜಿಲ್ಲೆಯನ್ನು ಹೆಚ್ಚು ಕಡಿಮೆ ಕೊರೊನಾಮುಕ್ತ ಮಾಡುವಲ್ಲಿ ಅಲ್ಲಿನ ಜಿಲ್ಲಾಧಿಕಾರಿಯೊಬ್ಬರು ಯಶಸ್ವಿಯಾಗಿದ್ದಾರೆ. ಅವರು ಹೇಗೆ ಕೊರೊನಾ ಕಂಟ್ರೋಲ್ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ನೋಡೋಣ ಬನ್ನಿ.

ಮಹಾರಾಷ್ಟ್ರ ಕೊರೊನಾದಿಂದ ತತ್ತರಿಸಿ ಹೋಗಿದೆ. ಕೊರೊನಾ ಕಂಟ್ರೋಲ್ ಮಾಡಲು ಹೆಚ್ಚು ಕಡಿಮೆ ಮಹಾರಾಷ್ಟ್ರವನ್ನು ಬಂದ್ ಮಾಡಲಾಗಿದೆ. ಕರ್ಫ್ಯೂ ವಿಧಿಸಿ ಎಲ್ಲಾ ಚಟುವಟಿಕೆಗಳಿಗೂ ನಿರ್ಬಂಧ ಹೇರಲಾಗಿದೆ. ಈಗ ಮುಂಬೈನಲ್ಲಿ ಕೇಸ್ ಗಳು ಕಡಿಮೆ ಆಗ್ತಾ ಇದ್ದು, ಮಹಾರಾಷ್ಟ್ರದ ಬೇರೆ ಬೇರೆ ಜಿಲ್ಲೆಗಳಲ್ಲಿ ಹೆಚ್ಚಾಗ್ತಾ ಇದೆ. ಕಾರಣ,ನಗರ ಪ್ರದೇಶಗಳಿಂದ ಗ್ರಾಮೀಣ ಪ್ರದೇಶಕ್ಕೆ ಜನ ವಲಸೆ ಹೋಗಿದ್ದು. ಹೋಗುವಾಗ ಸೋಂಕನ್ನೂ ಹೊತ್ತು ಸಾಗಿದ್ದು.. ಆದರೆ ಮಹಾರಾಷ್ಟ್ರದ ಈ ಒಂದು ಜಿಲ್ಲೆಯಲ್ಲಿ ಮಾತ್ರ ದೊಡ್ಡ ಮಟ್ಟದಲ್ಲಿ ಹರಡುತ್ತಿದ್ದ ಸೋಂಕನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಪರಿಸ್ಥಿತಿಯನ್ನು ಹತೋಟಿಗೆ ತಂದು ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

ಈ ಜಿಲ್ಲಾಧಿಕಾರಿ ಕೊರೊನಾ ಕಂಟ್ರೋಲ್ ಗೆ ಏನು ಮಾಡಿದ್ರು?
ಡಾ.ರಾಜೇಂದ್ರ ಭರೂದ್ ಎನ್ನುವವರೂ ಪ್ರಸ್ತುತ ನಂದೂರ್‌ಬಾರ್ ಜಿಲ್ಲಾಧಿಕಾರಿಯಾಗಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಜೀವನವೆ ಒಂದು ರೋಚಕ ಕಥೆಯನ್ನು ಹೇಳುತ್ತದೆ. ಈತ ಇದೆ ನಂದೂರ್​ಬಾರ್ ಜಿಲ್ಲೆಯ ಸಣ್ಣ ಗ್ರಾಮ ಒಂದರಲ್ಲಿ ಗುಡಿಸಲಿನಲ್ಲಿ ವಾಸವಾಗಿದ್ದ ಬುಡಕಟ್ಟು ಜನಾಂಗಕ್ಕೆ ಸೇರಿದ ಹುಡುಗ. ತನ್ನ ಸಣ್ಣ ವಯಸ್ಸಿನಲ್ಲೆ ತಂದೆಯನ್ನು ಕಳೆದುಕೊಂಡ ಇವರು ತಾಯಿಯ ಜೊತೆ ದೊಡ್ಡ ದೊಡ್ದ ಕನಸುಗಳನ್ನು ಹೊತ್ತಿದವರು. ಶಾಲೆಯಲ್ಲಿ ಸಿಗುತ್ತಿದ್ದ ಮೆರಿಟ್ ಸ್ಕಾಲರ್ಶಿಪ್ ನಿಂದಲೆ ತನ್ನ ವೈದ್ಯಕೀಯ ಅಭ್ಯಾಸವನ್ನು ಮುಗಿಸಿ, ತನ್ನ ಊರಿನ ಸುಧಾರಣೆಗಾಗಿ ಐಎಎಸ್ ಅಧಿಕಾರಿಯಾಗಿ ಹೊರಬಂದವರು. ಇದೀಗ ಕೋವಿಡ್ ಸಂಧರ್ಭದಲ್ಲಿ ತಮ್ಮ ಸ್ವಗ್ರಾಮ ನಂದೂರ್‌ಬಾರ್ ಜಿಲ್ಲೆಯ ಅಧಿಕಾರಿಯಾಗಿ ಅಲ್ಲಿನ ಪರಿಸ್ಥಿತಿಯನ್ನು ಹತೋಟಿಕೆ ತಂದಿದ್ದಾರೆ. ತಾವು ನಡೆದು ಬಂದ ದಾರಿಯನ್ನು ಮರೆಯದೇ ಗ್ರೌಂಡ್ ವರ್ಕ್ ಮಾಡಿ ಕೊರೊನಾ ಕಂಟ್ರೋಲ್ ಮಾಡಿದ್ದಾರೆ.

