ಗದಗ: ಹಿರಿಯರು ಹೇಳುವ ಒಂದು ಮಾತು ನಿಮಗೆ ನೆನಪಿರಬಹುದು.. ನೀರು, ಬೆಂಕಿಯ ಜೊತೆ ಎಂದಿಗೂ ಸರಸಕ್ಕೆ ಇಳಿಯಬಾರದು ಅಂತಾ.. ಆದ್ರೆ ಇಲ್ಲೊಬ್ಬ ಯುವಕ ಜಿದ್ದಿಗೆಬಿದ್ದು ಹೊಂಡದಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಬಿಂಕದಕಟ್ಟಿ ಬಳಿ ನಡೆದಿದೆ. ಗಂಗಿಮಡಿ ಕಾಲೋನಿಯ ನಿವಾಸಿ ಆಕಾಶ್ ಮೃತ ಯುವಕ.

ರೈಲ್ವೇ ಕಾಮಗಾರಿ ವೇಳೆ ಸುಮಾರು 30 ಅಡಿಯಷ್ಟು ಹೊಂಡ ತೆಗೆಯಲಾಗಿತ್ತು. ಹೀಗಾಗಿ ಅಲ್ಲಿ ಮಳೆ ನೀರು ನಿಂತು ಹೊಂಡವಾಗಿ ಪರಿವರ್ತನೆಯಾಗಿದೆ. ಹೀಗಾಗಿ ಅಲ್ಲಿ ಪ್ರತಿನಿತ್ಯ ಬಿಂಕದಕಟ್ಟಿ, ಗಂಗಿಮಡಿ, ಒಕ್ಕಲಿಗರ ಓಣಿ ಸೇರಿದಂತೆ ಸುತ್ತಮುತ್ತಲಿನ ಕಾಲೋನಿಯ ಯುವಕರು ಈಜಲು ಬರ್ತಾರೆ.

ಅದೇ ರೀತಿ ನಿನ್ನೆ ಸಾಯಂಕಾಲ ನಾಲ್ಕು ಜನ ಸ್ನೇಹಿತರ ಜೊತೆಗೆ ಆಕಾಶ್ ಈಜಲು ಹೋಗಿದ್ದ. ಈ ವೇಳೆ ಸ್ನೇಹಿತರೊಂದಿಗೆ ಒಂದು ದಡದಿಂದ ಇನ್ನೊಂದು ದಡ ತಲುಪುವಂತೆ ಈಜಲು ಸವಾಲು ಹಾಕಿದ್ದಾರೆ ಎನ್ನಲಾಗಿದೆ. ಈ ವೇಳೆ ಸವಾಲು ಸ್ವೀಕರಿಸಿದ ಆಕಾಶ್ ಈಜುವ ವೇಳೆ ನಡುವೆ ಕೈ ಸೋತು ಸುಸ್ತಾಗಿ ನೀರೊಳಗೆ ಹೋಗಿದ್ದಾನೆ. ಒಳಗೆ ಹೋದವನು ಮೇಲೆ ಬರಲೇ ಇಲ್ಲ.

ಕೆಳಗಡೆ ಕೆಸರು, ಮುಳ್ಳು ಇರುವುದರಿಂದ ಆತನ ಶವ ಮೇಲೆ ಕಾಣಿಸಿಕೊಂಡಿಲ್ಲ. ಸ್ಥಳಕ್ಕೆ ಗದಗ ಗ್ರಾಮೀಣ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಬೋಟ್ ಮೂಲಕ ಆತನ ಶವ ಹೊರ ತೆಗೆಯಲು ನಿನ್ನೆಯಿಂದ ಹುಡುಕಾಟ ನಡೆಸುತ್ತಿದ್ದಾರೆ.

The post ಈ ದಡದಿಂದ ಆ ದಡಕ್ಕೆ ಈಜುತ್ತೇನೆ ಅಂತಾ ನೀರಲ್ಲಿ ಮುಳುಗಿದವನು ಮೇಲೆ ಬರಲೇ ಇಲ್ಲ appeared first on News First Kannada.

Source: newsfirstlive.com

Source link