ಈ ಡೈಲಾಗ್​ ಹೊಡಿಯೋಕಾ ನಿಮ್ಮನ್ನ ಮಂತ್ರಿ ಮಾಡಿದ್ದು?; ಗೃಹ ಸಚಿವರಿಗೆ ಟಾಂಗ್​ ಕೊಟ್ಟ HDK


ಬೆಂಗಳೂರು: ಗೋ ಕಳ್ಳತನಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಚಿಕ್ಕಮಗಳೂರು ಪೊಲೀಸರಿಗೆ ನಾಯಿಗಳು ಎಂದು ಬೈದಿರುವ ಘಟನೆಗೆ ಮಾಜಿ ಸಿಎಂ ಹೆಚ್​.ಡಿ. ಕುಮಾರ​ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ನ್ಯೂಸ್​ಫಸ್ಟ್​ನೊಂದಿಗೆ ಮಾತನಾಡಿದ ಅವರು ಪೊಲೀಸರಿಗೆ ಆಕ್ರೋಶ ಭರಿತವಾಗಿ ಈ ರೀತಿಯಲ್ಲಿ ಬೈದಿರೋದು ಸರಿಯಲ್ಲ. ಇನ್ನು ಅವರು ಲಂಚ ತಿನ್ನುತ್ತಿದ್ದಾರೆ ಅಂದ್ರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಈ ರೀತಿ ಮಾಡಿದರೆ ಏನು ಪ್ರಯೋಜನ. ರಾಜ್ಯದಲ್ಲಿ 3 ವರ್ಷದಿಂದ ಅವರದ್ದೆ ಸರ್ಕಾರವಿದೆ. ಲಂಚ ತಿನ್ನೋರ ಮೇಲೆ ಕ್ರಮ ಕೈಗೊಳ್ಳಲಿ. ಅವರು ಹುದ್ದೆ ಪಡೆಯಬೇಕಾದ್ರೆ ಸಾಕಷ್ಟು ಹಣ ಕೊಟ್ಟು ಪಡೆದಿರುತ್ತಾರೆ. ಇದೀಗ ಲಂಚ ವಸೂಲಿಗೆ ಇಳಿದಿದ್ದಾರೆ ಅಷ್ಟೇ. ಈ ಡೈಲಾಗ್​​ಗಳನ್ನು ಹೊಡೆಯಲು ಅವರು ಪ್ರಮಾಣ ವಚನ ತೆಗೆದುಕೊಂಡಿದ್ದಾರಾ? ಎಂದು ಪ್ರಶ್ನಿಸಿದರು.

News First Live Kannada


Leave a Reply

Your email address will not be published. Required fields are marked *