ಜಿಲ್ಲಾಧಿಕಾರಿ ಹತ್ತಿರ ಇತ್ತು ಎಲ್ಲರಿಗೂ ಮಾದರಿ ಆಗುವ ಪ್ಲಾನ್
ಇಡೀ ಮಹಾರಾಷ್ಟ್ರ ತತ್ತರಿಸಿ ಹೋಗಿದ್ದಾಗ ಈ ಒಂದು ಜಿಲ್ಲೆಯಲ್ಲಿ ಮಾತ್ರ 24 ಗಂಟೆಗಳಲ್ಲಿ ಒಬ್ಬ ಸೋಂಕಿತನೂ ವರದಿ ಆಗದೆ ಇರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದು ಹೇಗೆ ಸಾಧ್ಯಾ ? ನಿಯಂತ್ರಣಕ್ಕೆ ಹೇಗೆ ತಂದರು ಎಂದರೆ, ಇದು ಕೇವಲ ಡಾ.ರಾಜೇಂದ್ರ ಭರೂದ್ ರವರ ಮುನ್ನಚ್ಚರಿಕೆ ಪ್ಲಾನ್. ರಾಜೇಂದ್ರ ರವರು ಡಿಸಿ ಆಗಿ ನಂದೂರ್ ಬಾರ್ ನಲ್ಲಿ ಸೇವೆಗೆ ಸೇರಿದ ಹೊಸದರಲ್ಲೆ ವಿಶ್ವಕ್ಕೆ ಕೊರೊನಾ ಕಂಟಕ ಎದುರಾಗಿತ್ತು. ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಪರಿಗಣಿಸಿದ ಇವರು, ಆ ಜಿಲ್ಲೆಯಲ್ಲಿ ಯಾವುದೆ ತೊಂದರೆ ಆಗದಂತೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದರು.

2020 ರ ಸೆಪ್ಟೆಂಬರ್‌ ಹೊತ್ತಿಗಾಗಲೆ ಕೋವಿಡ್ -19 ಪ್ರಕರಣಗಳು ಕ್ಷೀಣಿಸಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ನಂದೂರ್‌ಬಾರ್ ಕಲೆಕ್ಟರ್ ಡಾ.ರಾಜೇಂದ್ರ ಭರೂದ್ ಅವರು ಜಿಲ್ಲೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಸ್ಥಾವರವನ್ನು ಸ್ಥಾಪಿಸಲು ಮುಂದಾದರು. ಆ ಕ್ಷಣದಲ್ಲಿ ಸಾಂಕ್ರಾಮಿಕ ಹಿನ್ನೆಲೆ ಜಿಲ್ಲೆಯಲ್ಲಿ 190 ರೋಗಿಗಳಿದ್ದರು. ಈ ಪರಿಸ್ಥಿತಿಯನ್ನು ಅರಿತ ಅವರು, ಪ್ರಕರಣಗಳು ಮತ್ತೊಮ್ಮೆ ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ತಮ್ಮಲ್ಲಿ ಆಮ್ಲಜನಕ ಸ್ಥಾವರ ಅಗತ್ಯ ಬರಬಹುದು ಎಂದು ಅಂದಾಜಿಸಿದ್ದರು. ಅದರಂತೆ ಆ ಜಿಲ್ಲೆಯಲ್ಲಿ ನಿಮಿಷಕ್ಕೆ 600 ಲೀಟರ್ ಸಾಮರ್ಥ್ಯದ ಸ್ಥಾವರವನ್ನು ಸ್ಥಾಪಿಸಿದ್ದಾರೆ. ಅಂದು ಅವರ ಮುಂದಾಲೋಚನೆಗೆ ಇಂದು ಆ ಜಿಲ್ಲೆ ಸಂಪೂರ್ಣ ಸೇಫ್ ಆಗಿದೆ.

ಎರಡನೆ ಅಲೆ ಅಪ್ಪಳಿಸಿದಾಗಲೂ ಡಿಸಿ ಹೊಸ ಪ್ಲಾನ್
ಕೋವಿಡ್ ಎರಡನೇ ಅಲೆಯ ದೇಶಕ್ಕೆ ಅಪ್ಪಳಿಸಿದ ನಂತರ ನಂದೂರ್‌ಬಾರ್ ಜಿಲ್ಲೆಯಲ್ಲಿ ಏಕಾಏಕಿ 1210 ಪ್ರಕರಣಗಳು ದಾಖಲಾದವು. ಆದರೆ ರಾಜೇಂದ್ರ ಅವರ ಪ್ಲಾನ್ ಪ್ರಕಾರ ಎಲ್ಲ ಸರಿಸಮವಾಗಿ ನಡೆಯ ತೊಡಗಿತು. ಜಿಲ್ಲೆಯ ಎಲ್ಲ ಸೋಂಕಿತರಿಗೆ ಬೆಡ್, ಆಕ್ಸಿಜನ್ ಕೊರತೆ ಆಗಿರಲಿಲ್ಲ. ಆದರೆ ಎರಡನೆ ಅಲೆ ತೀವ್ರ ಗತಿಗೆ ಏರುತ್ತಿದ್ದಾಗ, ಜಿಲ್ಲೆಯಲ್ಲಿ ಇರುವ ಆಕ್ಸಿಜನ್ ಪ್ಲಾಂಟ್ ಸಾಲದು ಎನ್ನುವುದು ಅರಿತ ಡಿಸಿ, ಮತ್ತೊಂದು ಯೋಚನೆ ಮಾಡದೆ ಜಿಲ್ಲೆಯಲ್ಲಿದ್ದ ನ್ಯಾಚುರಲ್ ಡಿಸಾಸ್ಟರ್ ಫಂಡ್ಸ್, ಜಿಲ್ಲಾ ಯೋಜನೆ ಮತ್ತು ಅಭಿವೃದ್ಧಿ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಯಲ್ಲಿ ಇದ್ದ ಹಣವನ್ನು ಬಳಸಿ ಇನ್ನಷ್ಟು ಪ್ಲಾಂಟ್ ಗಳನ್ನು ಸ್ಥಾಪಿಸಿದ್ದಾರೆ.

ನಿಮಿಷಕ್ಕೆ 3000 ಲೀಟರ್ ಆಕ್ಸಿಜನ್ ತೆಗೆಯುವ ಪ್ಲಾಂಟ್
85 ಲಕ್ಷ ರೂಪಾಯಿ ವೆಚ್ಚದಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆ

ಇದೀಗ ನಂದೂರ್‌ಬಾರ್ ಜಿಲ್ಲೆಯಲ್ಲಿ ಹಲವು ಪ್ಲಾಂಟ್ ಗಳನ್ನು ನಿರ್ಮಿಸಲಾಗಿದೆ. ಈ ಪ್ಲಾಂಟ್ ನಿಂದಾಗಿ ನಿಮಿಷಕ್ಕೆ 3000 ಲೀಟರ್ ಗಳ ಆಕ್ಸಿಜನ್ ತಯಾರಿಕೆ ಆಗುತ್ತಿದೆ . ಜೊತೆಗೆ ಅಲ್ಲಿನ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಆಕ್ಸಿಜನ್ ತೊಂದರೆ ಆಗಿಲ್ಲ ಎನ್ನುವುದು ಅಲ್ಲಿನ ಜನ ಸಂತಸ ವ್ಯಕ್ತ ಪಡಿಸಿದ್ದಾರೆ. ಇನ್ನು ಒಂದು ಪ್ಲಾಂಟ್ ನ ನಿರ್ಮಾಣ ಬರೋಬರಿ 85 ಲಕ್ಷ ರೂಪಾಯನ್ನು ವೆಚ್ಚ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಇವರ ಈ ಯೋಚನೆಗೆ ನಂದೂರ್‌ಬಾರ್ ಜಿಲ್ಲೆಯ ಜನ ಯಾವುದೆ ಭಯವಿಲ್ಲದೆ ನೆಮ್ಮದಿಯಿಂದ ಇದ್ದಾರೆ.

ಕಳೆದ 24 ಗಂಟೆಗಳಲ್ಲಿ ಒಂದು ಕೇಸ್ ದಾಖಲಾಗಿಲ್ಲ
ಸೋಂಕಿತರಿಗೆ ಎಲ್ಲ ಸೌಕರ್ಯ ಒದಗಿಸಿರುವ ಡಿಸಿ

ಆಕ್ಸಿಜನ್ ಸಮಸ್ಯ ಒಂದನ್ನು ಮಾತ್ರ ಇವರು ಪರಿಗಣಿಸಿಲ್ಲ. ಜಿಲ್ಲೆಯ ಜನರು ಸುರಕ್ಷಿತವಾಗಿರಲು ಎಲ್ಲ ರೀತಿ ಮುನ್ನೆಚ್ಚರಿಕೆ ವಹಿಸಿದ್ದಾರೆ. ಇದರಿಂದ ಕಳೆದ 24 ಗಂಟೆಗಲ್ಲಿ ಒಂದು ಪ್ರಕರಣಗಳು ನಂದೂರ್‌ಬಾರ್ ಜಿಲ್ಲೆಯಲ್ಲಿ ದಾಖಲಾಗಿಲ್ಲ. ಈ ಗೆಲುವಿನಿಂದ ನೆಮ್ಮದೆಯಾಗದೆ ರಾಜೇಂದ್ರರವರು ಮುಂದೆ ಆಗಬಹುದಾದ ತೊಂದರೆಗಳನ್ನು ಗ್ರಹಿಸಿ ವೈದ್ಯಕೀಯ ಮನ್ನೆಚ್ಚರಿಕೆಗಳನ್ನು ಈಗಾಗಲೆ ತೆಗೆದುಕೊಂಡಿದ್ದಾರೆ. ಅಲ್ಲದೆ ತಮ್ಮ ಸುತ್ತ ಮುತ್ತಲಿನ ಜಿಲ್ಲೆಗಳಿಗೆ ಅಗತ್ಯ ಆಕ್ಸಿಜನ್ ಕಲ್ಪಿಸಲು ಡಾ. ರಾಜೇಂದ್ರ ಮುಂದಾಗಿದ್ದಾರೆ.

ಇಷ್ಟೆ ಅಲ್ಲದೆ ನಂದೂರ್​ಬಾರ್ ಜಿಲ್ಲೆಯ ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಿಸಲು ಪಣ ತೊಟ್ಟಿರುವ ಇವರು, ನಿಖರ ಪ್ಲಾನ್ ಜೊತೆಗೆ ಎಲ್ಲರೂ ಡ್ರೈವ್ ನಲ್ಲಿ ಭಾಗಿ ಆಗುವಂತೆ ನೋಡಿಕೊಳ್ಳುತ್ತಿದ್ದಾರೆ. ಇವರ ಯೋಚನೆ ಯೋಜನೆಗೆ ಜನರು ಸಾಥ್ ನೀಡುತ್ತಿದ್ದು, ಯಾವುದೆ ತಪ್ಪು ನಿರ್ಧಾರಗಳನ್ನು ಪಾಲಿಸದಂತೆ ಎಚ್ಚರಿಕೆ ನೀಡಿದ್ದಾರೆ. ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದರ ಬಗ್ಗೆ ಅರಿವೂ ಮೂಡಿಸಿ ಖುದ್ದಾಗಿ ಎಲ್ಲರನ್ನು ಪರಿಶೀಲಿಸುತ್ತಿದ್ದಾರೆ.

ಜಿಲ್ಲಾಧಿಕಾರಿಯವರೇ ಮುಂದಾಲೋಚನೆ ಮಾಡಿ ಖುದ್ದು ಆಸಕ್ತಿ ವಹಿಸಿ ಮಹಾರಾಷ್ಟ್ರದ ಈ ಜಿಲ್ಲೆಯ ಜನರನ್ನು ರಕ್ಷಣೆ ಮಾಡ್ತಾ ಇದಾರೆ. ಅಧಿಕಾರಿಗಳು ಮನಸ್ಸು ಮಾಡಿದ್ರೆ ,ರಾಜಕಾರಣಿಗಳು ಹಸ್ತಕ್ಷೇಪ ಮಾಡದಿದ್ರೆ ಈ ರೀತಿ ಮಾದರಿ ಕೆಲಸ ಮಾಡಬಹುದು ಅನ್ನೋದಕ್ಕೆ ಇವ್ರೇ ಉದಾಹರಣೆ.

 

The post ಈ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ 1 ಕೇಸ್ ಇಲ್ಲ: ಕೊರೊನಾ ಕಂಟ್ರೋಲ್ ಮಾಡಿ ಮಾದರಿಯಾದ ಡಿ.ಸಿ appeared first on News First Kannada.

Source: newsfirstlive.com

Source link